ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ ಕನಕದಾಸ ಸಂಶೋಧನ ಕೇಂದ್ರದ ವತಿಯಿಂದ ‘ಕನಕ ತತ್ತ್ವಚಿಂತನ ಪ್ರಚಾರೋಪನ್ಯಾಸ’ ಮಾಲಿಕೆಯ 2020-2021ನೇ ಸಾಲಿನ ಉದ್ಘಾಟನಾ ಸಮಾರಂಭ ಕಾರ್ಯಕ್ರಮ ಆಗಸ್ಟ್ 12 ರಂದು ಸಂಜೆ 4 ರಿಂದ ಸಂಜೆ 6.30 ಗಂಟೆವರೆಗೆ ಅಬ್ಬಕ್ಕ ಟಿವಿ ಯೂಟ್ಯೂಬ್ ನೇರಪ್ರಸಾರದ ಮೂಲಕ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಉದ್ಘಾಟನೆ ಮತ್ತು ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ ವಹಿಸಲಿರುವರು. ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಟ್ಟಂಪಾಡಿ, ಇಲ್ಲಿನ ಪ್ರಾಂಶುಪಾಲ ಪ್ರೊ. ವರದರಾಜ ಚಂದ್ರಗಿರಿ, `ಕನಕ : ಸಮಸಮಾಜ ನಿರ್ಮಾಣದ ಕನಸು’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು ನೀಡಲಿರುವರು. ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕ ಡಾ. ಧನಂಜಯ ಕುಂಬ್ಳೆ ಉಪಸ್ಥಿರಿರುವರು.
ನಂತರ ನಡೆಯುವ ಹರಿಕಥಾ ಕಾಲಕ್ಷೇಪ ಕಾರ್ಯಕ್ರಮದಲ್ಲಿ ಸಂಗೀತ ಕಲಾಸಿರಿ ಮಂಜುಳಾ ಜಿ. ರಾವ್ ಇರಾ ‘ಹರಿಭಕ್ತಿಸಾರ’ ಎಂಬ ಹರಿಕಥೆಯನ್ನು ನಡೆಸಿಕೊಡಲಿರುವರು. www.youtube.com/abbakkatv, facebook.com/official.abbakkatv ಈ ಲಿಂಕ್ ನ್ನು ಬಳಸಿ ಕಾರ್ಯಕ್ರಮವನ್ನು ವೀಕ್ಷಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಕೇಂದ್ರದ ಸಂಶೋಧನ ಸಹಾಯಕ ಆನಂದ ಎಂ.ಕಿದೂರು ಮೊ.ನಂ. 9591480138 ಸಂಪರ್ಕಿಸಬಹುದು ಎಂದು ಮಂಗಳೂರು ವಿಶ್ವವಿದ್ಯಾನಿಲಯ ಕನಕದಾಸ ಸಂಶೋಧನ ಕೇಂದ್ರದ ಪ್ರಕಟಣೆ ತಿಳಿಸಿದೆ.
Comments are closed.