ಪ್ರೀತಿ ಯಾವಾಗ ಯಾರಾ ಮೇಲೆ ಬೇಕಾದರೂ ಆಗಬಹುದು. ಅಂದಹಾಗೆಯೇ ಇಲ್ಲೊಬ್ಬರು 52 ವರ್ಷದ ವಯಸ್ಸಿನ ವ್ಯಕ್ತಿಗೆ 48 ವರ್ಷದ ಮಹಿಳೆಯೊಬ್ಬರ ಮೇಲೆ ಪ್ರೀತಿ ಆಗಿದೆ. ಆದರೆ ವ್ಯಕ್ತಿ ಆ ಮಹಿಳೆಗೆ ಪ್ರೊಪೋಸ್ ಮಾಡಿರುವ ರೀತಿ ಮಾತ್ರ ವಿಭಿನ್ನವಾಗಿದೆ. ಅಷ್ಟು ಮಾತ್ರವಲ್ಲ, ಆ ವಿಡಿಯೋ ವೈರಲ್ ಕೂಡ ಆಗಿದೆ.
52 ವರ್ಷದ ರಿಕಿ ಆಶ್ 48 ವರ್ಷದ ಕತ್ರೀನಾ ಮೇಲೆ ಪ್ರೀತಿ ಚಿಗುರೊಡೆದಿತ್ತು. ಕೊನೆಗೂ ಈ ವಿಚಾರವನ್ನು ಆತ ಪ್ರೊಪೊಸ್ ಮಾಡುವ ಮೂಲಕ ಹೇಳಿಕೊಂಡಿದ್ದಾನೆ. ಆದರೆ ರಿಕಿ ಮೈಮೇಲೆ ಬೆಂಕಿ ಹಂಚಿಕೊಂಡು ವಿಭಿನ್ನವಾಗಿ ಪ್ರೇಮ ನಿವೇದನೆ ಮಾಡಿದ್ದಾನೆ.
ರಿಕಿ ಆಶ್ ವೃತ್ತಿಪರ ಸ್ಟಂಟ್ ಮ್ಯಾನ್. ಕತ್ರೀನಾ ವೃತ್ತಿಯಲ್ಲಿ ನರ್ಸ್. ರಿಕಿಗೆ ಆಕೆಯ ಜೊತೆಗೆ ಪ್ರೀತಿ ಹಂಚಿಕೊಳ್ಳಲು ಕೊನೆಗೆ ಸ್ಟಂಟ್ ಮಾಡಬೇಕಾಯಿತು. ರಿಕಿ ಆಕೆಗೆ ವಿಭಿನ್ನವಾಗಿ ಪ್ರಪೋಸ್ ಮಾಡಬೇಕೆಂದು ಫೋಟೋಶೂಟ್ ಮಾಡಿಕೊಂಡಿದ್ದಾನೆ. ಬೆಂಕಿ ಹಚ್ಚಿಕೊಂಡು ಪ್ರಪೋಸ್ ಮಾಡಿದ್ದಾನೆ.
ಕೊನೆಗೆ ರಿಕಿ ಮೈಮೇಲೆ ಬೆಂಕಿ ಆವರಿಸುತ್ತಾ ಹೋದಂತೆ ಕತ್ರೀನಾ ಆತನ ಪ್ರೇಮ ನಿವೇದನೆಯನ್ನು ಒಪ್ಪಿಕೊಂಡಿದ್ದಾಳೆ.
ಕತ್ರೀನಾ ಈ ಬಗ್ಗೆ ಮಾತನಾಡಿದ್ದು, ‘ರಿಕಿ ಮೈ ಮೇಲೆ ಬೆಂಕಿ ಹಂಚಿಕೊಂಡಾಗ ಕೈಗಳನ್ನು ಜೇಬಿನಲ್ಲಿ ಇಟ್ಟುಕೊಂಡಿದ್ದನು. ನಾನು ಆತನನ್ನು ನೋಡಿ ಇವನ್ಯಾಕೆ ಕೈ ಜೇಬಿನಲ್ಲಿರಿಸಿಕೊಂಡಿದ್ದಾನೆ ಎಂದು ಅಂದುಕೊಂಡೆ. ನಂತರ ರಿಕಿ ಉಂಗುರವನ್ನು ತೆಗೆದನು’ ಎಂದು ಹೇಳಿದರು.
ರಿಕಿ ಅಮೆರಿಕಾ ಮೂಲಕ ಸ್ಟಂಟ್ಮ್ಯಾನ್ ಆಗಿದ್ದು, 27 ವರ್ಷಗಳಿಂದ ಈ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ. ರಿಚರ್ಡ್ ಬರ್ಟನ್, ಜಾನಿ ಡೆಪ್ ಮುಂತಾದ ಖ್ಯಾತನಾಮರೊಂದಿಗೆ ಕೆಲಸ ಮಾಡಿದ ಅನುಭವವಿದೆ. ಹಲವಾರು ಜಾಹೀರಾತು ಮತ್ತು ಸಿನಿಮಾ ಮತ್ತು ದೂರದರ್ಶನ ಕಾರ್ಯಕ್ರಮದಲ್ಲಿ ಕೆಲಸ ಮಾಡಿದ್ದಾರೆ.
Comments are closed.