ಕರಾವಳಿ

ಡ್ರಗ್ಸ್ ವಿಷಯದಲ್ಲಿ ಕೇವಲ ಸಿನಿಮಾ ಕ್ಷೇತ್ರವನ್ನು ಮಾತ್ರ ಟಾರ್ಗೆಟ್ ಮಾಡಬೇಡಿ: ಸಂಸದೆ ಸುಮಲತಾ ಮನವಿ

Pinterest LinkedIn Tumblr

(ಕಡತ ಚಿತ್ರ)

ಬೆಂಗಳೂರು : ಕೆಲವೊಂದು ಕಡೆಗಳಲ್ಲಿ ಯುವ ಸಮೂಹ ಈ ಡ್ರಗ್ಸ್ ಚಟದ ಹಿಂದೆ ಬಿದ್ದಿರುವುದು ಕಹಿ ಸತ್ಯ. ಅದನ್ನು ನಿರಾಕರಿಸಲು ಸಾಧ್ಯವಿಲ್ಲ.ಆದರೆ ಇದೀಗ ಸ್ಯಾಂಡಲ್ ವುಡ್ ಅನ್ನು ಬೆಚ್ಚಿ ಬೀಳಿಸಿದ ಡ್ರಗ್ಸ್ ವಿಷಯದಲ್ಲಿ ಚಿತ್ರರಂಗವನ್ನ ಮಾತ್ರ ಗುರಿ ಮಾಡಬೇಡಿ ಎಂದು ಚಿತ್ರರಂಗದ ಖ್ಯಾತ ನಟ, ಖ್ಯಾತ ರಾಜಕಾರಣಿ, ದಿವಗಂತ ಅಂಬರೀಷ್ ಅವರ ಧರ್ಮಪತ್ನಿ ಮಂಡ್ಯ ಸಂಸದೆ ಸುಮಲತಾ ಅವರು ಮನವಿ ಮಾಡಿದ್ದಾರೆ.

ಡ್ರಗ್ಸ್ ಮಾಫಿಯಾ ಎಲ್ಲ ಕಡೆ ಇದೆ. ಆದ್ರೆ, ಇಂದಿನ ಕೆಲವು ದಿನಗಳಿಂದ ಸಿನೆಮಾ ರಂಗವನ್ನು ಮಾತ್ರ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಸುಮಲತಾ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ವಿಚಾರದ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ಇದರಲ್ಲಿ ಬಹಳಷ್ಟು ಜನರ ತಪ್ಪು ಇದೆ. ಆದರೇ ಸ್ಯಾಂಡಲ್‌ವುಡ್‌ನಲ್ಲಿ ಈಗ ಕೇಳಿ ಬರುತ್ತಿರುವ ಹೆಸರೆಷ್ಟು ? ಕೆಲವೇ ಮಂದಿಯ ಹೆಸರು ಕೇಳಿ ಬಂದ ತಕ್ಷಣ ಅದನ್ನು ಇಡೀ ಸ್ಯಾಂಡಲ್‌ವುಡ್ ಗೆ ಅನ್ವಯಿಸಿ ಕೆಟ್ಟದಾಗಿ ತೋರಿಸುವುದು ಕನ್ನಡ ಚಿತ್ರರಂಗದ ಬಗ್ಗೆ ತಪ್ಪು ಸಂದೇಶ ರವಾನೆ ಮಾಡಿದಂತಾಗುತ್ತದೆ.. ಕೇವಲ ಸಿನಿಮಾ ಕ್ಷೇತ್ರವನ್ನು ಮಾತ್ರ ಟಾರ್ಗೆಟ್ ಮಾಡಬೇಡಿ ಎಂದು ಸುಮಲತಾ ಅವರು ಮನವಿ ಮಾಡಿದ್ದಾರೆ.

ಇಂದಿನ ದಿನಗಳಲ್ಲಿ ಸ್ಯಾಂಡಲ್ ವುಡ್ ಮಾತ್ರ ಅಲ್ಲ… ಎಲ್ಲ ಚಿತ್ರರಂಗದಲ್ಲಿಯೂ ಜನರೇಶನ್ ಚೇಂಜ್ ಆಗಿದೆ. ಹಿರಿಯರ ಜನರೇಶನ್ ಇದ್ದಾಗ ಪರಿಸ್ಥಿತಿ ಬೇರೆ ಇತ್ತು. ಈಗ ಆ ಗೌರವ, ಭಯ ಯುವಕರಲ್ಲಿ ಕಾಣುತ್ತಿಲ್ಲ. ಅದು ಜನರೇಷನ್ ನಲ್ಲಿ ಕಂಡು ಬರುವ ವ್ಯತ್ಯಾಸ ಆಗಿದೆ. ಈಗಿನ ಜನರೇಷನ್ ಕೊಡುವ ಗೌರವ ಕಡಿಮೆಯಾಗಿದೆ.

ಪ್ರತಿ ರಂಗದಲ್ಲಿ ಒಳ್ಳೇದು ಕೆಟ್ಟದು ಇರುತ್ತದೆ. ಸಿನಿಮಾ ಕ್ಷೇತ್ರವನ್ನೇ ಟಾರ್ಗೆಟ್ ಮಾಡುವುದು ಸರಿಯಲ್ಲ. ಈ ಚಟ ಎಲ್ಲಾ ಕ್ಷೇತ್ರದಲ್ಲಿ ಇದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸುಮಲತಾ ಅವರು ಮತ್ತೊಮ್ಮೆ ಮನವಿ ಮಡಿದ್ದಾರೆ.

ಈ ಪ್ರಕರಣಗಳು ಚಲನಚಿತ್ರರಂಗ ಅಷ್ಟೇ ಅಲ್ಲ, ಇದು ಎಲ್ಲ ರಂಗಗಳಲ್ಲೂ ಇದೆ. ಆದರೆ ಈ ಒಂದು ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಇಡೀ ಕನ್ನಡ ಚಿತ್ರರಂಗವನ್ನೇ‌ ಬೊಟ್ಟು ಮಾಡಬಾರದು. ಡ್ರಗ್ಸ್ ದಂಧೆಯಲ್ಲಿ ಇತರೆ ನಟರು ಇದ್ದಾರಾ ಅನ್ನೋದರ ಬಗ್ಗೆ ತನಿಖಾಧಿಕಾರಿಗಳು ಮಾಹಿತಿ ಕೊಡಬೇಕು.

ಆರೋಪ ಸಾಬೀತಾಗುವ ಮೊದಲೇ ಜಡ್ಜ್ ಮೆಂಟ್ ಕೊಡಬಾರದು‌ ಎಂದು ಹೇಳಿರುವ ಸುಮಲತಾ ಅವರು, ನಮಗೆ ಗೊತ್ತಿಲ್ಲದ ವಿಚಾರದ ಬಗ್ಗೆ ಮಾತನಾಡುವುದು ಸರಿಯಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಸತ್ಯಾಂಶ ಹೊರ ಬರಲೇಬೇಕು. ಅಲ್ಲಿವೆರೆಗೆ ನಾವು ಕಾಯಬೇಕು ಎಂದು ಸುಮಲತಾ ಮೇಡಂ ಹೇಳಿದ್ದಾರೆ.

Comments are closed.