ಮನೋರಂಜನೆ

ಕಚೇರಿಯ ಹಾನಿಗಾಗಿ ಸರಕಾರದ ಮುಂದೆ ಪರಿಹಾರ ನೀಡಲು ಆಗ್ರಹಿಸಿದ ನಟಿ ಕಂಗನಾ ರಣಾವುತ್

Pinterest LinkedIn Tumblr


ಮುಂಬೈ:  ಮುಂಬೈ ಮಹಾನಗರ ಪಾಲಿಕೆಯು ನನ್ನ ಕಚೇರಿಯ ಒಂದು ಭಾಗವನ್ನು ನೆಲಸಮ ಮಾಡಿದ್ದಕ್ಕಾಗಿ ಪರಿಹಾರ ನೀಡಬೇಕೆಂದು ಸರಕಾರದ ಮುಂದೆ ಬಾಲಿವುಡ್​ ನಟಿ ಕಂಗನಾ ರಣಾವುತ್​ ಬೇಡಿಕೆ ಇಟ್ಟಿದ್ದಾರೆ ಎಂದು ಮೂಲಗಳು ಹೇಳಿವೆ.

ಕೇಂದ್ರ ಸಚಿವ ರಾಮದಾಸ್​ ಅಠಾವಳೆ ಅವರು ಗುರುವಾರ ಮುಂಬೈನಲ್ಲಿ ಕಂಗನಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ಬಗ್ಗೆ ಮಾತನಾಡಿರುವ ಸಚಿವರು, ಸುಮಾರು 1 ಗಂಟೆ ಅವರೊಂದಿಗೆ ಮಾತನಾಡಿದೆ. ಮುಂಬೈನಲ್ಲಿ ಇರಲು ಯಾವುದೇ ಭಯವಿಟ್ಟುಕೊಳ್ಳಬೇಡಿ ಎಂದು ಹೇಳಿದ್ದೇನೆ. ಮುಂಬೈ ದೇಶದ ಆರ್ಥಿಕ ರಾಜಧಾನಿ ಮತ್ತು ಇಲ್ಲಿ ವಾಸಿಸಲು ಎಲ್ಲರಿಗೂ ಹಕ್ಕಿದೆ ಎಂದು ಸಚಿವರು, ನಮ್ಮ ಆರ್​ಪಿಐ (ರಿಪಬ್ಲಿಕನ್​ ಪಾರ್ಟಿ ಆಫ್​ ಇಂಡಿಯಾ) ಪಕ್ಷವು ಸದಾ ನಿಮಗೆ ಬೆಂಬಲವಾಗಿರಲಿದೆ ಎಂದು ಹೇಳಿದರು.

ಕಚೇರಿ ನೆಲಸಮ ಘಟನೆಯಿಂದ ಕಂಗನಾಗೆ ಅವಮಾನ ಆಗಿದೆಯಂತೆ. ಕಳೆದ ಜನವರಿಯಲ್ಲಷ್ಟೇ ನಿರ್ಮಿಸಿದ ಅವಳ ಕಚೇರಿ ಇದೀಗ ಹಾನಿಯಾಗಿದೆ. ಕಟ್ಟಡ ನಿರ್ಮಾಣಕಾರರು 2-3 ಇಂಚು ಹೆಚ್ಚಿನ ಜಾಗದಲ್ಲಿ ನಿರ್ಮಿಸಿದ್ದಾರೆಂಬುದು ಅವರಿಗೆ ತಿಳಿದಿರಲಿಲ್ಲವಂತೆ. ಅಕ್ರಮ ಭಾಗವನ್ನು ಮಾತ್ರ ಬಿಎಂಸಿ ನೆಲಸಮ ಮಾಡಬೇಕಿತ್ತು. ಆದರೆ, ಕಚೇರಿ ಒಳಗಿನ ಗೋಡೆ ಮತ್ತು ಫರ್ನಿಚರ್​ಗಳಿಗೂ ಹಾನಿಯಾಗಿವೆ. ಈ ಬಗ್ಗೆ ಕಂಗನಾ ನ್ಯಾಯಾಲಯ ಮೆಟ್ಟಿಲೇರಲಿದ್ದು, ಪರಿಹಾರಕ್ಕಾಗಿ ಬೇಡಿಕೆ ಇಡಲಿದ್ದಾರೆಂದರು.

ಬಿಎಂಸಿಯು ಕಂಗನಾಗೆ ತೀವ್ರ ಅನ್ಯಾಯ ಮಾಡಿದೆ ಮತ್ತು ಪ್ರತೀಕಾರದಿಂದ ವರ್ತಿಸಿದೆ ಎಂದು ನಾನು ಅವಳಿಗೆ ಹೇಳಿದೆ. ಯಾವುದೇ ಅನುಮೋದನೆಯನ್ನು ಪಡೆಯದೇ ಬಿಎಂಸಿ ತಂಡ ಬುಲ್ಡೋಜರ್​ ಮತ್ತು ಎಕ್ಸ್​ಕ್ಯಾವೆಟರ್ಸ್​ ಉಪಯೋಗಿಸಿ ಕಟ್ಟಡವನ್ನು ಹಾನಿಗಳಿಸಿದೆ ಎಂದು ಸಚಿವರು ಆರೋಪಿಸಿದ್ದಾರೆ.

Comments are closed.