ಒಂದೆಡೆ ಕೊರೋನಾ ಪೀಡಿತರ ಸಂಖ್ಯೆ ಹೆಚ್ಚುತ್ತಇದ್ದರೂ ಸಾವಿನ ಪ್ರಮಾಣ ಗಣನೀಯವಾಗಿ ತಗ್ಗಿದೆ ಅಂತ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಇದೇ ಮೊದಲ ಬಾರಿ ಸಾವಿನ ಪ್ರಮಾಣ ಶೇ 2 ಕ್ಕಿಂತ ಕಡಿಮೆಯಾಗಿದೆ ಅಂತ ರಾಜೇಶ್ ಭೂಷಣ ವಿವರಿಸಿದ್ದಾರೆ.
ಇಲ್ಲಿಯವರೆಗೆ 2.5 ಕೋಟಿಗಿಂತ ಅಧಿಕ ಕೊರೋನಾ ಟೆಷ್ಟ್ ಮಾಡಲಾಗಿದ್ದು ಅಂದರೆ ಸರಿಸುಮಾರು 10 ಲಕ್ಷ ಜನರಲ್ಲಿ 18,320 ಜನರಿಗೆ ಕೊರೋನಾ ಪರೀಕ್ಷೆ ಮಾಡಲಾಗಿದೆ ಅಂತ ತಿಳಿಸಿದರು.
ಇದೇ ಮೊಟ್ಟಮೊದಲ ಬಾರಿ ಕೊರೋನಾ ಮರಣದ ಪ್ರಮಾಣ ಶೇ 2 ಕ್ಕಿಂತ ಕಡಿಮೆ ಅಂದರೆ 1.99 ತಲುಪಿದೆ . ಕೊರೋನಾ ಪರೀಕ್ಷಾ ಪ್ರಮಾಣವೂ ಗಣನೀಯವಾಗಿ ಹೆಚ್ಚಾಗಿದ್ದು ಸದ್ಯ ದಿನಕ್ಕೆ 7,19,374 ಜನರ ಪರೀಕ್ಷೆ ಮಾಡುತ್ತಿದ್ದೇವೆ ಅಂತ ತಿಳಿಸಿದರು.
ಇದರ ಜೊತೆ ಕೊರೋನಾದಿಂದ ಗುಣಮುಖರಾದವರ ಸಂಖ್ಯೆ ಸಹ 15 ಲಕ್ಷ ದಾಟುವ ಮೂಲಕ ಹೊಸ ದಾಖಲೆ ಬರೆದಿದೆ, ಒಟ್ಟೂ 24 ಲಕ್ಷ ಕೇಸ್ ಗಳಲ್ಲಿ 6 ಲಕ್ಷ ಆಕ್ಟಿವ್ ಕೇಸ್ಗಳು ಸದ್ಯ ಭಾರತದಲ್ಲಿದ್ದಾರೆ. 45,257 ಜನರು ಕೊರೋನಾದಿಂದ ನಿಧನರಾಗಿದ್ದಾರೆ ಅಂತ ರಾಜೇಶ್ ಭೂಷಣ್ ಸುದ್ದಿಗಾರರಿಗೆ ವಿವರಿಸಿದರು.
Comments are closed.