ರಾಷ್ಟ್ರೀಯ

ಲಿವ್​ ಇನ್​ ರಿಲೇಷನ್​ನಲ್ಲಿರುವ ಪ್ರೇಮಿಗಳಿಗೆ 50 ಸಾವಿರ ದಂಡ ವಿಧಿಸಿದ ನ್ಯಾಯಾಲಯ!

Pinterest LinkedIn Tumblr


ಪಂಜಾಬ್​: ಲಿವ್​ ಇನ್​ ರಿಲೇಷನ್​ನಲ್ಲಿ ಇರುವ ಪ್ರೇಮಿಗಳು ಕೋರ್ಟ್ ನಿಂದ 50 ಸಾವಿರ ರೂಪಾಯಿ ದಂಡ ಹಾಕಿಸಿಕೊಂಡ ಘಟನೆ ವರದಿಯಾಗಿದೆ.

ರೇಖಾ ಹಾಗೂ ಸಂತೋಷ್​ (ಹೆಸರು ಬದಲಾಯಿಸಲಾಗಿದೆ) ಪ್ರೇಮಿಗಳ ಕಥೆ ಇದು. ಇವರಿಬ್ಬರೂ ಹೇಳಿಕೇಳಿ ವಿವಾಹಿತರು. ಅಂದರೆ ರೇಖಾಳಿಗೂ ಬೇರೆ ಮದುವೆಯಾಗಿದೆ, ಸಂತೋಷ್​ಗೂ ಮದುವೆಯಾಗಿದೆ. ಆದರೆ ಇವರಿಬ್ಬರೂ ತಂತಮ್ಮ ಪತಿ-ಪತ್ನಿಗೆ ವಿಚ್ಛೇದನ ನೀಡದೆ ಒಟ್ಟಿಗೇ ಲಿವ್​ ಇನ್​ ಸಂಬಂಧದಲ್ಲಿ ನಾಲ್ಕೈದು ವರ್ಷಗಳಿಂದ ನೆಲೆಸಿದ್ದಾರೆ.

ಸುಮ್ಮನೇ ಒಟ್ಟಿಗೇ ಇದ್ದಿದ್ದರೆ ಪರವಾಗಿರಲಿಲ್ಲ. ಆದರೆ ಇವರಿಬ್ಬರೂ ತಂತಮ್ಮ ಸಂಗಾತಿ ವಿರುದ್ಧ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ರೇಖಾ ತನ್ನ ಗಂಡನ ವಿರುದ್ಧ ಹಾಗೂ ಸಂತೋಷ್​ ತನ್ನ ಹೆಂಡತಿ ವಿರುದ್ಧ ದೌರ್ಜನ್ಯ ಕೇಸ್​ ದಾಖಲು ಮಾಡಿದ್ದಾರೆ.

ಇದರ ವಿಚಾರಣೆ ವೇಳೆ ರೇಖಾ 2016ರಲ್ಲಿಯೇ ಗಂಡನನ್ನು ಬಿಟ್ಟು ಬಂದಿರುವ ವಿಷಯ ತಿಳಿದಿದೆ. ಇದಾದ ಮೇಲೆ ತನ್ನ ಪ್ರಿಯಕರನ ಜತೆ ಲಿವ್​ ಇನ್​ನಲ್ಲಿ ಇರುವ ಈಕೆ ಎರಡು ವರ್ಷ ಬಿಟ್ಟು ಗಂಡನ ವಿರುದ್ಧ ದೌರ್ಜನ್ಯದ ಅರ್ಜಿ ಸಲ್ಲಿಸಿದ್ದು ತಿಳಿದಿದೆ. ಅದೇ ರೀತಿ ಸಂತೋಷ್​ ಕೂಡ ತನ್ನ ಪತ್ನಿಯನ್ನು ಬಿಟ್ಟು ರೇಖಾಳ ಜತೆ ನೆಲೆಸಿರುವುದು ಕೋರ್ಟ್​ ಗಮನಕ್ಕೆ ಬಂದಿದೆ.

ವಿಚಿತ್ರ ಎಂದರೆ, ಇಬ್ಬರೂ ತಂತಮ್ಮ ಸಂಗಾತಿಗೆ ವಿಚ್ಛೇದನ ನೀಡದೇ ಲಿವ್​ ಇನ್​ನಲ್ಲಿ ನೆಲೆಸಿದ್ದಾರೆ. ಇಬ್ಬರ ವಿಚ್ಛೇದನ ಅರ್ಜಿಗಳೂ ಇತ್ಯರ್ಥಕ್ಕೆ ಬಾಕಿ ಇವೆ.

ವಿಚ್ಛೇದನದ ತೀರ್ಪು ಬರುವ ಮುನ್ನವೇ ಅನೇಕ ವರ್ಷಗಳಿಂದ ಒಟ್ಟಿಗೇ ಇದ್ದುದೂ ಅಲ್ಲದೇ ದೌರ್ಜನ್ಯದ ಕೇಸ್​ ದಾಖಲು ಮಾಡಿ ಕೋರ್ಟ್​ ಸಮಯವನ್ನು ವ್ಯರ್ಥ ಮಾಡಿದುದಕ್ಕೆ ಪಂಜಾಬ್​-ಹರಿಯಾಣ ಹೈಕೋರ್ಟ್​ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳನ್ನು ನೀಡದೇ ಸುಖಾಸುಮ್ಮನೆ ಕೋರ್ಟ್​ ಸಮಯ ಹಾಳು ಮಾಡಿರುವುದು ನ್ಯಾಯಮೂರ್ತಿಗಳ ಸಿಟ್ಟಿಗೆ ಕಾರಣವಾಗಿದೆ.

Comments are closed.