ಪ್ರತಿಯೊಬ್ಬರು ದಿನ -ರಾತ್ರಿ ಎನ್ನದೆ ತಮ್ಮ ಹೆಚ್ಚಿನ ಸಮಯವನ್ನು ಮೊಬೈಲ್ ಫೋನ್ ,ಟಿವಿ, ಲ್ಯಾಪ್ಟಾಪ್ ಇವುಗಳನ್ನು ನೋಡುವು ದರಿಂದ ಬೇಗನೆ ಕಣ್ಣಿನ ತೊಂದರೆ ಉಂಟಾಗುತ್ತದೆ ಇವುಗಳಿಂದ ಸ್ವಲ್ಪ ದೂರವಿರಿ ಆದರೆ ಉಪಯೋಗ ಅನಿವಾರ್ಯವಾದರೆ ,ಕಣ್ಣಿಗೆ ಕನ್ನಡಕವನ್ನು ಬಳಸುವುದು ಉತ್ತಮ. ಕೆಲವೊಮ್ಮೆ ಕಣ್ಣಿನ ಆಯಾಸದಿಂದಾಗಿ ಕಣ್ಣು ನೋವು ಆಗುವುದು ಹಾಗೂ ಕಣ್ಣಿನ ಉರಿ ಅಷ್ಟೇ ಅಲ್ದೆ ಕಣ್ಣಿನ ಉಷ್ಣ ಸಮಸ್ಯೆ ಕೂಡ ಬರುವುದುಂಟು, ಹಾಗಾಗಿ ಕಣ್ಣಿನ ಆರೋಗ್ಯವನ್ನು ನಿರ್ಲಕ್ಷಿಸಬಾರದು.
ಕಣ್ಣಿನ ಉಷ್ಣಾಂಶವನ್ನು ಹೇಗೆ ನಿಯಂತ್ರಿಸಿಕೊಳ್ಳಬೇಕು ಎಂದು ಈ ಲೇಖನದ ಮೂಲಕ ತಿಳಿಸುತ್ತೇವೆ. ಈ ವಿಧಾನಗಳು ನಿಮ್ಮ ಕಣ್ಣನ್ನು ತಂಪಾಗಿ ಇಡುತ್ತವೆ.
1. ಅಲೋವೆರಾ: ಹೌದು ಅಲೋವೆರಾ ಎಲೆಯನ್ನು ಸೀಳಿ ಅದನ್ನು ಕಟ್ ಮಾಡಿಕೊಂಡು ಕಣ್ಣುಗಳ ಮೇಲೆ 5 ರಿಂದ 10 ನಿಮಿಷ ಅಲೋವೆರಾದ ತಿರುಳನ್ನು ಇಟ್ಟುಕೊಳ್ಳುವುದರಿಂದ ಕಣ್ಣೆಲ್ಲ ತಂಪಾಗುವುದು ಹಾಗು ಕಣ್ಣಿನ ಉಷ್ಣತೆ ನಿವಾರಣೆಯಾಗುತ್ತದೆ.
2.ತಣ್ಣನೆ ನೀರು: ತಣ್ಣನೆಯ ನೀರಿನಲ್ಲಿ ಶುದ್ಧವಾದ ಹತ್ತಿ ಹುಂಡೆಗಳನ್ನು ಹದ್ದಿ ಅದನ್ನು ಕಣ್ಣು ಮುಚ್ಚಿ ರೆಪ್ಪೆಗಳ ಮೇಲೆ 10 ರಿಂದ 15 ನಿಮಿಷ ಇಟ್ಟುಕೊಂಡರೆ ತುಂಬಾನೇ ಒಳ್ಳೆಯದು.
3.ಸೌತೆಕಾಯಿ : ಸೌತೆಕಾಯಿ ತುಂಡನ್ನು ರೌಂಡ್ ಆಗಿ ಕಟ್ ಮಾಡಿ 5 ರಿಂದ 10 ನಿಮಿಷ ಕಣ್ಣಿನ ಮೇಲ್ಬಾಗದ್ಲಲಿ ಇಟ್ಟುಕೊಳ್ಳುವುದರಿಂದ ಕಣ್ಣಿನ ಉಷ್ಣತೆ ನಿವಾರಣೆ ಆಗುವುದು ಅಷ್ಟೇ ಅಲ್ಲದೆ ಕಣ್ಣಿನ ಸುತ್ತಲೂ ಆಗುವ ಡಾರ್ಕ್ ಸರ್ಕಲ್ ನಿವಾರಣೆ ಆಗುವುದು
ಮತ್ತೆ ಅದಷ್ಟು ನೀರು ಕುಡಿಯಲು ಪ್ರಯತ್ನಿಸಿ ಎಕೆಂದರೆ ನೀರು ಎಲ್ಲದ್ದಕ್ಕೂ ಮದ್ದು.
Comments are closed.