ಮನೋರಂಜನೆ

ನಟಿ ರಾಗಿಣಿಗಾಗಿ ಪತ್ನಿಯನ್ನೇ ಬಿಟ್ಟಿದ್ದ ರವಿಶಂಕರ್​!

Pinterest LinkedIn Tumblr


ಬೆಂಗಳೂರು: ಡ್ರಗ್ಸ್ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ರವಿಶಂಕರ್ ಮದುವೆ ಆಗಿ ಒಂದು ಮಗು ಇದ್ದರೂ ಪತ್ನಿಯನ್ನು ತೊರೆದಿದ್ದ. ಇದೆಲ್ಲವೂ ನಟಿ ರಾಗಿಣಿಗಾಗಿ!

ಆರ್​ಟಿಒ ಕಚೇರಿಯಲ್ಲಿ ದ್ವಿತೀಯ ದರ್ಜೆ ಕ್ಲರ್ಕ್ ಆಗಿದ್ದ ರವಿಶಂಕರ್​ ಸ್ಯಾಂಡಲ್​ವುಡ್​ ನಟಿ ರಾಗಿಣಿ ದ್ವಿವೇದಿಯ ಆಪ್ತ. ಸದ್ಯ ಡ್ರಗ್ಸ್​ ಕೇಸ್​ನಲ್ಲಿ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಪಟ್ಟಿದ್ದು, ಸರ್ಕಾರಿ ಕೆಲಸದಿಂದ ಅಮಾನತಿಗೂ ಒಳಗಾಗಿದ್ದಾನೆ. ತಂದೆಯ ನಿಧನದ ಬಳಿಕ ಅನುಕಂಪದ ಆಧಾರದಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದ. ಇವನಿಗೆ ಬರುತ್ತಿದ್ದದ್ದು ಮಾಸಿಕ ಸುಮಾರು 30 ಸಾವಿರ ಸಂಬಳ. ಆದರೆ ಈತ ನಡೆಸುತ್ತಿದ್ದದ್ದು ಮಾತ್ರ ಐಶಾರಾಮಿ ಜೀವನ.

‘ಮಾದಕ’ ನಟಿ ರಾಗಿಣಿ ದ್ವಿವೇದಿ ಜತೆ ಆಪ್ತತೆ ಬೆಳೆಸಿಕೊಂಡಿದ್ದ ರವಿಶಂಕರ್​ ತನ್ನ ಹೆಂಡತಿಯಿಂದ ದೂರವಾಗಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಮಗು ಇದ್ದರೂ ಕೂಡ ನಿರ್ಲಕ್ಷಿಸಿದ್ದ. ನಟಿ ಜತೆ ಪಾರ್ಟಿಯಲ್ಲೇ ಸದಾ ಬಿಜಿಯಾಗಿರುತ್ತಿದ್ದ ಎನ್ನಲಾಗಿದೆ.

Comments are closed.