ಉಡುಪಿ: ನೂತನವಾಗಿ ನಿರ್ಮಾಣಗೊಂಡ ಕೋಟ ಆರಕ್ಷಕ ಠಾಣಾ ಕಟ್ಟಡವನ್ನು ರಾಜ್ಯದ ಗೃಹಮಂತ್ರಿ ಬಸವರಾಜ್ ಬೊಮ್ಮಾಯಿ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ ಗೃಹ ಇಲಾಖೆ ಕೊರೋನಾ ವಿಚಾರವಾಗಿ ಸಾಕಷ್ಟು ಶ್ರಮಿಸುತ್ತಿದೆ.ಈ ದಿಸೆಯಲ್ಲಿ ಅದರ ವ್ಯಾಪ್ತಿಗೊಳಪಟ್ಟ ಪೋಲಿಸ್ ಇಲಾಖೆ ನಿಜವಾದ ಕೊರೋನಾ ವಾರಿರ್ಯಸ್ ಆಗಿ ಕಳೆದ ನಾಲ್ಕೈದು ತಿಂಗಳುಗಳಿಂದ ಇತರ ಇಲಾಖೆ ತರಹ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯ ಸರಕಾರ ಹೊಸ ನಿರ್ಧಾರಗಳ ಮೂಲಕ ನೂತನ ಠಾಣಾ ಕಟ್ಟಡ,ವಸತಿ,ಆರೋಗ್ಯ ಭಾಗ್ಯ ಇನ್ನಿತರ ಹೊಸ ಯೋಜನೆಯ ಮೂಲಕ ಕಾಯಕಲ್ಪ ನೀಡಲಾಗಿದೆ.ಅದರಂತೆ ಇಂದು ಕೋಟ ಆರಕ್ಷಕ ಠಾಣಾ ನೂತನ ಕಟ್ಟಡ ಲೋಕಾರ್ಪಣೆಗೊಳಿಸಿದ್ದೇನೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಮರ್ಪಕ ಕಾರ್ಯನಿರ್ವಹಿಸುವಂತ್ತಾಗಲಿ ಎಂದು ಹಾರೈಸಿದರು.ಇದಕ್ಕೂ ಮೊದಲು ಪೋಲಿಸ್ ಇಲಾಖೆಯಿಂದ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಂದರು, ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ,ಕಾರ್ಕಳ ಶಾಸಕ ಸುನೀಲ್ ಕುಮಾರ್ ,ಬೈಂದೂರು ಶಾಸಕ ಬಿ.ಸುಕುಮಾರ್ ಶೆಟ್ಟಿ, ಉಡುಪಿ ಶಾಸಕ ರಘುಪತಿ ಭಟ್, ಉಡುಪಿ ಜಿಲ್ಲಾಪಂಚಾಯತ್ ಅಧ್ಯಕ್ಷ ದಿನಕರಬಾಬು,ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ,ತಾ.ಪಂ ಸದಸ್ಯೆ ಲಲಿತಾ ಪೂಜಾರಿ,ಕೋಟ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷೆ ವನೀತಾ ಶ್ರೀಧರ್ ಆಚಾರ್ಯ, ತೆಕ್ಕಟ್ಟೆ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಸಾಲಿಗ್ರಾಮ ಪ.ಪಂ ಸದಸ್ಯ ರಾಜು ಪೂಜಾರಿ,ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್,ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್,ಡಿವೈಎಸ್ಪಿ ಜೈಶಂಕರ್,ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತಪದ್ಮನಾಭ,ಕೋಟ ಠಾಣಾಧಿಕಾರಿ ಸಂತೋಷ್ ಬಿ.ಪಿ ಮತ್ತಿತರರು ಉಪಸ್ಥಿತರಿದ್ದರು.
Comments are closed.