ಉಡುಪಿ: ಒಂದೆಡೆ ಕೊರೋನಾದಿಂದಾಗಿ ಒಂದಷ್ಟು ನಿಯಮಗಳು. ಮತ್ತೊಂದೆಡೆ ಎರಡು ದಿನಗಳಿಂದ ಸುರಿಯುತ್ತಿರುವ ಬಾರೀ ಮಳೆಯ ನಡುವೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವಿಟ್ಲಪಿಂಡಿ ಹಾಗೂ ಶ್ರೀಕೃಷ್ಣ ಲೀಲೋತ್ಸವ ಸಾಂಪ್ರದಾಯಿಕವಾಗಿಯೇ ವಿಜೃಂಭಣೆಯಿಂದ ನಡೆಯಿತು.
ಶುಕ್ರವಾರದಂದು ಶ್ರೀ ಕೃಷ್ಣಮಠದಲ್ಲಿ ಪಾರಂಪರಿಕ ಸಂಪ್ರದಾಯಗಳಂತೆ ವಿಟ್ಲಪಿಂಡಿ ಉತ್ಸವ ನಡೆಯಿತು. ಕೋವಿಡ್ ನಿಯಮಾವಳಿಯಂತೆ ಭಕ್ತರಿಗೆ ರಥಬೀದಿಗೆ ಪ್ರವೇಶಕ್ಕೆ ಅವಕಾಶವಿರಲಿಲ್ಲ. ಮಠದ ವೈದಿಕರು, ಗೊಲ್ಲರು, ಸಿಬ್ಬಂದಿಗಳು ಮಾತ್ರ ಸರಳವಾಗಿ ಸಾಂಪ್ರದಾಯಿಕವಾಗಿ ಆಚರಣೆ ನಡೆಸಿದರು.
ಪರ್ಯಾಯ ಅದಮಾರು ಮಠಾಧೀಶರು ಕಡಗೋಲು ಕೃಷ್ಣನ ಮೂರ್ತಿಯನ್ನು ಚಿನ್ನದ ರಥದಲ್ಲಿಟ್ಟು ಪ್ರದಕ್ಷಿಣೆ ತರುವಾಗ ಮಠದ ಗೊಲ್ಲರು ಮೊಸರುಕುಡಿಕೆಗಳನ್ನು ಒಡೆಯುತ್ತಾ ಸಾಗಿದರು. ರಥಬೀದಿಯ ನಾಲ್ಕೂ ಪ್ರವೇಶ ದ್ವಾರಗಳನ್ನು ಪೊಲೀಸರು ಬಂದ್ ಮಾಡುವ ಮೂಲಕ ಪ್ರವೇಸಕ್ಕೆ ನಿರಾಕರಣೆ ಮಾಡಿದ್ದರು.
ಒಟ್ಟಿನಲ್ಲಿ ಈ ಬಾರಿ ವಿಟ್ಲಪಿಂಡಿ ಸಂಪ್ರದಾಯಬದ್ಧವಾಗಿ ನೆರವೇರಿದ್ದು ಸರಳವಾಗಿ ನಡೆಯಿತು.
Comments are closed.