ಅನೇಕ ಪ್ರಚೋದನಾಕಾರಿ ಭಾಷಣಗಳನ್ನು ಮಾಡುವ ಹಾಗೂ ಭಯೋತ್ಪಾದನೆಗೆ ನೀರುಗೊಬ್ಬರ ಹಾಕುವ ಝಾಕಿರ್ ನಾಯಿಕ್, 15 ನಿಮಿಷಗಳಲ್ಲಿ 100 ಕೋಟಿ ಹಿಂದೂಗಳಿಗೆ ಮುಗಿಸುವ ಬಗ್ಗೆ ಮಾತನಾಡುವ ‘ಎಮ್.ಐ.ಎಮ್.’ನ ಶಾಸಕ ಅಕಬರುದ್ದೀನ್ ಓವೈಸಿ ಇವರೊಂದಿಗೆ ಅನೇಕ ದೇಶವಿರೋಧಿ, ಆಕ್ರಮಣಕಾರಿ ಸಂಘಟನೆಗಳು ಹಾಗೂ ವ್ಯಕ್ತಿಗಳ ‘ಫೇಸಬುಕ್ ಅಕೌಂಟ್ಸ್’ ರಾಜಾರೋಶವಾಗಿ ನಡೆಯುತ್ತಿದೆ.
ಆದರೆ ಸೋಶಿಯಲ್ ಮೀಡಿಯಾವನ್ನು ಕೇವಲ ರಾಷ್ಟ್ರ, ಧರ್ಮ ಹಾಗೂ ಸಮಾಜ ಇವುಗಳ ಹಿತದ ಕಾರ್ಯಕ್ಕಾಗಿ ಬಳಸುವ ನನ್ನಂತಹ ಹಿಂದೂ ನಾಯಕರ, ಅದೇರೀತಿ ಹಿಂದೂ ಧರ್ಮ ಹಾಗೂ ರಾಷ್ಟ್ರಗಳ ಬಗ್ಗೆ ಜನಜಾಗೃತಿ ಮಾಡುವ ಸಂಘಟನೆಗಳ ‘ಫೇಸ್ಬುಕ್ ಪೇಜಸ್’ ಬಂದ್ ಮಾಡಿ ಹಿಂದೂಗಳ ಧ್ವನಿಯನ್ನು ಅದಮುವುದು ಫೇಸ್ಬುಕ್ನ ಸಂಚಾಗಿದೆ.
ಇವೆಲ್ಲವೂ ಹಿಂದೂವಿರೋಧಿ ಶಕ್ತಿಗಳ ಒತ್ತಡದಲ್ಲಿ ನಡೆಯುತ್ತಿದ್ದು ‘ಫೇಸ್ಬುಕ್’ ಮೇಲೆಯೇ ಇನ್ನು ಕಾನೂನಿನ ಕ್ರಮಕೈಗೊಳ್ಳಬಹುದು, ಎಂಬುದನ್ನು ಅವರೂ ಗಮನದಲ್ಲಿಡಬೇಕು ಎಂದು ತೆಲಂಗಾಣ ಭಾಜಪದ ಹಿಂದುತ್ವನಿಷ್ಠ ಶಾಸಕ ಶ್ರೀ ಟಿ. ರಾಜಾಸಿಂಹ ಇವರು ಸ್ಪಷ್ಟವಾಗಿ ಹೇಳಿದರು.
ಅವರು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ‘ಫೇಸ್ಬುಕ್ ಕಾ ಪಕ್ಷಪಾತ : ಹಿಂದೂವೊಂಕಾ ‘ಪೇಜ್’ ಬಂದ್ , ಆತಂಕಿಯೋಂಕೆ ಚಾಲೂ !’ ಈ ವಿಶೇಷ ಸಂವಾದದಲ್ಲಿ ಅವರು ಮಾತನಾಡುತ್ತಿದ್ದರು.
‘ಯು-ಟ್ಯೂಬ್’ ಹಾಗೂ ‘ಫೇಸ್ಬುಕ್’ನ ಮಾಧ್ಯಮದಿಂದ ಈ ಕಾರ್ಯಕ್ರಮವನ್ನು 28,634 ಜನರು ವೀಕ್ಷಿಸಿದರೆ 54546 ಜನರ ತನಕ ತಲುಪಿತು.
‘ಸುದರ್ಶನ ನ್ಯೂಸ್’ ಈ ವಾರ್ತಾವಾಹಿನಿಯ ಮುಖ್ಯ ಸಂಪಾದಕ ಶ್ರೀ. ಸುರೇಶ ಚಹ್ವಾಣಕೆಯವರು ಮಾತನಾಡುತ್ತಾ, ‘ಕೋಟಿಗಟ್ಟಲೆ ಜನರೊಂದಿಗೆ ಜೋಡಿಸಲ್ಪಟ್ಟ ‘ಸುದರ್ಶನ ನ್ಯೂಸ್’ ಹಾಗೂ ಸ್ವತಃ ನನ್ನ ‘ಫೇಸ್ಬುಕ್ ಪೇಜ್’ ಕೆಲವು ತಿಂಗಳ ಹಿಂದೆ ಬಂದ್ ಮಾಡಲಾಗಿದೆ.
ದೇಶ ‘ಡಿಜಿಟಲ್ ಇಂಡಿಯಾ’ ಆಗಲಿದೆ; ಆದರೆ ‘ಡಿಜಿಟಲ್ ಹಿಂದುಸ್ಥಾನ’ ಮುಗಿಸಲಿಕ್ಕಿಲ್ಲದಿದ್ದರೆ ಭಾರತವು ತನ್ನದೇ ಆದ ಸೋಶಿಯಲ್ ಮೀಡಿಯಾ ನೆಟ್ವರ್ಕ್ ನಿರ್ಮಾಣ ಮಾಡಬೇಕು. ಒಂದುವೇಳೆ ಫೇಸ್ಬುಕ್ ಇದೇ ರೀತಿ ಹಿಂದೂಗಳ ‘ಫೇಸ್ಬುಕ್ ಪೇಜಸ್’ ಬಂದ್ ಮಾಡುತ್ತಿದ್ದರೆ, ದೇಶಪ್ರೇಮಿ ಹಿಂದೂಗಳು ‘ಫೇಸ್ಬುಕ್’ಅನ್ನು ದೇಶದಿಂದ ಬಹಿಷ್ಕಾರ ಮಾಡುವ ತನಕ ಸುಮ್ಮನಿರುವುದಿಲ್ಲ ಎಂಬುದನ್ನು ಅದು ಗಮನದಲ್ಲಿಡಬೇಕು’ ಎಂದು ಹೇಳಿದರು.
ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಹಾಗೂ ‘ಹಿಂದೂ ಫ್ರಂಟ್ ಫಾರ್ ಜಸ್ಟಿಸ್’ನ ವಕ್ತಾರಾದ ನ್ಯಾಯವಾದಿ ವಿಷ್ಣು ಶಂಕರ ಜೈನ್ ಇವರು ಮಾತನಾಡುತ್ತಾ, ‘ಮಾಹಿತಿ-ತಂತ್ರಜ್ಞಾನ ಕಾಯ್ದೆಯ ಕಲಂ 66 ಕ್ಕನುಸಾರ ‘ಫೇಸ್ಬುಕ್’ ರಾಷ್ಟ್ರಹಿತಕ್ಕಾಗಿ ಕಾರ್ಯ ಮಾಡುವವರ ‘ಫೇಸ್ಬುಕ್ ಅಕೌಂಟ್ಸ್’ ಬಂದ್ ಮಾಡಿ ಒಂದು ರೀತಿಯಲ್ಲಿ ‘ಸೈಬರ್ ಭಯೋತ್ಪಾದನೆ’ಯನ್ನು ಆರಂಭಿಸಿದೆ.
‘ಫೇಸ್ಬುಕ್’ನ ಈ ಭಯೋತ್ಪಾದನೆಯ ವಿರುದ್ಧ ದೇಶದಾದ್ಯಂತ ಯಾವುದೇ ನ್ಯಾಯಾಯಲಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ‘ಫೇಸ್ಬುಕ್’ ಇದು ಸನಾತನ ಸಂಸ್ಥೆ, ಟಿ. ರಾಜಾ ಸಿಂಹರವರ ‘ಫೇಸ್ಬುಕ್ ಪೇಜಸ್’ ಬಂದ್ ಮಾಡಿ ಲಕ್ಷಗಟ್ಟಲೆ ಜನರ ಧ್ವನಿಯನ್ನು ಅದುಮುವ ಪ್ರಯತ್ನವನ್ನು ಮಾಡಿದೆ. ಕೇಂದ್ರ ಸರಕಾರವು ಇನ್ನು ‘ಫೇಸ್ಬುಕ್’ ಮೇಲೆಯೇ ನಿಷೇಧ ಹೇರಬೇಕು ಎಂದು ಹೇಳಿದರು.
‘ಸೋಶಿಯಲ್ ಮೀಡಿಯಾ’ದ ಅಭ್ಯಾಸಕರಾದ ಶ್ರೀ. ಅಭಿನವ ಖರೆ ಇವರು ಮಾತನಾಡುತ್ತಾ, ‘ಇತ್ತೀಚೆಗೆ ಕೆಂದ್ರ ಸರಕಾರವು ಚೀನಾದ ಅನೇಕ ಆಪ್ಸ್ ಮೇಲೆ ನಿಷೇಧ ಹೇರಿತ್ತು, ಅದೇ ರೀತಿ ಟ್ವಿಟರ್ ಹಾಗೂ ಫೇಸ್ಬುಕ್ ಮೇಲೆಯೂ ಬರಬಹುದು, ಎಂಬ ಭಯ ಅವರಲ್ಲಿ ಮೂಡಿಸಬೇಕು. ಒಂದುವೇಳೆ ಭಾರತದಲ್ಲಿ ಈ ಸಾಮಾಜಿಕ ಮಾಧ್ಯಮದವರಿಗೆ ಕೆಲಸ ಮಾಡಲಿಕ್ಕಿದ್ದರೆ ನಮ್ಮ ಬಹುಸಂಖ್ಯಾತ ಜನರ ವಿಚಾರ ಮಾಡಲೇ ಬೇಕು ಎಂದು ಹೇಳಿದರು.
ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ ರಾಜಹಂಸ ಇವರು ಮಾತನಾಡುತ್ತಾ, ‘ಸನಾತನ ಸಂಸ್ಥೆಯು ಸಾಂವಿಧಾನಿಕ, ಕಾನೂನುಬದ್ಧ ಹಾಗೂ ಸುಸಂಸ್ಕೃತ ಭಾಷೆಗಳ ಪ್ರಯೋಗಗಳನ್ನು ಮಾಡಿ ಜಗತ್ತಿನಾದ್ಯಂತ ಅಧ್ಯಾತ್ಮಪ್ರಸಾರದ ಕಾರ್ಯವನ್ನು ಮಾಡುವ ಮುಂಚೂಣಿಯಲ್ಲಿರುವ ಸಂಸ್ಥೆಯಾಗಿದೆ, ಆದರೆ ‘ಫೇಸ್ಬುಕ್’ ಸನಾತನ ಸಂಸ್ಥೆಯ 5 ‘ಫೇಸ್ಬುಕ್ ಪೇಜಸ್’, ಅದೇರೀತಿ ಸಂಸ್ಥೆಯ ಅನೇಕ ಸಾಧಕರ ವೈಯಕ್ತಿಕ ‘ಫೇಸ್ಬುಕ್ ಅಕೌಂಟ್ಸ್’ ಮೇಲೆ ನಿಷೇಧ ಹೇರಿದೆ. ಇದರಿಂದ ‘ಫೇಸ್ಬುಕ್’ಗೆ ಹಿಂದೂ ಧರ್ಮ ಪ್ರಸಾರಕ್ಕೆ ಆಪ್ಷೇಪಣೆ ಇದೆ, ಎಂಬುದೇ ಇದರಿಂದ ಸಾಬೀತಾಗುತ್ತದೆ ಎಂದು ಹೇಳಿದರು.
ವರದಿ ಕೃಪೆ :
ಶ್ರೀ. ರಮೇಶ ಶಿಂದೆ,
ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
Comments are closed.