ಕರಾವಳಿ

ಸಹೋದರನ ಕಳೆದುಕೊಂಡೆ : ಸಚಿವ ಸುರೇಶ್ ಅಂಗಡಿ ಅವರ ನಿಧನಕ್ಕೆ ಸಂಸದ ನಳಿನ್ ಸಂತಾಪ

Pinterest LinkedIn Tumblr

ಸಚಿವ ಸುರೇಶ್ ಅಂಗಡಿ

ಮಂಗಳೂರು :ಕೇಂದ್ರ ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಅವರ ನಿಧನದಿಂದ ನಾನು ಪ್ರೀತಿಯ ಸಹೋದರನೊಬ್ಬನನ್ನು ಕಳೆದುಕೊಂಡಂತಾಗಿ ದುಃಖವಾಗಿದೆ.ಅವರು ರೈಲ್ವೆ ರಾಜ್ಯ ಸಚಿವರಾಗಿ ರಾಜ್ಯಕ್ಕೆ ಅದರಲ್ಲೂ ಮಂಗಳೂರಿಗೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ.ಹೊಸ ಹೊಸ ಪ್ರಯೋಗಗಳನ್ನು ನಡೆಸಿ ಜನಪರ ಅಭಿವೃದ್ಧಿಗಾಗಿ ಶ್ರಮಿಸಿದವರು ಎಂಬುದಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಅವರು ನನಗಿಂದ ಒಂದು ಅವಧಿ ಮೊದಲೇ ಲೋಕಸಭೆ ಪ್ರವೇಶಿಸಿದ ಹಿರಿಯರು. ನಾನು ಲೋಕಸಭೆಗೆ ಪ್ರವೇಶಿಸಿದಂದಿನಿಂದಲೂ ನನಗೆ ಮಾರ್ಗದರ್ಶನ ಮಾಡುತ್ತಾ ಬಂದು ಹಿರಿಯಣ್ಣನಂತಿದ್ದರು. ಅವರಿಗಿಂತ ಕಿರಿಯನಾದರೂ ರಾಜ್ಯಾಧ್ಯಕ್ಷನಾದಾಗ ಯಾವ ರೀತಿ ರಾಜ್ಯಾಧ್ಯಕ್ಷರಿಗೆ ಗೌರವ ನೀಡಬೇಕೋ ಆ ರೀತಿ ನಡೆದುಕೊಂಡು ದೊಡ್ಡತನತೋರಿದವರು.

ಅವರ ಅಗಲುವಿಕೆ ದೇಶಕ್ಕೆ ಮತ್ತು ವಿಶೇಷವಾಗಿ ರಾಜ್ಯಕ್ಕೆ ತುಂಬಲಾರದ ನಷ್ಟ. ಸದಾ ಜನರ ಅಭಿವೃದ್ಧಿ, ದೇಶ, ರಾಜ್ಯದ ಉನ್ನತಿ ಬಗ್ಗೆಯೇ ಯೋಚಿಸುತ್ತಿದ್ದ ನಾಯಕ ಅವರಾಗಿದ್ದರು. ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಲಭಿಸಲಿ ಎಂಬುದಾಗಿ ನಳಿನ್ ಕುಮಾರ್ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

Comments are closed.