ರಾಷ್ಟ್ರೀಯ

ಮೋದಿಯ ಯೂಟ್ಯೂಬ್​​ ಖಾತೆಯ ವಿಡಿಯೋಗಳ ಕಮೆಂಟ್‌ ಸೆಕ್ಷನ್ ಆಫ್

Pinterest LinkedIn Tumblr

ಕಳೆದ ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮನ್ಕೀ ಬಾತ್ರೇಡಿಯೋ ಕಾರ್ಯಕ್ರಮನ್ನು ಬಿಜೆಪಿ ಹಾಗೂ ಪಿಎಂಒ ಇಂಡಿಯಾ ಯೂಟ್ಯೂಬ್ ಖಾತೆಗಳಿಂದ ಪ್ರಸಾರ ಮಾಡಲಾಗಿತ್ತು. ಆದರೆ ವಿಡಿಯೋಗೆ ಲೈಕ್ಸ್ಗಿಂತ ಹೆಚ್ಚು ಡಿಎಸ್​​ ಲೈಕ್ಸ್​​ ಗಳು ಬಂದಿದ್ದವು. ವಿಡಿಯೋವನ್ನು ಹತ್ತು ಲಕ್ಷಕ್ಕೂ ಅಧಿಕ ಮಂದಿ ಡಿಸ್ಲೈಕ್ಸ್​​ ಮಾಡಿದ್ದರು. ಹಿನ್ನೆಲೆಯಲ್ಲಿ ಪಿಎಂಒ ಇಂಡಿಯಾ ಯೂಟ್ಯೂಬ್ ಖಾತೆಯ ವಿಡಿಯೋಗಳ ಕಮೆಂಟ್ಸೆಕ್ಷನ್ ಆಫ್ ಮಾಡಲಾಗಿದೆ.

ಪಿಎಂ ನರೇಂದ್ರ ಮೋದಿಯವರ ಮನ್​​ ​ ಕೀ ಬಾತ್ ಕಾರ್ಯಕ್ರಮದ​ ಬಗ್ಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ಕಾಮೆಂಟ್​ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು, ನೀಟ್ ಮತ್ತು ಜೆಇಇ ಬಗ್ಗೆ ಕೆಲವರು ಪ್ರಶ್ನೆ ಮಾಡಿದ್ರೆ ಕೆಲವರು ನಿರುದ್ಯೋಗದ ಬಗ್ಗೆ ಮಾತನಾಡಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಪ್ರಧಾನಿಯವರು ನೀಟ್​, ಜೆಇಇ ಮಾತನಾಡಬೇಕಿತ್ತು, ಆದರೆ ಆಟಿಕೆ ಬಗ್ಗೆ ಮಾತನಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಾಗತಿಕ ಬೊಂಬೆ ಉದ್ಯಮ 7 ಲಕ್ಷ ಕೋಟಿ ರೂ ಇದೆ. ಇದರಲ್ಲಿ ಭಾರತದ ಪಾಲು ಬಹಳ ಕಡಿಮೆ. ಅದನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಸ್ಥಳೀಯ ಬೊಂಬೆಗಳ ಬಗ್ಗೆ ಮಾತನಾಡುವ ಸಮಯ ಬಂದಿದೆ. ಕೇಂದ್ರ ಸರ್ಕಾರ ಜಾರಿಗೆ ತರಲಿರುವ ನೂತನ ರಾಷ್ಟ್ರೀಯ ನೀತಿಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಅದರಲ್ಲಿ ಮಕ್ಕಳಿಗೆ ಬೊಂಬೆಗಳ ಮೂಲಕ ಕ್ರಿಯಾಶೀಲತೆ, ಕೌಶಲ್ಯಗಳನ್ನ ಮೂಡಿಸುವ ಚಟುವಟಿಕೆಗಳಿಗೆ ಗಮನ ಕೊಡಲಾಗಿದೆ ಎಂದು ತಿಳಿಸಿದ್ದರು.

ಆತ್ಮನಿರ್ಭರ್ ಭಾರತ್ ಆ್ಯಪ್ ಇನೋವೇಶನ್ ಚಾಲೆಂಜ್​ನಲ್ಲಿ ಕುಟುಕಿ ಕಿಡ್ಸ್ ಲರ್ನಿಂಗ್ ಆ್ಯಪ್ ಇದೆ. ಇದು ಮಕ್ಕಳಿಗೆ ಆಡಾಡುತ್ತಾ ಹಾಡು, ಕಥೆಗಳ ಮೂಲಕ ಗಣಿತ, ವಿಜ್ಞಾನಗಳನ್ನ ಸುಲಭವಾಗಿ ಕಲಿಸುತ್ತದೆ ಎಂದು ಮನ್​​ ಕೀ ಬಾತ್​​ ಕಾರ್ಯಕ್ರಮದಲ್ಲಿ  ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.

Video Player is loading.

Advertisement

ಈ ಬೆಳವಣಿಗೆಗಳ ಬೆನ್ನಲ್ಲೇ ಪಿಎಂಒ ಖಾತೆಯಲ್ಲಿ ಈ ಬದಲಾವಣೆ ಮಾಡಿರುವುದು ಭಾರೀ ಚರ್ಚೆ ಹುಟ್ಟು ಹಾಕಿದೆ. ಇದು ಹಾಗೇ ಮುಂದುವರೆಯುತ್ತಾ? ಅಥವಾ ಕಮೆಂಟ್ ಮಾಡುವ ಅವಕಾಶವನ್ನು ಮತ್ತೆ ನೀಡಲಾಗುತ್ತಾ ಸಮಯವೇ ಉತ್ತರಿಸಲಿದೆ.

 

Comments are closed.