ಬೆಂಗಳೂರು : ರವಿಶಂಕರ್ ಮತ್ತು ರಾಗಿಣಿ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಮಂಗಳೂರು ಮೂಲದ ಡ್ರಗ್ ಪೆಡ್ಲರ್ ಪ್ರತೀಕ್ ಶೆಟ್ಟಿಯನ್ನು ಬೆಂಗಳೂರು ಸಿಸಿಬಿ ಪೊಲೀಸರು ಇಂದು ಬಂಧಿಸಿದ್ದಾರೆ.
2018ರಲ್ಲಿಯೂ ಸಿಸಿಬಿ ಪೊಲೀಸರು ಡ್ರಗ್ ಪೆಡ್ಲರ್ ಪ್ರತೀಕ್ ಶೆಟ್ಟಿ ಬಂಧಿಸಿದ್ದರು. ಆದರೆ, ಆಗ ಕಾರ್ತಿಕ್ ರಾಜ್ ಜೊತೆ ಇರುವ ನಂಟಿನ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ಕಾರ್ತಿಕ್ ರಾಜ್ ಈಗ ಸಿಸಿಬಿ ಪೊಲೀಸರ ವಶದಲ್ಲಿದ್ದಾನೆ. ವಿಚಾರಣೆ ವೇಳೆ ಪಡೆದ ಮಾಹಿತಿ ಅನ್ವಯ ಪ್ರತೀಕ್ ಶೆಟ್ಟಿ ಬಂಧಿಸಲಾಗಿದೆ. ಸೆಲೆಬ್ರಿಟಿಗಳು ಹೋಗುವ ಪಾರ್ಟಿಗಳಿಗೆ ಡ್ರಗ್ ಪೆಡ್ಲರ್ ಪ್ರತೀಕ್ ಶೆಟ್ಟಿ ಮಾದಕ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ ಎಂಬ ಆರೋಪವಿದೆ.
ಈವರೆಗೂ ಆರ್ಟಿಒ ಇಲಾಖೆಯ ನೌಕರ ರವಿಶಂಕರ್, ನಟಿಯರಾದ ರಾಗಿಣಿ ದ್ವೀವೇದಿ, ಸಂಜನಾ ಗಲ್ರಾಣಿ, ಡ್ರಗ್ ಪೆಡ್ಲರ್ಗಳಾದ ರಾಹುಲ್ ತೋನ್ಸೆ, ವೀರೇನ್ ಖನ್ನಾ ಮತ್ತು ವಿದೇಶಿ ಪ್ರಜೆ ಲೂಮ್ ಪೆಪ್ಪರ್ರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದ್ದು,
ಪ್ರತೀಕ್ ಶೆಟ್ಟಿ ಬೆಂಗಳೂರಿನ ಇಂದಿರಾನಗರದಲ್ಲಿ ವಾಸವಾಗಿದ್ದನು. 2018ರಲ್ಲಿ ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾದಕ ವಸ್ತು ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದರು. ಈತ ರಾಗಿಣಿಗೆ ಆತ್ಮೀಯನೆಂದು ಹೇಳಲಾಗಿದೆ.
Comments are closed.