ನವದೆಹಲಿ: ಆಸ್ಟ್ರೇಲಿಯಾದಲ್ಲಿ ಯುವತಿಯೋರ್ವಳು ಕಬಾಬ್ ತಿನ್ನಲು ಲಾಕ್ಡೌನ್ ನಿಯಮ ಉಲ್ಲಂಘಿಸಿ ದುಬಾರಿ ಫೈನ್ ಕಟ್ಟಿರುವ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.
ಆಸ್ಟ್ರೇಲಿಯಾದಲ್ಲಿ ನಾಲ್ಕನೇ ಹಂತದ ಲಾಕ್ ಡೌನ್ ಜಾರಿಯಲ್ಲಿದೆ. ಹೀಗಿರುವಾಗಲೇ ಯುವತಿಯೋರ್ವಳು ಲಾಕ್ಡೌನ್ ನಿಯಮ ಉಲ್ಲಂಘಿಸಿ ಕಬಾಬ್ಗಾಗಿ ಸುಮಾರು ತಮ್ಮ ಮನೆಯಿಂದ 75 ಕಿಲೋ ಮೀಟರ್ ದೂರ ಕಾರ್ ಡ್ರೈವ್ ಮಾಡಿಕೊಂಡು ಹೋಗಿದ್ದಾರೆ. ಕಬಾಬ್ ತಿಂದು ವಾಪಸ್ ಬರುವಾಗ ಪೊಲೀಸರು ಈಕೆ ಕಾರು ಅಡ್ಡಗಟ್ಟಿ ಫೈನ್ ಹಾಕಿದ್ಧಾರೆ.
ನಾನು ಇಲ್ಲಿನ ಗೀಲಾಂಗ್ ಏರಿಯಾದವಳು. ಕಬಾಬ್ ತಿನ್ನಲು ಮೆಲ್ಬರ್ನ್‌ನತ್ತ ಸಾಗುತ್ತಿದ್ದೆ. ಹೀಗೆ ಸಾಗುತ್ತಾ ನನ್ನ ಬಾಯ್ ಫ್ರೆಂಡ್ ಮನೆ ಇರುವ ವೆರ‍್ರಿಬೀ ಪ್ರದೇಶಕ್ಕೆ ಬಂದೆ. ಕಬಾಬ್ ತಿಂದು ನನ್ನ ಹಾಗೆಯೇ ನನ್ನ ಬಾಯ್ ಫ್ರೆಂಡ್ ಭೇಟಿಯಾಗಿ ಹೋಗುತ್ತಿರುವುದಾಗಿ ಪೊಲೀಸರ ಬಳಿ ಯುವತಿ ಹೇಳಿಕೊಂಡಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ಪೊಲೀಸರು ಲಾಕ್ಡೌನ್ ಮಾಡಿದ್ದಕ್ಕಾಗಿ ಯುವತಿ 1 ಲಕ್ಷ ರೂ. ದಂಡ ಕಟ್ಟಿದ್ದಾಳೆ.
Comments are closed.