ಆನೇಕಲ್(ಜು. 23): ರಾಜ್ಯಾದ್ಯಂತ ಜಾರಿಯಲ್ಲಿದ್ದ ಲಾಕ್ಡೌನ್ ವಾರದ ಬಳಿಕ ತೆರವಾಗಿದೆ. ಬುಧವಾರದಿಂದಲೇ ಲಾಕ್ಡೌನ್ ಅನ್ಲಾಕ್ ಆಗಿದೆ. ಹಾಗಾಗಿ ತಮಿಳುನಾಡಿನಿಂದ ಸಾವಿರಾರು ಮಂದಿ ವಿವಿಧ ಉದ್ದೇಶಗಳಿಗೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಚೆಕ್ ಪೋಸ್ಟ್ ಮೂಲಕ ರಾಜ್ಯದತ್ತ ಆಗಮಿಸುತ್ತಿದ್ದಾರೆ.
ಹೌದು, ಹೆಚ್ಚಿನ ಸಂಖ್ಯೆಯಲ್ಲಿ ತಮಿಳುನಾಡು ಕಡೆಯಿಂದ ಜನ ಅತ್ತಿಬೆಲೆ ಚೆಕ್ ಪೋಸ್ಟ್ ಮೂಲಕ ರಾಜ್ಯದತ್ತ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಪೊಲೀಸರು ಸಹ ಪ್ರತಿಯೊಂದು ವಾಹನಗಳನ್ನು ಸಹ ಕಟ್ಟುನಿಟ್ಟಿನ ತಪಾಸಣೆಗೊಳಪಡಿಸಿ ರಾಜ್ಯದ ಒಳ ಪ್ರವೇಶಕ್ಕೆ ಅವಕಾಶ ನೀಡುತ್ತಿದ್ದಾರೆ.
ಪ್ರಮುಖವಾಗಿ ಸೇವಾ ಸಿಂಧು ಆ್ಯಪ್ ಮೂಲಕ ಪಡೆದ ಈ-ಪಾಸ್ ಪಡೆದವರು, ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ರಾಜ್ಯದತ್ತ ಬರುವವರು, ಫ್ಲೈಟ್ ಟಿಕೆಟ್, ಟ್ರೈನ್ ಟಿಕೆಟ್ ಇದ್ದವರಿಗೆ ಮಾತ್ರ ರಾಜ್ಯ ಪ್ರವೇಶಕ್ಕೆ ಪೊಲೀಸರು ಅವಕಾಶ ನೀಡಲಾಗುತ್ತಿದೆ. ಉಳಿದಂತೆ ಪೂರಕವಾದಂತಹ ದಾಖಲೆಗಳು ಇಲ್ಲದೆ ಬರುವವರನ್ನು ವಾಪಸ್ ಕಳಿಸಲಾಗತ್ತಿದೆ.
ಬೆಂಗಳೂರು ಸೇರಿದಂತೆ ಸ್ಥಳೀಯವಾಗಿ ಆಗಮಿಸುವವರನ್ನು ಥರ್ಮಲ್ ಸ್ಕ್ರೀನಿಂಗ್ಗೆ ಒಳಪಡಿಸಿ ಯಾವುದೇ ಕೊರೊನಾ ಲಕ್ಷಣಗಳು ಇಲ್ಲದಿದ್ದವರಿಗೆ ಕೈಗೆ ಸೀಲ್ ಹಾಕಿ ಬಳಿಕ ಕಡ್ಡಾಯ ಹೋಮ್ ಕ್ವಾರಂಟೈನ್ ಕಳುಹಿಸಲಾಗುತ್ತಿದೆ.
ಅಲ್ಲದೆ ಕಾರು ಬೈಕ್ಗಳಲ್ಲಿ ಅತೀ ಹೆಚ್ಚು ಮಂದಿ ರಾಜ್ಯದತ್ತ ಆಗುಮಿಸುತ್ತಿದ್ದಾರೆ. ಜೊತೆಗೆ ಇಷ್ಟು ದಿನ ಟೋಲ್ ಫ್ರೀ ಮಾಡಲಾಗಿತ್ತು. ಆದ್ರೆ ಇಂದಿನಿಂದ ಮತ್ತೆ ಟೋಲ್ ಶುಲ್ಕ ಸಂಗ್ರಹ ಮಾಡುತ್ತಿದ್ದು, ಟೋಲ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಪರದಾಡುವಂತಾಗಿತ್ತು.
Comments are closed.