ಆರೋಗ್ಯ

ಕೆಲವು ವಸ್ತುಗಳನ್ನು ಫ್ರಿಡ್ಜ್ನ ಒಳಗೆ ಇಡುವಾಗಿಲ್ಲ ಯಾಕೆ? ಕಾರಣ ತಿಳಿಯಿರಿ..

Pinterest LinkedIn Tumblr

ಮಾರುಕಟ್ಟೆಗೆ ಹೋಗಿ ಬಂದ ಮೇಲೆ ಕೆಲವರು ತಂದ ತರಕಾರಿ , ತಿಂಡಿ ತಿನಸು ಎಲ್ಲವನ್ನು ಫ್ರಿಡ್ಜ್ನ ಒಳಗೆ ಇಡಲು ಮುಂದಾಗುತ್ತಾರೆ, ಪ್ರೀಯ ಓದುಗರೆ ದಯವಿಟ್ಟು ಇನ್ನೂ ಮುಂದೆ ಎಲ್ಲವನ್ನು ಫ್ರಿಡ್ಜ್ನ ಒಳಗೆ ಹಿಡುವ ಮೊದಲು ಇದನ್ನೋಮ್ಮೆ ಓದಿಕೊಳ್ಳಿ.

ತುಳಸಿ:
ತುಳಸಿಯನ್ನುಫ್ರಿಡ್ಜ್ನಲ್ಲಿ ಇಟ್ಟಲ್ಲಿ ಅವುಗಳು ಫ್ರಿಡ್ಜ್ನಲ್ಲಿರುವ ಎಲ್ಲಾ ವಾಸನೆಯನ್ನು ಹೀರಿಕೊಂಡು ತನ್ನ ನೈಜತೆಯನ್ನು ಕಳೆದುಕೊಳ್ಳುತ್ತದೆ
ಹೀಗೆ ಮಾಡಿ ನೋಡಿ: ಒಂದು ಬಟ್ಟಲಲ್ಲಿ ನೀರನ್ನು ತುಂಬಿಸಿ ಅದರಲ್ಲಿ ತುಳಸಿಯನ್ನು ಹೂವುಗಳಂತೆ ತೇಲಿಸಿ, ತುಳಸಿಯು ಬಹಳ ಸಮಯ ತನ್ನ ನೈಜತೆಯನ್ನು ಕಳೆದುಕೊಳ್ಳುವುದಿಲ್ಲ.

ಆಲೂಗಡ್ಡೆ:
ಆಲೂಗಡ್ಡೆಯನ್ನು ಅತೀ ಕಡಿಮೆ ಉಷ್ಣಾಂಶದಲ್ಲಿ (BELOW 7C) ಶೇಖರಿಸುವುದರಿಂದ, ಆಲೂಗಡ್ಡೆಯಲ್ಲಿ ಒಂದು ಹುಳಿ ಪದಾರ್ಥವಾಗಿ ಮಾರ್ಪಾಡಾಗುತ್ತದೆ.
ಹೀಗೆ ಮಾಡಿ ನೋಡಿ:ಆಲೂಗಡ್ಡೆಯನ್ನು ಫ್ರಿಡ್ಜ್ನ ಬದಲಾಗಿ ಪೇಪರ್ ಬ್ಯಾಗ್ನಲ್ಲಿ ಶೇಖರಿಸಿಟ್ಟಲ್ಲಿ ಹಲವು ದಿನಗಳ ತನಕ ತಾಜಾತನದಿಂದ ಕೂಡಿರುತ್ತವೆ.

ಚಾಕೋಲೇಟ್:
ಚಾಕೋಲೇಟ್ಗಳನ್ನು ಫ್ರಿಡ್ಜ್ನಲ್ಲಿ ಶೇಖರಿಸಿಟ್ಟಲ್ಲಿ ಅದರಲ್ಲಿರುವ ಸುಕ್ರೋಸ್(ಸಕ್ಕರೆ)ಯು ಚಾಕೋಲೇಟ್ ಮೇಲ್ಪದರಕ್ಕೆ ಬಂದು ಚಾಕೋಲೇಟ್ನ್ ನಿಜವಾದ ಸ್ವಾದವನ್ನು ಹಾಳುಮಾಡುತ್ತದೆ.
ಹೀಗೆ ಮಾಡಿ ನೋಡಿ:ಚಾಕೋಲೇಟ್ಗಳನ್ನೂ AIR TIGHT CONTAINER ಗಳಲ್ಲಿ ಶೇಖರಿಸಿಟ್ಟಲ್ಲಿ ಬಹಳ ದಿನಗಳ ಕಾಲ ಚಾಕಲೇಟ್ ತನ್ನ ಸ್ವಾದವನ್ನು ಉಳಿಸಿಕೊಳ್ಳುತ್ತದೆ

ಈರುಳ್ಳಿ:
ಈರುಳ್ಳಿಯು ಸಹಜವಾಗಿ ಒಣಗಿರುತ್ತವೆ, ನಾವು ಅವುಗಳನ್ನು ಫ್ರಿಡ್ಜ್ನನಲ್ಲಿ ಶೇಖರಿಸುವುದರಿಂದ ಅವುಗಳು ತೇವಾಂಶವನ್ನು ಹೀರಿಕೊಂಡು ಕೊಳೆತುಹೋಗುವ ಸಂಭವವಿರುತ್ತದೆ. ಹೀಗೆ ಮಾಡಿ ನೋಡಿ:ಈರುಳ್ಳಿಯನ್ನು ಸ್ವಚ್ಛವಾದ ಗಾಳಿ ಆಡುವ ಜಾಗದಲ್ಲಿ ಹರಡಿ.

ಜೇನುತುಪ್ಪ:
ಜೇನುತುಪ್ಪವನ್ನು ಫ್ರಿಡ್ಜ್ನಲ್ಲಿ ಶೇಖರಿಸಿಡುವುದರಿಂದ ಅಲ್ಲಿಯ ತಂಪು ಹಾಗು ತೇವಾಂಶ ಜೇನುತುಪ್ಪವನ್ನು ಗಟ್ಟಿಯಾಗಿಸಬಲ್ಲದು ಅದು ಜೇನಿನ ನೈಜತೆಯನ್ನು ಹಾಳುಮಾಡುವುದಲ್ಲದೆ ಸ್ವಾದ ಕಳೆದುಕೊಳ್ಳಲು ಆಸ್ಪಾದಿಸುತ್ತದೆ. ಹೀಗೆ ಮಾಡಿ ನೋಡಿ: ಜೇನುತುಪ್ಪವನ್ನು ಗಟ್ಟಿಯಾದ ತಿರುಪಿನಿಂದ ಕೂಡಿದ ಗಾಜಿನ ಬಾಟಲಿಯಲ್ಲಿ ಶೇಖರಿಸಿ.

Comments are closed.