ಕರಾವಳಿ

ನಿವೃತ್ತ ಪಿಡಿಓ ಕುಂಭಾಸಿ‌ ನಿವಾಸಿ ನಿರಂಜನ್ ಕುಮಾರ್ ದಾಸ್ ನಿಧನ

Pinterest LinkedIn Tumblr

ಕುಂದಾಪುರ: ನಿವೃತ್ತ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿರಂಜನ್ ಕುಮಾರ್ ದಾಸ್ (69) ಆ.15ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅವರು ಕೋಟೇಶ್ವರ, ಕಾಳಾವರ, ಬಸ್ರೂರು, ನೇರಳಕಟ್ಟೆ, ಕೋಣಿ ಮತ್ತು ಆಜ್ರಿ ಗ್ರಾಮ ಪಂಚಾಯತ್‍ಗಳಲ್ಲಿ ಪಂಚಾಯತ್ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಬೇಳೂರು ಗ್ರಾಮ ಪಂಚಾಯತ್‍ನಲ್ಲಿ ಪಿಡಿಓ ಆಗಿ ಕಾರ್ಯನಿರ್ವಹಿಸಿದ್ದರು.

ಮೃತರು ಪತ್ನಿ, ಶ್ರೀ ಮೂಕಾಂಬಿಕಾ ಮಹಿಳಾ ಮಂಡಳಗಳ ತಾಲೂಕು ಒಕ್ಕೂಟ ರಿ., ಹಾಗೂ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರದ ಅಧ್ಯಕ್ಷೆ ರಾಧಾದಾಸ್, ಪುತ್ರ ಅರ್ಜುನ್ ದಾಸ್ ಹಾಗೂ ಮೂವರು ಸಹೋದರರು, ಓರ್ವ ಸಹೋದರಿಯನ್ನು ಅಗಲಿದ್ದಾರೆ.

Comments are closed.