ರಾಷ್ಟ್ರೀಯ

ಅನ್ ಲಾಕ್ 3.0: ಅಂತಾರಾಷ್ಟ್ರೀಯ ವಿಮಾನ ಸೇವೆ ಪುನರ್ ಆರಂಭಕ್ಕೆ ಎಫ್ ಐಸಿಸಿಐ ಸಲಹೆ

Pinterest LinkedIn Tumblr
Passengers

ನವದೆಹಲಿ: ಅನ್ ಲಾಕ್ 2.0 ಜುಲೈ 31ಕ್ಕೆ ಕೊನೆಯಾಗಲಿದ್ದು, 3.0ದಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮಗಳೊಂದಿಗೆ ಅಂತಾರಾಷ್ಟ್ರೀಯ ವಿಮಾನ ಸೇವೆ, ಮೆಟ್ರೋ ರೈಲು, ಚಿತ್ರಮಂದಿರ ಹಾಗೂ ಮೆಲ್ಟಿಪ್ಲೆಕ್ಸ್ ಗಳನ್ನು ತೆರೆಯುವಂತೆ ಕೈಗಾರಿಕಾ ಒಕ್ಕೂಟ ಎಫ್ ಐಸಿಸಿಐ ಸರ್ಕಾರಕ್ಕೆ ಸಲಹೆ ನೀಡಿದೆ.

ಸ್ಥಳೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ಪುನರ್ ಆರಂಭಿಸುವ ಬಗ್ಗೆಯೂ ಕೈಗಾರಿಕಾ ಒಕ್ಕೂಟ ಬೆಂಬಲ ವ್ಯಕ್ತಪಡಿಸಿದೆ.

ಭಾರತೀಯ ಮತ್ತು ವಿದೇಶಿ ವಿಮಾನಗಳಿಗೆ ಎರಡು ರಾಷ್ಟ್ರಗಳ ನಡುವೆ ಸಂಚರಿಸಲು ಅವಕಾಶ ಕಲ್ಪಿಸಬೇಕು, ಹೋಟೆಲ್ , ರೆಸ್ಟೋರೆಂಟ್ ಗಳು, ಚಿತ್ರಮಂದಿರ, ಮೆಟ್ರೋ ರೈಲು ಸೇವೆಯನ್ನು ಆರಂಭಿಸಬೇಕೆಂದು ಚೆಂಬರ್ಸ್ ಸಲಹೆ ನೀಡಿದೆ.

ಕೋವಿಡ್-19 ಪರಿಣಾಮದಿಂದಾಗಿ ಇಡೀ ಜಗತ್ತು ಹೋರಾಡುತ್ತಿರುವಂತೆಯೇ ಧೀರ್ಘಕಾಲಿನ ಲಾಕ್ ಡೌನ್, ಆರ್ಥಿಕತೆಗೆ ಸಮರ್ಥನೀಯವಲ್ಲಾ ಎಂದು ಎಫ್ ಐಸಿಸಿಐ ಉಲ್ಲೇಖಿಸಿದೆ.

ದೇಶದ ಹಲವೆಡೆ ಭಾಗಶ: ಲಾಕ್ ಡೌನ್ ಆದೇಶ ಇನ್ನೂ ಮುಂದುವರೆದಿದ್ದು,ವ್ಯವಹಾರ, ಜನರ ದೈನಂದಿನ ಬದುಕು ದುಸ್ತರವಾಗಿದೆ.

ಕೋವಿಡ್-19 ಭೀತಿಯನ್ನು ಗಮನದಲ್ಲಿಟ್ಟುಕೊಂಡು ಆನ್ ಲಾಕ್ 3-0ನಲ್ಲಿ ನಿರ್ಬಂಧಗಳನ್ನು ತೆಗೆಯಬೇಕಾಗಿದೆ. ವಿಮಾನ, ಕ್ರೀಡೆ ಮತ್ತಿತರ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಬೇಕಾಗಿದೆ. ಕೋವಿಡ್-19 ನೆಗೆಟಿವ್ ವರದಿಯ ಪ್ರಮಾಣ ಪತ್ರ ಸ್ವೀಕರಿಸುವ ಮೂಲಕ ವಿದೇಶಿಗರ ಪ್ರಯಾಣಕ್ಕೆ ಅವಕಾಶ ಮಾಡಿಕೊಡಬೇಕಾಗಿದೆ ಎಂದು ಚೆಂಬರ್ಸ್ ಸಲಹೆ ನೀಡಿದೆ.

ಶೇ. 50 ಆಸನ ಸಾಮರ್ಥ್ಯ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಮತ್ತಿತರ ಮುಂಜಾಗ್ರತಾ ಕ್ರಮದೊಂದಿಗೆ ಬಾರ್ ಗಳು, ರೆಸ್ಟೋರೆಂಟ್ ಗಳು, ಹೋಟೆಲ್ ಗಳಲ್ಲಿ ಅವಕಾಶ ಮಾಡಿಕೊಡಬೇಕು, ಕಂಟೈನ್ ಮೆಂಟ್ ವಲಯಗಳನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಮೆಟ್ರೋ ರೈಲುಗಳ ನಿಲುಗಡೆಗೆ ಅವಕಾಶ ಮಾಡಿಕೊಡಬೇಕು.ಕಟ್ಟುನಿಟ್ಟಾದ ಮಾರ್ಗಸೂಚಿ ಪಾಲನೆಗಾಗಿ ಮೆಟ್ರೋ ನಿಲ್ದಾಣಗಳಲ್ಲಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಬೇಕು ಎಂದು ಎಫ್ ಐಸಿಸಿಐ ಸಲಹೆ ನೀಡಿದೆ.

Comments are closed.