ಕರಾವಳಿ

ದ.ಕ.ಜಿಲ್ಲೆಯಲ್ಲಿ 7 ಮಂದಿ ಕೊರೋನಾಗೆ ಬಲಿ : ಮೃತರ ಸಂಖ್ಯೆ 99ಕ್ಕೆ ಏರಿಕೆ

Pinterest LinkedIn Tumblr

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರದ ಒಂದೇ ದಿನ‌ ಕೊರೋನಾ ಸೋಂಕಿಗೆ ಬರೋಬ್ಬರಿ‌ 7 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನಕ್ಕೆ 99 ಮಂದಿ ಬಲಿಯಾದಂತಾಗಿದೆ. 7 ಮಂದಿಯ ಪೈಕಿ 6 ಪುರುಷರು ಮತ್ತು ಒಬ್ಬ ಮಹಿಳೆ ಸೇರಿದ್ದಾರೆ.

ದ.ಕ.ಜಿಲ್ಲೆಯ ಖಾಸಗಿ ಮತ್ತು ಸರಕಾರಿ ಆಸ್ಪತ್ರೆಯಲ್ಲಿ ಬುಧವಾರ ಮೃತಪಟ್ಟವರ ಪೈಕಿ 7 ಮಂದಿಯಲ್ಲಿ ಗುರುವಾರ ಕೊರೋನ ಪಾಸಿಟಿವ್ ಕಂಡು ಬಂದಿದ್ದು, ದಾವಣಗೆರೆಯ 36 ವರ್ಷದ ಯುವಕ, ಭಟ್ಕಳದ 62 ವರ್ಷದ ಪುರುಷ, ಕೇರಳ ಪಾಲಕ್ಕಾಡ್‌ನ 52 ವರ್ಷದ ಪುರುಷ, ಮಂಗಳೂರಿನ 83 ಮತ್ತು 73 ವರ್ಷದ ವೃದ್ಧ, ಬಂಟ್ವಾಳದ 52 ವರ್ಷದ ಪುರುಷ ಮತ್ತು ಮಂಗಳೂರಿನ 58 ವರ್ಷದ ಮಹಿಳೆ ಮೃತಪಟ್ಟಿದ್ದಾರೆ.

ಗುರುವಾರದ ಪ್ರಮುಖ ಅಂಶಗಳು :

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸಾವಿನ ಸಂಖ್ಯೆ ಶತಕದತ್ತ

ಗುರುವಾರ ಮತ್ತೆ 7 ಮಂದಿ ಕೊರೋನಾ ದಿಂದ ಸಾವು

ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 99 ಕ್ಕೇರಿಕೆ

ದಾವಣಗೆರೆ ಮೂಲದ 36 ವರ್ಷದ ಯುವಕ

ಭಟ್ಕಳ ಮೂಲದ‌ 69 ವರ್ಷದ ವೃದ್ಧ

ಕೇರಳದ ಪಾಲಕ್ಕಾಡ್ ನಿವಾಸಿ 52 ವರ್ಷದ ವ್ಯಕ್ತಿ

ಮಂಗಳೂರು ಮೂಲದ‌ 53 ವರ್ಷದ ವ್ಯಕ್ತಿ

ಮಂಗಳೂರು ಮೂಲದ 79 ವರ್ಷದ ವೃದ್ಧ

ಮಂಗಳೂರು ಮೂಲದ 58 ವರ್ಷದ ಮಹಿಳೆ

ಬಂಟ್ವಾಳ ಮೂಲದ 52 ವರ್ಷದ ವ್ಯಕ್ತಿ ಕೊರೋನಾದಿಂದ ಸಾವು

ದ.ಕ‌ ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಕೊರೋನಾ ಸಾವಿನ ಸಂಖ್ಯೆ.

Comments are closed.