ಕರ್ನಾಟಕ

ಆಗಸ್ಟ್​ ಮೊದಲ ವಾರಲ್ಲಿ ರಾಜ್ಯ ಸಚಿವ ಸಂಪುಟ ಪುನಾರಚನೆ

Pinterest LinkedIn Tumblr


ಬೆಂಗಳೂರು: ಬಿ.ಎಸ್​. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಒಂದು ವರ್ಷದ ಆಡಳಿತಾವಧಿ ಪೂರ್ಣಗೊಳಿಸಿದ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆಯ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಈ ಪ್ರಕ್ರಿಯೆಗೆ ಆಗಸ್ಟ್​ ಮೊದಲ ವಾರದಲ್ಲಿ ಮುಹೂರ್ತ ಫಿಕ್ಸ್​ ಆಗಿರುವುದಾಗಿ ಹೇಳಲಾಗುತ್ತಿದೆ.

ಹಾಲಿಯಿರುವ ಒಬ್ಬ ಉಪಮುಖ್ಯಮಂತ್ರಿ ಸೇರಿ ಆರು ಸಚಿವರಿಗೆ ಕೊಕ್​ ಕೊಡಲು ನಿರ್ಧರಿಸಲಾಗಿದ್ದು, 10 ಜನ ಹೊಸಬರಿಗೆ ಸಂಪುಟದಲ್ಲಿ ಸ್ಥಾನ ಕೊಡಲಾಗುತ್ತಿದೆ ಎನ್ನಲಾಗಿದೆ. ಈ ಪ್ರಕ್ರಿಯೆ ಕೈಗೊಳ್ಳಲು ಬಿಜೆಪಿಯ ಹೈಕಮಾಂಡ್​ ಕೂಡ ಹಸಿರು ನಿಶಾನೆ ತೋರಿದೆ ಎಂದು ಹೇಳಲಾಗಿದೆ.

ಡಿಸಿಎಂ ಲಕ್ಷ್ಮಣ್​ ಸವದಿ, ಶಶಿಕಲಾ ಜೊಲ್ಲೆ, ಪ್ರಭು ಚವ್ಹಾಣ್​, ಸಿ.ಸಿ. ಪಾಟೀಲ್​ ಸೇರಿ ಆರು ಸಚಿವರು ತಮ್ಮ ಸ್ಥಾನ ಕಳೆದುಕೊಳ್ಳಲಿದ್ದಾರೆ. ಖಾಲಿ ಇರುವ ಆರು ಸ್ಥಾನ ಸೇರಿ 10 ಜನ ಹೊಸಬರಿಗೆ ಅವಕಾಶ ಕೊಡಲಾಗುತ್ತಿದೆ. ಅಲ್ಲದೆ, ಎರಡು ಸಚಿವ ಸ್ಥಾನವನ್ನು ಖಾಲಿ ಉಳಿಸಿಕೊಳ್ಳಲಾಗುತ್ತಿದೆ ಎನ್ನಲಾಗಿದೆ.

ಆರ್​. ಅಶೋಕ್​, ಕೆ.ಎಸ್​. ಈಶ್ವರಪ್ಪ, ಜಗದೀಶ್​ ಶೆಟ್ಟರ್​ ಅವರ ಖಾತೆಗಳನ್ನು ಬದಲಿಸಲಾಗುತ್ತಿದೆ. ಎಂಟಿಬಿ, ಆರ್​. ಶಂಕರ್​, ತಿಪ್ಪಾರೆಡ್ಡಿ, ರಾಮದಾಸ್​, ರಾಜೀವ್​ ಕುಡಚಿ, ಅಂಗಾರ, ಉಮೇಶ್​ ಕತ್ತಿ, ಅರವಿಂದ ಲಿಂಬಾವಳಿ, ಎಚ್​. ವಿಶ್ವನಾಥ್​ ಮತ್ತು ಮುರಗೇಶ್​ ನಿರಾಣಿ ಅವರು ಮತ್ತೊಮ್ಮೆ ಸಚಿವರಾಗುವ ಭಾಗ್ಯ ಪಡೆದುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

Comments are closed.