ಅಂತರಾಷ್ಟ್ರೀಯ

ದಾವೂದ್​ ಇಬ್ರಾಹಿಂ ನಿವಾಸದ ವಿಳಾಸ ಬಹಿರಂಗ ಮಾಡಿದ ಪಾಕ್!

Pinterest LinkedIn Tumblr


ಕರಾಚಿ (ಆ.23): ಮೂರು ದಶಕಗಳಲ್ಲಿ ಇದೇ ಮೊದಲ ಬಾರಿಗೆ ದಾವೂದ್​ ಇಬ್ರಾಹಿಂ ನಮ್ಮಲ್ಲಿಯೇ ಇರುವುದಾಗಿ ಪಾಕಿಸ್ತಾನ ಒಪ್ಪಿಕೊಂಡಿದೆ . ವಿಶ್ವಸಂಸ್ಥೆಯ ಅನುಮೋದನೆ ನಿರ್ಣಯದಡಿಯಲ್ಲಿ 88 ಭಯೋತ್ಪಾದಕರನ್ನು ನಿಷೇಧಿಸುವ ಆದೇಶವನ್ನು ಪಾಕಿಸ್ತಾನ ಸರ್ಕಾರ ಹೊರಡಿಸಿದೆ. ಈ ಆದೇಶದಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹೆಸರು ಕೂಡ ಇದೆ.

ದಾವೂದ್ ಇಬ್ರಾಹಿಂ ಸಾಕಷ್ಟು ಅಕ್ರಮ ದಂದೆಗಳನ್ನು ನಡೆಸುತ್ತಿದ್ದಾನೆ. 1993ರಲ್ಲಿ ನಡೆದ ಮುಂಬೈ ಬಾಂಬ್​ ದಾಳಿಗೆ ಈತನೇ ಮಾಸ್ಟರ್​ ಮೈಂಡ್​. ಈ ಘಟನೆ ನಡೆದ ನಂತರದಲ್ಲಿ ಭಾರತದ ಮೋಸ್ಟ್​ ವಾಂಟೆಡ್​ ಕ್ರಿಮಿನಲ್​ಗಳ ಸಾಲಿಗೆ ದಾವೂದ್​ ಸೇರಿದ್ದ.

ಇಲ್ಲೊಂದು ಅಚ್ಚರಿಯ ವಿಚಾರವಿದೆ. ಅದೇನೆಂದರೆ, ಪಾಕಿಸ್ತಾನ 2015 ಹಾಗೂ 2019ರಲ್ಲಿ ಇದೇ ಮಾದರಿಯ ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಿತ್ತು. ಆದರೆ, ಇಬ್ರಾಹಿಂ ಎಲ್ಲಿದ್ದಾನೆ ಎಂಬುದಾಗಿ ಪಾಕಿಸ್ತಾನ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಈಗ ಇದೇ ಮೊದಲ ಬಾರಿಗೆ ದಾವೂದ್​ ಪಾಕಿಸ್ತಾನದಲ್ಲಿರುವುದಾಗಿ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲ, ಆತನ ನಿವಾಸದ ವಿಳಾಸ ಕೂಡ ಬಹಿರಂಗವಾಗಿದೆ. ಈತನ ಮೇಲೆ ಆರ್ಥಿಕ ನಿರ್ಬಂಧವನ್ನೂ ಹೇರಿವೆ.

ದಾವೂದ್​ ಇಬ್ರಾಹಿಂ ಬಳಿ ಐದು ಪಾಸ್​​ಪೋರ್ಟ್​ಗಳು ಇವೆ ಎನ್ನಲಾಗಿದೆ. ಈ ಪೈಕಿ ಎಲ್ಲ ಪಾಸ್​​ಪೋರ್ಟ್​ಗಳು ನಕಲಿ ಆಗಿದ್ದು, ಒಂದೊಂದು ದೇಶಕ್ಕೆ ಹೋಗುವಾಗ ಒಂದೊಂದು ಪಾಸ್​​ಪೋರ್ಟ್​ಗಳನ್ನು ಈತ ಬಳಕೆ ಮಾಡುತ್ತಿದ್ದಾನೆ. ಆದರೆ, ದೇಶದ ನಾಗರೀಕತೆಗೆ ಸಂಬಂಧಿಸಿದ ಯಾವುದೇ ಕಾರ್ಡ್​​ಗಳನ್ನು ಆತನಿಗೆ ನೀಡಿಲ್ಲ ಎಂದು ಪಾಕ್​ ಹೇಳಿದೆ.

1993ರ ಮುಂಬೈ ಬಾಂಬ್​ ಸ್ಫೋಟದ ಪ್ರಮುಖ ರುವಾರಿ ಈತನೇ ಆಗಿದ್ದ. ದಾವೂದ್​ ಮಾಡಿದ ದುಷ್ಕೃತ್ಯದಿಂದ ಸಾಕಷ್ಟು ಜನರು ಮೃತಪಟ್ಟಿದ್ದರು. ಇದಿಷ್ಟೇ ಅಲ್ಲದೆ ಬೇರೆ ಬೇರೆ ಕೃತ್ಯಗಳಲ್ಲೂ ಈತನ ಹೆಸರು ಕೇಳಿ ಬಂದಿದೆ.

Comments are closed.