ಮೇರುನಟ ಆನಂತ್ನಾಗ್ ಅವರ ಸಿನಿಮಾ ಜೀವನ ಪ್ರವೇಶ ಹೇಗಾಯ್ತು.. ಅವರ ಮಾತಿನಿಂದಲೇ ಕೇಳಿ, ಜೊತೆಗೆ ಮಧುರವಾದ ಹಾಡನ್ನು..
ಮಂಗಳೂರು, ಸೆಪ್ಟಂಬರ್.23: ಕನ್ನಡ ಚಿತ್ರರಂಗದ ಪ್ರಸಿದ್ಧ ನಾಯಕ ನಟ, ಸಪ್ತಭಾಷಾ ನಟ, ಮೇರು ನಟ ಶ್ರೀ ಅನಂತ್ ನಾಗ್ ಅವರು 2017ರಲ್ಲಿ ನಡೆದ ಧ್ವನಿ ಸುರುಳಿ ಬಿಡುಗಡೆ ಸಮಾರಂಭ ವೊಂದರಲ್ಲಿ ತಮ್ಮ ಸಿನಿಮಾ ಜೀವನ ಪ್ರವೇಶದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಜೊತೆಗೆ ಅದೇ ಕಾರ್ಯಕ್ರಮದಲ್ಲಿ ಅಲ್ಲಿ ಸೇರಿದ್ದ ಬಹು ಜನತೆಯ ಅಪೇಕ್ಷೆ ಮೇರೆಗೆ “ಭಾಗ್ಯದ ಲಕ್ಷ್ಮೀ ಭಾರಮ್ಮ” ಹಾಡನ್ನು ಹಾಡಿದ್ದು, ತಾನೊಬ್ಬ ಉತ್ತಮ ನಟ ಮಾತ್ರವಲ್ಲ, ಉತ್ತಮ ಗಾಯಕ ಕೂಡ ಎಂಬುವುದನ್ನು ಸಾಭೀತು ಪಡಿಸಿದ್ದಾರೆ. ಇವರ ಈ ಹಾಡಿಗೆ ಅಲ್ಲಿ ನೆರಿದಿದ್ದ ಪ್ರೇಕ್ಷಕರು ಮೂಕ ವಿಸ್ಮಿತರಾಗಿದ್ದರು.
ಕನ್ನಡ ಚಲನಚಿತ್ರ ನಿರ್ಮಾಪಕ ಹಾಗೂ ಖ್ಯಾತ ಹಾಡುಗಾರರು ಆಗಿರುವ ದುಬೈಯ ಖ್ಯಾತ ಉದ್ಯಮಿ ಶ್ರೀ ಹರೀಶ್ ಶೇರಿಗಾರ್ ಹಾಗೂ ಶ್ರೀಮತಿ ಶರ್ಮಿಳಾ ಶೇರಿಗಾರ್ ಅವರು ನಿರ್ಮಿಸಿದ ಬಹುಕೋಟಿ ವೆಚ್ಚದ ಪ್ರಥಮ ಕನ್ನಡ ಚಿತ್ರ “ಮಾರ್ಚ್-22 “ ಇದರ ಧ್ವನಿ ಸುರುಳಿ ಬಿಡುಗಡೆ ಸಮಾರಂಭದಲ್ಲಿ ಶ್ರೀ ಅನಂತ್ ನಾಗ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಸಂದರ್ಭ.
(ಕಾರ್ಯಕ್ರಮ ಮಂಗಳೂರಿನ ಪಂಪ್ ವೆಲ್ ಸಮೀಪದ ಪ್ರಸಿದ್ಧ ಫಾದರ್ ಮುಲ್ಲರ್ ಸಭಾಂಗಣದಲ್ಲಿ ಸಚಿವರು ಹಲವಾರು ಜನಪ್ರತಿನಿಧಿಗಳು, ಉದ್ಯಮಿಗಳು, ಸಮಾಜದ ಗಣ್ಯರು ಹಾಗೂ ಕಲಾವಿದರ ಉಪಸ್ಥಿತಿಯಲ್ಲಿ ಅದ್ಧೂರಿಯಾಗಿ ನಡೆದಿತ್ತು)
ಎಲ್ಲರಿಗೂ ನನ್ನ ನಮಸ್ಕಾರ ಎಂದು ಮಾತು ಆರಂಭಿಸಿದ ಶ್ರೀ ಆನಂತ್ ನಾಗ್ ಅವರು,
ನಾನು ಮುಂಬಾಯಿಗೆ ಹೋದ ನಂತರ 1967ರಲ್ಲಿ ನಾಟಕಗಳ ಮೂಲಕ ರಂಗ ಪ್ರವೇಶ ಮಾಡಿದ್ದೇ. ಅಂತ ಹೇಳ ಬಹುದು. ನನ್ನ ಗುರುಗಳಾದ ದಿ. ವೇಂಕಟ್ ರಾವ್ ತಳಗೇರಿಯವರು, ದಿ. ಪ್ರಭಾಕರ್ ಮದೂರ್ ಅವರು, ದಿ. ಆರ್. ಡಿ ಕಾಮಾತ್ ಅವರು, ದಿ.ಕೆ. ಸುವರ್ಣ ಅವರನ್ನು ಈ ಸಂದರ್ಭದಲ್ಲಿ ನೆನೆಯಲೇ ಬೇಕು. ನನ್ನ ರಂಗ ಭೂಮಿಯ ಪ್ರವೇಶ ಆಗಿದ್ದು, ಇವರೆಲ್ಲರ ಕನ್ನಡ, ಕೊಂಕಣಿ ನಾಟಕಗಳಿಂದ.
ಅಮೇಲೆ ನನ್ನ ಅಭಿನಯ ನೋಡಿ ಅಮುಲ್ ಪಾದೇಯವರು ನನ್ನನ್ನು ಸತ್ಯದೇವ್ ದುಭೆಯವರ ಬಳಿ ಕರೆದುಕೊಂಡು ಹೋದರು. ಅವರ ಮೂಲಕ ನಾನು ಮರಾಠಿ, ಹಿಂದಿ ನಾಟಕಗಳಲ್ಲಿ ನಟಿಸಲು ಪ್ರಾರಂಭಿಸಿದೆ.
ಆ ರೀತಿ ನಾನು ಬಹಳಷ್ಟು ಕಲಿತದ್ದು ಸತ್ಯದೇವ್ ದುಭೆಯವರಿಂದಲೇ. ಅವರೇ ನನಗೆ ಒಂದು ರೀತಿಯಲ್ಲಿ ಅಧುನಿಕ ಚಿತ್ರರಂಗದ ತರಬೇತಿ ನೀಡಿದವರು. ಅಂದರೆ ಸುಮಾರು ಐವತ್ತು ವರ್ಷಗಳ ಹಿಂದೆ.
ಇಂತಹವರಿಂದಲೇ ನಾವು ಕಲಿತದ್ದು ಎಂದು ಇಂದು ಚಿತ್ರರಂಗದ ಅದ್ಭುತ ಖಳನಟ ರವಿಕಾಳೆಯರು ನಾನು ಭೇಟಿಯಾದಗ ಹೇಳಿದ್ದರು. ನಾವು ಗುರುಬಂಧುಗಳು ಎಂದು ಅವರು ಹೇಳಿರುವುದನ್ನು ನಾನು ಬಹಳ ಅಭಿಮಾನದಿಂದ ಉಲ್ಲೇಖ ಮಾಡುತ್ತಿದ್ದೇನೆ.
ಅವರ ಜೊತೆ ಚಿತ್ರರಂಗದ ಖ್ಯಾತ ನಟ ಅಶಿಶ್ ವಿದ್ಯಾರ್ಥಿಯವರು ಕೂಡ ಅದೇ ಸತ್ಯ ದೇವ್ ದುಭೆ ಅವರ ಜೊತೆ ತರಬೇತಿ ಪಡೆವರು. ಅದೇ ಸತ್ಯ ದೇವ್ ದುಭೆ ಅವರು ನನ್ನನ್ನು ಶ್ಯಾಮ್ ಬೆನೆಗಲ್ ಅವರ ಬಳಿ ಕರೆದ್ಯೊಯ್ದುರು. ಅವರು ಆಗ ಅಂಕುರ್ ಸಿನಿಮಾ ಮಾಡುತ್ತಿದ್ದರು.
ಶ್ಯಾಮ್ ಬೆನೆಗಲ್ ಅಂದರೆ ದಕ್ಷಿಣ ಜಿಲ್ಲೆಯವರು ಎಂದು ಬೇರೆ ಹೇಳುವ ಅವಶ್ಯಕತೆ ಇಲ್ಲ ಎಂದು ನಾನು ತಿಳಿದುಕೊಳ್ಳುತ್ತೇನೆ. ಅವರು ನನ್ನನ್ನು ನೋಡಿದ ತಕ್ಷಣ ನಿನ್ನ ಎಡಗಡೆ ನೋಡು, ಬಲಗಡೆ ನೋಡು ಎಂದು ಹೇಳಿ ನಿಮ್ಮ ಪ್ರೊಫೈಲ್ ನೋಡಿ ಅಯಿತು. ನಿನ್ನ ಕಣ್ಣು ತೋರಿಸು ಎಂದು ಒಂದು ರೀತಿಯಲ್ಲಿ ಹೇಳಿ ನೀನು ಅಯ್ಕೆಯಾದೆ ಎಂದು ಹೇಳಿದರು.
ಇದೆಲ್ಲಾ ಶ್ಯಾಮ್ ಬೆನೆಗಲ್ ಅವರು ಹೇಳಿದ್ದು ಇಂಗ್ಲೀಷ್ ಹಾಗೂ ಹಿಂದಿಯಲ್ಲಿ…. ನಂತರ ಅವರು ಕೊಂಕಣಿ ಭಾಷಯಲ್ಲಿ ನೀನು ಡೇವಿಡ್ ವಿಲಿಯಂಸ್ ಅವರ ಚಿತ್ರ ನೋಡಿಲ್ಲವಾ ಎಂದು ನನ್ನನ್ನು ಕೇಳಿದರು. ಆಗ ನಾನು ಅವರ ಹೆಸರೇ ಕೇಳಿಲ್ಲ. ಇಲ್ಲ ನನಗೆ ಗೊತ್ತಿಲ್ಲ ಎಂದು ಹೇಳಿದೆ. ಅವರ ಸಿನಿಮಾ ಸ್ವಲ್ಪ ನೋಡು. ಅವರ ಸಿನಿಮಾ ನೋಡುವುದರಿಂದ ನಿನಗೆ ನಟನೆ ಹೇಗೆ ಮಾಡಬೇಕೆಂಬುದು ತರಬೇತಿ ಸಿಗುತ್ತದೆ. ಅವರಿಂದ ನೀನು ಬಹಳಷ್ಟು ಕಲಿಯ ಬಹುದೆ ಎಂದು ಹೇಳಿದರು.
ಅವರು ಹೇಳಿದ ಅ ಡೇವಿಡ್ ವಿಲಿಯಂಸ್ ಅವರ ಚಿತ್ರವನ್ನು ನೋಡಿದೆ. ಅವರ ಚಿತ್ರವನ್ನು ನೋಡಿದ ಮೇಲೆ ನನಗೆ ಅನಿಸಿತ್ತು. ಎಂತಹ ಒಬ್ಬ ಅಧ್ಬುತ ನಟ, ಎಂತಹ ವೈಶ್ಯಲ್ಯ ಇವರದ್ದು, ಸುಂದರವಾದ ತಾಂತ್ರಿಕತೆ ಇವರದ್ದು ಎಂದು. ಅವರೊಬ್ಬರು ಅಧ್ಬುತ ಕಲಾವಿದರು. ಅವರ ಬಗ್ಗೆ ಹೇಳ ಬೇಕಾದರೇ ನನಗೆ ಕೆಲವು ದಿನಗಳೆ ಬೇಕು.
1989ರಲ್ಲಿ ನನಗೆ ಕೂಡ್ಲು ರಾಮಕೃಷ್ಣ ಅವರ ಪರಿಚಯ ನನಗೆ ಅಯಿತು. ಅವರ ಉದ್ಭವ ಸಿನಿಮಾ ಮಾಡಿದ್ದೆ. ಅ ಸಂದರ್ಭದಲ್ಲಿ ಅವರು ನನಗೆ (1989ರಲ್ಲಿ )ಮಾರ್ಚ್ -22 ಸಿನಿಮಾ ಬಗ್ಗೆ ತಿಳಿಸಿದ್ದರು. ಆದರೆ ನಾನು ಆಗ ಅವರಿಗೆ ಹೇಳಿದ್ದೇ, ಇಂತಹ ಸಿನಿಮಾ ಮಾಡುವುದು ತುಂಬಾ ಕಷ್ಟ. ಏಕೆಂದರೇ ಅವಾಗ 50 ಲಕ್ಷ ಖರ್ಚು ಮಾಡುವುದೇ ದೊಡ್ಡ ಸಾಹಸ, ಇಂತಹ ದೊಡ್ಡ ಬಜೆಟ್ ಸಿನಿಮಾಕ್ಕೆ ಕೈ ಹಾಕದಿರುವುದೇ ಒಳ್ಳೆದ್ದು ಎಂದು ಅವರಿಗೆ ಸಲಹೆ ನೀಡಿದ್ದೇ.
ಆದರೇ ಅದೇ ಚಿತ್ರವನ್ನು ಶ್ರೀ ಹರೀಶ್ ಶೇರಿಗಾರ್ ಅವರು, 2016-17ರಲ್ಲಿ ಅದು ಮೂರು ಕೋಟಿಯಲ್ಲ ಆರು ಕೋಟಿ ಬಜೆಟ್ ನಲ್ಲಿ ಮಾರ್ಚ್ -22 ಸಿನಿಮಾವನ್ನು ಮಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಬಹುದೊಡ್ಡ ಕೊಡುಗೆ ನೀಡಿದರು. ಈ ವಿಚಾರದಲ್ಲಿ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಆನಂತ್ ನಾಗ್ ಅವರು ಹೇಳಿದರು. ಮಾತ್ರವಲ್ಲದೇ ಅವರ ಮುಂದಿನ ಎಲ್ಲಾ ಚಿತ್ರ ಹಾಗೂ ಅವರ ಉದ್ಯಮದಲ್ಲಿ ಅವರಿಗೆ ಬಹುದೊಡ್ಡ ಯಶಸ್ಸು ಸಿಗಲಿ ಎಂದು ನಾನು ಕರ್ನಾಟಕ ಜನತೆ ಪರವಾಗಿ ಹಾರೈಸುತ್ತೇನೆ ಎಂದು ಆನಂತ್ ನಾಗ್ ಹೇಳಿದರು.
ಹರೀಶ್ ಶೇರಿಗಾರ್ ಬಗ್ಗೆ ಅಭಿಮಾನ ವ್ಯಕ್ತಪಡಿಸಿದ ಆನಂತ್ ಸಾರ್ :
ಕಾರ್ಯಕ್ರಮದ ಆರಂಭದಲ್ಲಿ ವೇದಿಕೆಗೆ ಬಂದ ಶ್ರೀ ಆನಂತ್ ನಾಗ್ ಅವರು, ಎಲ್ಲರಿಗೂ ನನ್ನ ನಮಸ್ಕಾರ, ಆತ್ಮೀಯ ಕಲಾಭಿಮಾನಿಗಳೇ, ಹಿರಿಯರೇ , ಮಿತ್ರರೇ, ಮಹಿಳೆಯರೇ ಹಾಗೂ ಪುರುಷರೇ, ಇವತ್ತಿನ್ನ ನಿಜವಾದ ಹೀರೋ ಶ್ರೀ ಹರೀಶ್ ಶೇರಿಗಾರ್ ಅಂತಹ ನಾನು ಬೇರೆ ಹೇಳಬೇಕಾಗಿಲ್ಲ. ಮಾರ್ಚ್-22 ಚಿತ್ರದ ನಿಜವಾದ ನಾಯಕ ಕೂಡ ಶ್ರೀ ಹರೀಶ್ ಶೇರಿಗಾರ್ ಅವರೇ.. ಅವರು ನಾನು ನಟಿಸಿದ ಚಿತ್ರದ ಹಾಡನ್ನು (ಎಸ್ ಪಿ ಬಾಲ ಸುಬ್ರಹ್ಮಣ್ಯಂ ಅವರ ಧ್ವನಿಯಲ್ಲಿ) ನಿಮ್ಮ ಮುಂದೆ ಹಾಡಿದರು. ಮೂಲತಹ ಎಸ್ ಪಿ ಬಾಲ ಸುಬ್ರಹ್ಮಣ್ಯಂ ಅವರು ನನ್ನ ಹೆಚ್ಚಿನ ಚಿತ್ರಗಳಲ್ಲಿ ಧ್ವನಿ ಕೊಟ್ಟಿದ್ದಾರೆ.
ಆದರೇ ಹರೀಶ್ ಶೇರಿಗಾರ್ ಅವರು ಅವರ ಧ್ವನಿಯಲ್ಲಿ ಹಾಡುವ ಮೂಲಕ ನನ್ನನ್ನು ಅಚ್ಚರಿಗೊಳಿಸಿದರು. ಎಸ್ಪಿಯವರು ಯಾವ ಪಿಚ್ಚ್ ನಲ್ಲಿ ಹಾಡುತ್ತಿದ್ದರು ಅದೇ ಪಿಚ್ಚ್ ನಲ್ಲಿ ಶ್ರೀ ಹರೀಶ್ ಶೇರಿಗಾರ್ ಅವರು ಬಹಳ ಸುಂದರವಾಗಿ ಹಾಡುವ ಮೂಲಕ ನನಗೆ ಅಚ್ಚರಿ ಮೂಡಿಸಿದರು. ಇದಕ್ಕೆ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅಂತಹ ಅಧ್ಬುತ ಕಲಾವಿದ ಶ್ರೀ ಹರೀಶ್ ಶೇರಿಗಾರ್ ಹಾಗೂ ಶ್ರೀಮತಿ ಶರ್ಮಿಳಾ ಶೇರಿಗಾರ್ ಅವರನ್ನು ನಾನು ಹಾಗೂ ನನ್ನ ಪತ್ನಿ ಗಾಯಾತ್ರಿ ಅನಂತ್ ನಾಗ್ ಸಂದಿಸಿದ್ದೇ ನಮ್ಮ ಭಾಗ್ಯ ಎಂದು ತಿಳಿದು ಕೊಳ್ಳುತ್ತೇನೆ ಎಂದು ಹೇಳಿದ್ದರು.
“ಇಂಗ್ಲೀಷ್” ಸಿನಿಮಾ ಮೂಲಕ ಕೋಸ್ಟಲ್ ವುಡ್ಗೆ ಎಂಟ್ರಿ :
ಕನ್ನಡ ಚಿತ್ರರಂಗದ ಪ್ರಸಿದ್ಧ ನಾಯಕ ನಟರಲ್ಲೊಬ್ಬರು. ತಮ್ಮ ಸ್ಫುರದ್ರೂಪ ಮತ್ತು ಸಹಜ ನಟನೆಯಿಂದ ಭಾರತದಾದ್ಯಂತ ಅಪರೂಪದ ನಟ ಎಂದು ಹೆಸರಾದವರು ಅನಂತನಾಗ್. ಇವರು ಕರ್ನಾಟಕ ರಾಜ್ಯ ಸರಕಾರದಲ್ಲಿ ಹಿಂದೆ ಮಂತ್ರಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಅನಂತ್ ನಾಗ್ ಅವರು ಕನ್ನಡ, ಹಿಂದಿ, ಮರಾಠಿ, ತೆಲುಗು, ಒಂದು ಇಂಗ್ಲೀಷ್ ಸೇರಿದಂತೆ 200ಕ್ಕೂ ಹೆಚ್ಚು ಚಲನ ಚಿತ್ರಗಳಲ್ಲಿ ನಟಿಸಿದ್ದಾರೆ. ಜೊತೆಗೆ ಜನಪ್ರಿಯ ಧಾರಾವಾಹಿಗಳಲ್ಲೂ ನಟಿಸಿದ್ದಾರೆ.
ಇತ್ತೀಚಿಗೆ ದುಬಾಯಿಯ ಖ್ಯಾತ ಉದ್ಯಮಿ, ಚಲನ ಚಿತ್ರ ನಿರ್ಮಾಪಕ ಶ್ರೀ ಹರೀಶ್ ಶೇರಿಗಾರ್ ಹಾಗೂ ಶ್ರೀಮತಿ ಶರ್ಮಿಳಾ ಶೇರಿಗಾರ್ (ಆಕ್ಮೆ ಮೂವೀಸ್) ನಿರ್ಮಾಣದ “ಇಂಗ್ಲೀಷ್” ಹೆಸರಿನ ತುಳು ಚಿತ್ರದಲ್ಲಿ ನಟಿಸುವ ಮೂಲಕ ಮೊದಲ ಬಾರಿಗೆ ಕೋಸ್ಟಲ್ ವುಡ್ಗೆ ಎಂಟ್ರಿ ಕೊಟ್ಟಿದ್ದಾರೆ.
Comments are closed.