ಕರ್ನಾಟಕ

ರಾಜ್ಯಕ್ಕೆ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಜಿ ಆಗಮನ! ಬದಲಾಗುತ್ತಾರಾ ರಾಜ್ಯದ ಮುಖ್ಯಮಂತ್ರಿ?

Pinterest LinkedIn Tumblr


ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್​ ಜೀ ದೆಹಲಿಯಿಂದ ವಾಪಸ್​ ಬಂದಾಗಿನಿಂದ ರಾಜ್ಯ ಬಿಜೆಪಿ ಪಾಳಯದಲ್ಲಿ ಸಾಕಷ್ಟು ರಾಜಕೀಯ ಚಟುವಟಿಕೆ ಗರಿಗೆದರಿವೆ. ದೆಹಲಿಯಿಂದ ಬಂದ ನಂತರ ಸಚಿವರ ಮೌಲ್ಯಮಾಪನ ಮಾಡ್ತಿರೋ ಸಂತೋಷ್​ ಜೀ, ನಾಯಕತ್ವದ ಬದಲಾವಣೆಯ ಅಭಿಪ್ರಾಯ ಸಂಗ್ರಹ ಮಾಡ್ತಿದ್ದಾರೆ.

ಇದರ ಬೆನ್ನಲ್ಲೇ ಬಿಜೆಪಿಯ ಪದಾಧಿಕಾರಿಗಳ ಸಭೆಯನ್ನು ನಡೆಸಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​​​ಕುಮಾರ್​​​ ಕಟೀಲ್​​​​​​ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ರಾಜ್ಯ ರಾಜಕೀಯ ದೃಷ್ಟಿಯಿಂದ ಈ ಸಭೆ ಬಹಳ ಮಹತ್ವದ್ದು ಎನ್ನಲಾಗುತ್ತಿದೆ. ಪದಾಧಿಕಾರಿಗಳ ಸಭೆಯಲ್ಲಿ ಬಿಎಸ್​ವೈಗೆ ಪರ್ಯಾಯ ನಾಯಕತ್ವ ಬದಲಾವಣೆ ಚರ್ಚೆ ನಡೆಯಲಿದೆ.

ಸಭೆಯಲ್ಲಿ ಇಂದೇ ಹೊಸ ಸಿಎಂ ಹೆಸರು ಅಂತಿಮವಾಗಲಿದೆಯಾ..? ಸಿಎಂ ಬಿಎಸ್​​ವೈ ಪದ ತ್ಯಾಗಕ್ಕೆ ಇಂದೇ ಸಮಯ ನಿಗದಿ ಆಗುತ್ತಾ..? ಅನ್ನೋ ಕುತೂಹಲ ಮೂಡಿದೆ. ಹೀಗಾಗಿ ರಾಜ್ಯ ರಾಜಕಾರಣದ ಚಿತ್ತ ಸಂತೋಷ್​​ ಜೀ ಸಭೆಯತ್ತ ನೆಟ್ಟಿದೆ. ನಾಯಕತ್ವ ಬದಲಾವಣೆ ವಿಚಾರದ ಜೊತೆಗೆ ಸಚಿವ ಸಂಪುಟ ವಿಸ್ತರಣೆ ಕುರಿತ ವಿಚಾರವೂ ಕಟೀಲ್ ಜೊತೆ ಸಂತೋಷ್​ ಜೀ ಚರ್ಚಿಸಲಿದ್ದಾರೆ.

ಸಂಪುಟದಲ್ಲಿ ಹೊಸದಾಗಿ ಯಾರಿಗೆ ಅವಕಾಶ ಕೊಡಬೇಕು? ಈಗಿರುವರಲ್ಲಿ ಯಾರನ್ನು ತೆಗೆಯಬೇಕು? ಎನ್ನುವ ಬಗ್ಗೆ ಅಂತಿಮ ತೀರ್ಮಾನ ಆಗಲಿದೆ. ಈ ಮೂಲಕ ಈ ಬಾರಿಯ ಸಂಪುಟ ಪುನರ್ ರಚನೆಯಲ್ಲಿ ಸಂತೋಷ್ ತೀರ್ಮಾನವೇ ಪೈನಲ್​ ಆಗಬಹುದು ಎನ್ನಲಾಗಿದೆ.

Comments are closed.