ಕೃತಕ ಬುದ್ಧಿಮತ್ತೆ ಮತ್ತು ಯಾಂತ್ರಿಕ ಕಲಿಕೆ ನಮ್ಮ ಆಧುನಿಕ ಜೀವನದ ಭಾಗ: ನ್ಯೂಯಾರ್ಕ್ನ ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್ನ್ ಪ್ರತೀಕ್ ಇರ್ವತ್ತೂರು
ಮಂಗಳೂರು : ಕೃತಕ ಬುದ್ಧಿಮತ್ತೆ ಮತ್ತು ಯಾಂತ್ರಿಕ ಕಲಿಕೆ ನಮ್ಮ ಆಧುನಿಕ ಜೀವನದ ಭಾಗವಾಗಿವೆ. ಆದರೆ ಇವುಗಳ ಅಭಿವೃದ್ಧಿ ಸವಾಲಿನ ಕೆಲಸ ಎಂದು ನ್ಯೂಯಾರ್ಕ್ನ ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್ನ್ ಪ್ರತೀಕ್ ಇರ್ವತ್ತೂರು ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಕಂಪ್ಯೂಟರ್ ವಿಜ್ಞಾನ ವಿಭಾಗ ಮತ್ತು ಐಕ್ಯೂಎಸಿನಲ್ಲಿ ನಡೆದ ಎಮಜಿರ್ಂಗ್ ಟ್ರೆಂಡ್ಸ್ ಇನ್ ಇಂಟಲಿಜೆಂಟ್ ಕಂಪ್ಯೂಟಿಂಗ್ ಆಂಡ್ ಇನ್ಫಾರ್ಮೆಟಿಕ್ಸ್ ಕುರಿತು ಅಂತಾರಾಷ್ಟ್ರೀಯ ವೆಬಿನಾರ್ ಸರಣಿಯ ಮೊದಲ ಕಂತಿನಲ್ಲಿ ವಿಶೇಷ ಉಪನ್ಯಾಸ ನೀಡಿ ಕೃತಕ ಬುದ್ಧಿಮತ್ತೆ ಮತ್ತು ಯಾಂತ್ರಿಕ ಕಲಿಕೆಯ ವಿವಿಧ ಆಯಾಮಗಳನ್ನು ಪರಿಚಯಿಸಿ, ಆ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಸಂಶೋಧನೆಗಳತ್ತ ಬೆಳಕು ಚೆಲ್ಲಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಗಳೂರು ವಿ.ವಿ ಕುಲಪತಿ ಪ್ರೋ. ಸುಬ್ರಹ್ಮಣ್ಯ ಯಡಪಡಿತ್ತಾಯ ವಾಣಿಜ್ಯ, ಆರೋಗ್ಯ ಸೇರಿದಂತೆ ಎಲ್ಲೆಡೆ ಯಂತ್ರಗಳ ಸಮರ್ಥ ಬಳಕೆಗೆ ಈಗ ಪೈಪೋಟಿ ಏರ್ಪಟ್ಟಿದೆ ಎಂದರು.
ಕಾರ್ಯಕ್ರಮದಲ್ಲಿ ವಿವಿ ಕಾಲೇಜಿನ ಪ್ರಾಂಶುಪಾಲ ಡಾ. ಉದಯ ಕುಮಾರ್ ಎಂ. ಎ, ಕಂಪ್ಯೂಟರ್ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಿ ಡಾ. ಭಾರತಿ ಪಿಲಾರ್, ವಿಭಾಗದ ಮುಖ್ಯಸ್ಥ ಮತ್ತು ಐಕ್ಯೂಎಸಿ ಸಂಯೋಜಕ ಡಾ. ವೀರಭದ್ರಪ್ಪ, ಸುಧೀಂದ್ರರಾವ್ ಮತ್ತು ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಗುರುಪ್ರಸಾದ್ ಇದ್ದರು.
Comments are closed.