ಉಡುಪಿ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಡಿ.ಜೆ.ಹಳ್ಳಿ ಪ್ರಕರಣ, ಡಗ್ಸ್ ಹಗರಣಗಳಿಂದ ರಾಜ್ಯದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಆರೋಪಿಸಿದ್ದಾರೆ.ಭಾನುವಾರ ಉಡುಪಿಯ ಕಾಂಗ್ರೆಸ್ ಭವನದಲ್ಲಿ ಅವರು ಮಾತನಾಡಿದರು.
ವೈಫಲ್ಯ ಮರೆಮಾಚಲು ಸರಕಾರ ಡ್ರಗ್ಸ್ ವಿಚಾರವನ್ನು ಮುನ್ನೆಲೆಗೆ ತಂದು ಇತರ ಆಡಳಿತ ವೈಫಲ್ಯ ಮರೆಮಾಡಿದೆ ಸಿಟಿ ರವಿಗೆ ಯಾರಿಂದ ಒತ್ತಡ ಇದೆ ಹೇಳಲಿ. ನೀವು ಸಿಎಂ ಅಲ್ಲ, ಗೃಹ ಸಚಿವ ಕೂಡಾ ಅಲ್ಲ. ಕಾಂಗ್ರೆಸ್ ಒತ್ತಡ ಯಾವತ್ತೂ ಹೇರಲ್ಲ. ಕೇಂದ್ರ ರಾಜ್ಯದಲ್ಲಿ ನಿಮ್ಮದೇ ಸರಕಾರ ಇದೆ ತನಿಖೆ ಮಾಡಿದರೆ ತನಿಖೆಗೆ ಬೆಂಬಲ ಕೊಡುತ್ತೇವೆ. ಕೇವಲ ಹೇಳಿಕೆಯಿಂದ ವ್ಯವಸ್ಥೆ ಸರಿ ಮಾಡಲು ಸಾಧ್ಯವಿಲ್ಲ. ರಾಗಿಣಿ ಬಿಜೆಪಿಯ ಕಾರ್ಯಕರ್ತೆಯಾಗಿದ್ದು ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದರು.
ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆ ಮೇಲೆ ದಾಳಿ ವಿಚಾರದಲ್ಲಿ ಪ್ರತಿಕ್ರಿಯಿಸಿದ ಅವರು ಅಖಂಡರು ನಮ್ಮ ಪಕ್ಷದ ಶಾಸಕರಾಗಿದ್ದು ಅವರ ತಂದೆ ಕೂಡಾ ಕಾಂಗ್ರೆಸ್ ಮುಖಂಡ. ಅವರಿಗೆ ಪಕ್ಷ ಬೆನ್ನೆಲುಬಾಗಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಲೆಕ್ಕಕೊಡಿ ಅಭಿಯಾನದೊಂದಿಗೆ ರಾಜ್ಯ ಸರಕಾರ ಕೋವಿಡ್ ಹೆಸರಿನಲ್ಲಿ ನಡೆಸಿರುವ ಭ್ರಷ್ಟಾಚಾರ ವನ್ನು ಜನರಿಗೆ ತಿಳಿಸುವ ಅಭಿಯಾನ ವನ್ನು ಹಮ್ಮಿಕೊಂಡಿದೆ ಎಂದು ಸಲೀಂ ಅಹಮ್ಮದ್ ಹೇಳಿದರು.
ಈ ಸಂದರ್ಭ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕರಾದ ನಾರಾಯಣ ಸ್ವಾಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕೆಪಿಸಿಸಿ ಉಪಾಧ್ಯಕ್ಷರಾದ ಮಂಜುನಾಥ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.
Comments are closed.