ಕರಾವಳಿ

ಯಕ್ಷರಂಗಕ್ಕೆ ತುಳುವರ ಕೊಡುಗೆ ಸಾಕಷ್ಟಿದೆ : ಸರಯೂ ಮಹಿಳಾ ವೃಂದದ ದಶಮಾನೋತ್ಸವದಲ್ಲಿ ಕತ್ತಲ್‌ಸಾರ್

Pinterest LinkedIn Tumblr

ಮಂಗಳೂರು : ತುಳು ಭಾಷೆ ಲಿಪಿಯನ್ನು ಹೊಂದಿದ್ದು, ಅದರದ್ದೇ ಆದ ಸ್ವಂತಿಕೆಯಲ್ಲಿ ರಾರಾಜಿಸುತ್ತಿದೆ. ಇಂದು ತುಳುವರು ಬೇರೆ ಬೇರೆ ಉದ್ದೇಶಕ್ಕಾಗಿ ವಿಶ್ವದಾದ್ಯಂತ ಪಸರಿಸಿದ್ದಾರೆ. ಅದರಲ್ಲೂ ತುಳು ಭಾಷೆಯ ಯಕ್ಷಗಾನ ಕಲಾವಿದರು ಈ ನಿಟ್ಟಿನಲ್ಲಿ ದುಡಿಯುತ್ತಿದ್ದಾರೆ. ಯಕ್ಷರಂಗಕ್ಕೆ ತುಳುವರ ಕೊಡುಗೆ ಸಾಕಷ್ಟಿದೆ. ಪ್ರಸಂಗ ರಚನೆ, ಸಾಹಿತ್ಯಗಳು ಎಲ್ಲವೂ ಯಕ್ಷಗಾನ ಕಲಾವಿದರಿಂದ ಮೂಡಿಬಂದಿದೆ. ತುಳು ಮೇಳಗಳೂ ಸಾಕಷ್ಟಿವೆ.

ಅಂತಹಾ ಒಂದು ತಂಡ ಸರಯೂ ಮಹಿಳಾ ವೃಂದ. ತನ್ನ ದಶಮಾನೋತ್ಸವವನ್ನು ಆಚರಿಸುತ್ತಾ ಬರುತ್ತಿದ್ದು, ಯಶಸ್ಸನ್ನು ಕಾಣಲಿ” ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಶ್ರೀ ದಯಾನಂದ ಜಿ.ಕತ್ತಲ್‌ಸಾರ್ ನುಡಿದರು.

ಶ್ರೀ ಹರಿಕೃಷ್ಣ ಪುನರೂರು ಮಾತನಾಡಿ ” ತುಳು ಆದಷ್ಟು ಬೇಗ ರಾಷ್ಟ್ರೀಯ ಭಾಷೆಯಾಗಲಿ. ಇದಕ್ಕೆ ಹೋರಾಟ ಮುಂದುವರಿಯಲಿ. ಇಂತಹ ಕಾರ್ಯಕ್ರಮಗಳು ಆ ಕಡೆಗೆ ಸಾಗುವರೇ ದಾರಿದೀಪವಾಗಲಿ” ಎನ್ನುತ್ತಾ ಸರಯೂ ಮಹಿಳಾ ವೃಂದಕ್ಕೆ ಹಾಗೂ ಯಕ್ಷಗಾನ ಕಲಾವಿದೆ ಸುಮಂಗಲಾ ರತ್ನಾಕರ ರಾವ್ ಅವರನ್ನು ಅಭಿನಂದಿಸಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಿರಿ ಚಾವಡಿಯಲ್ಲಿ ದಿನಾಂಕ ೨೯.೦೮.೨೦೨೦ ಶನಿವಾರ ಸರಯೂ ಮಹಿಳಾ ವೃಂದದ ದಶಮಾನೋತ್ಸವ ಕಾರ್‍ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಕಲಾವಿದೆ ಶ್ರೀಮತಿ ಸುಮಂಗಲಾ ರತ್ನಾಕರ ರಾವ್‌ರವರನ್ನು ಸರಯೂ ಮಹಿಳಾ ವೃಂದದ ಪರವಾಗಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಸರಯೂ ಮಹಿಳಾ ವೃಂದದ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಎಲ್ ನಿಡ್ವಣ್ಣಾಯ, ನಿರ್ದೇಶಕರಾದ ಶ್ರೀ ರವಿ ಅಲೆವೂರಾಯ ವರ್ಕಾಡಿ ಉಪಸ್ಥಿತರಿದ್ದರು. ಡಾ.ದಿನೇಶ್ ನಾಯಕ್ ಸನ್ಮಾನಿತರನ್ನು ಪರಿಚಯಿಸಿ, ಅಭಿನಂದನಾ ಪತ್ರವನ್ನು ವಾಚಿಸಿದರು. ಸಭಾ ಕಾರ್‍ಯಕ್ರಮದ ನಂತರ ಮಹಿಳಾ ವೃಂದದ ಕಲಾವಿದರಿಂದ ‘ತುಳುನಾಡ ಬಲಿಯೇಂದ್ರ ‘ ಯಕ್ಷಗಾನ ತಾಳಮದ್ದಳೆ ಕಾರ್‍ಯಕ್ರಮ ನಡೆಯಿತು.

ಶ್ರೀಮತಿ ಶಾಂತಾ ಆರ್ ಎರ್ಮಾಳ್ ಧನ್ಯವಾದವಿತ್ತರು.ಶ್ರೀ ಮಾಧವ ನಾವಡ, ಶ್ರಿ ಸ್ಕಂದ ಕೊನ್ನಾರ್, ಶ್ರೀ ಸಂಜೀವ ಕಜೆಪದವು, ಅಕ್ಷಯ್ ಸುವರ್ಣ , ಹರಿಚರಣ್ ಆರ್.ಪಿ, ಕು.ಸಾನ್ವಿ ಬಿ.ಕೆ. ಅಶ್ವಿತ್ ಶೆಟ್ಟಿ , ಶ್ರೀಮತಿ ಯಶೋದಾ , ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಶ್ರೀ ಚೇತಕ್ ಪೂಜಾರಿ ಉಪಸ್ಥಿತರಿದ್ದರು.

Comments are closed.