ಮನುಷ್ಯನ ವ್ಯಕ್ತಿತ್ವವು ಆತನು ಜನಿಸಿದ ದಿನ, ಘಳಿಗೆ ಹಾಗೂ ತಿಂಗಳಿನಿಂದ ನಿರ್ಧಾರವಾಗುವುದು ಎಂದು ಹೇಳಲಾಗುತ್ತದೆ. ಇದಕ್ಕೆ ಅನುಗುಣವಾಗಿ ಅವನಿಗೆ ಪ್ರಸಿದ್ಧಿ, ಶ್ರೀಮಂತಿಕೆ ಮತ್ತು ಅಧಿಕಾರ ಸಿಗುವುದು. ಅದೇ ರೀತಿಯಲ್ಲಿ ಪ್ರತಿಯೊಂದು ತಿಂಗಳಲ್ಲಿ ಹುಟ್ಟಿರುವಂತಹ ವ್ಯಕ್ತಿಗಳಿಗೆ ಅವರದ್ದೇ ಆಗಿರುವಂತಹ ಕೆಲವೊಂದು ಗುಣಗಳು ಇವೆ. ಇದನ್ನು ನೀವು ತಿಳಿದುಕೊಂಡರೆ, ಆಗ ಅವರೊಂದಿಗೆ ವ್ಯವಹರಿಸಲು ಸ್ವಲ್ಪ ಸುಲಭವಾಗುವುದು.
ಅವರ ಗುಣ, ಸ್ವಭಾವ ತಿಳಿದರೆ ನಮ್ಮ ಕಾರ್ಯಗಳನ್ನು ಸುಲಭವಾಗಿ ಮಾಡಬಹುದು. ಪ್ರತಿಯೊಂದು ರಾಶಿಚಕ್ರಗಳಿಗೂ ಇದು ಅನ್ವಯ ಆಗುವುದು. ಏಪ್ರಿಲ್ ಎನ್ನುವುದು ತುಂಬಾ ಬಿಸಿಯಾಗಿರುವ ತಿಂಗಳು. ಈ ತಿಂಗಳಲ್ಲಿ ಜನಿಸಿದ ವ್ಯಕ್ತಿಗಳ ವ್ಯಕ್ತಿತ್ವವು ಯಾವ ರೀತಿಯಾಗಿ ಇರಲಿದೆ ಎಂದು ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ. ಅದನ್ನು ನೀವು ತಿಳಿಯಿರಿ. ಏಪ್ರಿಲ್ ತಿಂಗಳಲ್ಲಿ ಹುಟ್ಟಿದ ವ್ಯಕ್ತಿಗಳಲ್ಲಿ ಕಾಣುವಂತಹ ಐದು ಗುಣಗಳು ಯಾವುದು? ಈ ಗುಣಗಳಿಂದಾಗಿ ಅವರು ಬೇರೆಯವರಿಗಿಂತ ತುಂಬಾ ಭಿನ್ನವಾಗಿ ನಿಲ್ಲುವರು.
ಸ್ವತಂತ್ರರಾಗಿರುವರು
ಈ ತಿಂಗಳಲ್ಲಿ ಹುಟ್ಟಿರುವಂತಹ ಜನರು ತುಂಬಾ ಸ್ವತಂತ್ರ ರಾಗಿರುವರು. ಈ ವ್ಯಕ್ತಿಗಳು ಯಾವುದಾದರೂ ಉದ್ಯಮವನ್ನು ಆರಂಭಿಸುವರು ಮತ್ತು ಅದರಲ್ಲಿ ಇವರು ತುಂಬಾ ಉನ್ನತಿ ಪಡೆಯುವರು. ಇವರು ತಮ್ಮದೇ ಆದ ದಾರಿಯಲ್ಲಿ ಸಾಗುವರು. ಇವರಲ್ಲಿ ಇರುವಂತಹ ಆಕರ್ಷಣೀಯ ಗುಣವು ಬೇರೆಯವರನ್ನು ಆಕರ್ಷಣೆ ಮಾಡುವುದು. ಇದರ ಹೊರತಾಗಿ ಹಣ ಸಂಪಾದನೆ ಮಾಡಬೇಕು ಎಂದು ಬಯಸುವಂತಹ ವ್ಯಕ್ತಿಗಳು ಇದನ್ನು ತಮ್ಮ ಜೀವನದಲ್ಲಿ ಸಾಧಿಸಲು ತುಂಬಾ ಕಠಿಣವಾಗಿ ಕೆಲಸ ಮಾಡುವರು.
ಇವರು ಹಠವಾದಿಗಳು
ಇವರು ತಾವು ಸರಿಯಾಗಿ ಇದ್ದೇವೆ ಎಂದು ನಂಬಿದ ವೇಳೆ ತುಂಬಾ ಹಠವಾದಿಗಳಾಗಿ ಇರುವರು. ಇವರು ತುಂಬಾ ಬಲಶಾಲಿ ಮನಸ್ಸನ್ನು ಹೊಂದಿರುವ ಕಾರಣದಿಂದಾಗಿ ತಮ್ಮ ಮಾತಿನ ಬಗ್ಗೆ ದೃಢವಾದ ನಂಬಿಕೆ ಹೊಂದಿರುವರು. ಇನ್ನೊಂದು ಕಡೆಯಲ್ಲಿ ಇವರು ಚರ್ಚೆ ಮಾಡುವಂತಹ ವ್ಯಕ್ತಿಯಲ್ಲ. ಆದರೆ ಇವರು ತಮ್ಮ ನಿಲುವನ್ನು ಇವರು ಯಾವತ್ತೂ ಬದಲಾವಣೆ ಮಾಡುವುದಿಲ್ಲ. ಇವರು ತುಂಬಾ ಪ್ರಬಲ ಎದುರಾಳಿಗಳಾಗಿರುವರು ಮತ್ತು ಇವರಿಗೆ ಸರಿಹೊಂದುವ ಹೋರಾಟ ನೀಡುವುದು ತುಂಬಾ ಕಠಿಣವಾಗಿರುವುದು.
ಸಾಹಸ ಪ್ರವೃತ್ತಿಯವರು
ಇವರು ಹೊರಗಡೆ ಸುತ್ತಾಡಲು ಮತ್ತು ಪ್ರಕೃತಿ ಸ್ನೇಹಿಯಾಗಿರುವ ವ್ಯಕ್ತಿ ಆಗಿರುವರು. ಇವರು ತಮ್ಮೊಂದಿಗೆ ಹಲವಾರು ಮಂದಿ ಸ್ನೇಹಿತರನ್ನು ಇಟ್ಟುಕೊಂಡಿರುವರು. ಈ ಸ್ನೇಹಿತರು ಇವರ ಅತ್ಯುತ್ಸಾಹವನ್ನು ಸ್ವಾಗತಿಸುವರು ಮತ್ತು ಜತೆಯಾಗಿ ಪ್ರಯಾಣಿಸಲು ಇಷ್ಟಪಡುವರು. ಇವರು ಜನ್ಮತಃ ಪ್ರವಾಸಿಗರು ಆಗಿರುವರು. ಇವರಿಗೆ ನೈಸರ್ಗಿಕವಾಗಿ ಸಾಹಸ ಮತ್ತು ಪ್ರಯಾಣಿಸುವ ಗುಣವು ಬಂದಿರುವ ಕಾರಣದಿಂದಾಗಿ ಇವರು ಹೊಸ ಹೊಸ ಪ್ರದೇಶಗಳಿಗೆ ಹೋಗಲು ಇಷ್ಟಪಡುವರು.
ಇವರು ತುಂಬಾ ಕುತೂಹಲಿಗರು
ಈ ವ್ಯಕ್ತಿಗಳು ಯಾವಾಗಲೂ ಏನಾದರೂ ಮಾಹಿತಿ ಪಡೆಯಲು ಬಯಸುತ್ತಿರುವರು. ಇವರು ಹೊಸ ಹೊಸ ವಿಚಾರಗಳನ್ನು ಕಲಿಯಲು ತುಂಬಾ ಉತ್ಸುಕರಾಗಿರುವುದು ಮಾತ್ರವಲ್ಲದೆ ಪ್ರಕೃತಿ ಬಗ್ಗೆಯು ಇವರಿಗೆ ತುಂಬಾ ಕುತೂಹಲ ಇರುವುದು. ಇವರು ಭೂಮಿ ಮೇಲಿನ ಮಾತ್ರವಲ್ಲದೆ, ಅದಕ್ಕಿಂತಲೂ ಆಳವಾಗಿ ಕೆಲವೊಂದು ಹುಡುಕಾಟ ಮಾಡಲು ಬಯಸುವರು.
ಇವರು ತುಂಬಾ ಕುತೂಹಲಿಗರು
ಯಾರಾದರೂ ಇವರನ್ನು ಕಾಯಿಸಿದರೆ ಆಗ ತಾಳ್ಮೆ ಕಳೆದುಕೊಳ್ಳುವರು ಮತ್ತು ಇದರಿಂದ ತುಂಬಾ ಸುಲಭವಾಗಿ ನಿರಾಶೆಗೆ ಒಳಗಾಗುವರು. ಇವರದ್ದು ವಿಶ್ರಾಂತಿಯಿಲ್ಲದೆ ಇರುವ ವ್ಯಕ್ತಿತ್ವ ಆಗಿರುವ ಕಾರಣದಿಂದಾಗಿ ಯಾವಾಗಲೂ ಏನಾದರೂ ಕೆಲಸವನ್ನು ಬೇಗನೆ ಮುಗಿಸಲು ಬಯಸುವರು. ಆದರೆ ಈ ಒಂದು ಗುಣದಿಂದಾಗಿ ಇವರು ಕೆಲವೊಂದು ಸಲ ಸಂಕಷ್ಟಕ್ಕೆ ಸಿಲುಕುವುದು ಇದೆ
Comments are closed.