ಮುಂಬಾಯಿ, ಸೆಪ್ಟಂಬರ್.13: ಮಹಾರಾಷ್ಟ್ರ ಸರಕಾರದ ವಿರುದ್ಧ ದ್ವನಿ ಎತ್ತಿದ್ದಕ್ಕೆ ನನಗೆ ಕಿರುಕುಳ ನೀಡುತ್ತಿದ್ದಾರೆ. ನನಗೆ ಅಸುರಕ್ಷಿತೆಯ ಭೀತಿ ಕಾಡುತ್ತಿದೆ. ದಯವಿಟ್ಟು ನನಗೆ ನ್ಯಾಯಕೊಡಿಸಿ ಎಂದು ನಟಿ ಕಂಗನಾ ರಣಾವತ್ ಅವರು ಮಹಾರಾಷ್ಟ್ರದ ರಾಜ್ಯಪಾಲರಲ್ಲಿ ವಿನಂತಿಸಿದ್ದಾರೆ.
ಬಾಲಿವುಡ್ ಮಾಫಿಯಾ ಮತ್ತು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಸಮರಕ್ಕೆ ನಿಂತಿರುವ ಕಂಗನಾ ಅವರು ಇಂದು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರನ್ನು ಬೇಟಿ ಮಾಡಿ ಶಿವಸೇನೆ ನೇತೃತ್ವದ ಮಹಾರಾಷ್ಟ್ರ ಸರಕಾರ ನನಗೆಕಿರುಕುಳ ನೀಡುತ್ತಿದೆ, ಇಲ್ಲಿ ನನಗೆ ಅಸುರಕ್ಷಿತೆಯ ಭೀತಿ ಕಾಡುತ್ತಿದೆ ಎಂದು ದೂರು ನೀಡಿದ್ದಾರೆ.
ಈ ಸಂದರ್ಭದಲ್ಲಿ ನನಗೆ ನ್ಯಾಯಕೊಡಿಸುವ ಮೂಲಕ ವ್ಯವಸ್ಥೆಯಲ್ಲಿ ಎಲ್ಲರಿಗೂ, ನಿರ್ದಿಷ್ಟವಾಗಿ ಯುವತಿಯರಿಗೆ ವಿಶ್ವಾಸ ಮೂಡುವಂತೆ ಮಾಡಬೇಕು ಎಂದು ಕಂಗನಾ ರಾಜ್ಯಪಾಲರಿಗೆ ಮನವಿ ಮಾಡಿರುವುದಾಗಿ ತಮ್ಮ ಟ್ವೀಟ್ ನಲ್ಲಿ ಬರೆದಿದ್ದಾರೆ.
ರಾಜ್ಯಪಾಲರು ನನ್ನ ಮಾತುಗಳನ್ನು ಮಗಳ ಮಾತು ಕೇಳುವಂತೆ ಕೇಳಿದ್ದಾರೆ, ನಾನು ತುಂಬಾ ಅದೃಷ್ಟವಂತೆ, ನನಗೆ ನ್ಯಾಯ ಸಿಗುವುದಲ್ಲಿ ಯಾವ ಸಂಶಯವೂ ಇಲ್ಲ ಎಂದು ಕಂಗನಾ ಅವರು ಟ್ವೀಟ್ ಮಾಡಿ ತಿಳಿಸಿದ್ದಾರೆ.
Comments are closed.