ಆರೋಗ್ಯ

ಕಾಫಿ ಕುಡಿಯಲು ಸೂಕ್ತ ಸಮಯ ಯಾವುದು?

Pinterest LinkedIn Tumblr

ನಾವು ದಿನ ಬೆಳಗಾದರೆ ಕಾಫಿ-ಚಹಾ ಕುಡಿಯದೆ ಇರಲು ಸಾಧ್ಯವಿಲ್ಲ. ಕೆಲವರು ಕಾಫಿ ಕುಡಿದರೆ ಇನ್ನು ಕೆಲವರು ಚಹಾ ಕುಡಿಯುತ್ತಾರೆ. ಬೆಳಗ್ಗೆಯೇ ಹೆಚ್ಚಿನವರು ಕಾಫಿ ಕುಡಿಯುವುದು. ಆದರೆ ಕಾಫಿ ಕುಡಿಯಲು ಇದು ಸರಿಯಾದ ಸಮಯ ಅಲ್ಲವೆಂದು ವಿಜ್ಞಾನ ಹೇಳುತ್ತದೆ. ಕಾಫಿಯ ಕೆಫೀನ್‌ನಮ್ಮ ದೇಹವನ್ನು ಬಾಧಿಸದೆ, ನಾವು ಕುಡಿದ ಕಾಫಿ ಔ‍ಷಧಿಯಾಗಿ ಪರಿಣಮಿಸಬೇಕೆ? ಹಾಗಾದರೆ ಕಾಫಿಯನ್ನು ಈ ನಿರ್ಧಿಷ್ಟ ಈ ಸಮಯದಲ್ಲಿಯಷ್ಟೇ ಕುಡಿಯಬೇಕು.

ಹಾಗಾದರೆ ಕಾಫಿ ಕುಡಿಯಲು ಸೂಕ್ತ ಸಮಯ ಯಾವುದು?
ಬೆಳಗ್ಗೆ 9.30ಯಿಂದ 11.30, ಮಧ್ಯಾಹ್ನ 1.30ರಿಂದ 5.30 ಅಥವಾ ರಾತ್ರಿ 7 ಗಂಟೆ ಮೇಲೆ.

ಏಕೆ ಈ ಸಮಯ ಒಳ್ಳೆಯದು

ನಮ್ಮ ದೇಹದಲ್ಲಿ ಸರ್ಕಾಡೈನ್‌ರಿಥಮ್‌(circadian rhythm) ಎಂಬ ಹಾರ್ಮೋನ್ cortisol ಎಂಬ ಹಾರ್ಮೋನ್‌ಉತ್ಪತ್ತಿ ಮಾಡುತ್ತದೆ . ಇದು ನಮ್ಮ ದೇಹವನ್ನು ಎಚ್ಚರವಾಗಿರುವಂತೆ ಮಾಡುತ್ತದೆ. ನಮ್ಮ ದೇಹದಲ್ಲಿ ಈ ಹಾರ್ಮೋನ್‌ಅತ್ಯಧಿಕ ಇರುವ ಸಮಯದಲ್ಲಿ ಕಾಫಿ ಕುಡಿಯುವುದು ಒಳ್ಳೆಯದಲ್ಲವೆಂದು ವಿಜ್ಞಾನ ಹೇಳುತ್ತದೆ.

ಈ ಹಾರ್ಮೋನ್‌ಅತ್ಯಧಿಕ ಇರುವ ಸಮಯದಲ್ಲಿ ಕಾಫಿ ಕುಡಿದರೆ ಕಾಫಿಯು ನಮ್ಮ ದೇಹದಲ್ಲಿ ಯಾವುದೇ ಪ್ರಭಾವ ಬೀರುವುದಿಲ್ಲ, ಬದಲಿಗೆ ಮತ್ತಷ್ಟು ಕಾಫಿ ಬೇಕೆನಿಸುತ್ತದೆ. ಇದರಿಂದ ದೇಹದಲ್ಲಿ ಕೆಫೀನ್‌ಅಂಶ ಹೆಚ್ಚಾಗುವುದು.

ಅದೇ ಈ ಹಾರ್ಮೋನ್‌ಗಳ ಉತ್ಪತ್ತಿ ಕಡಿಮೆಯಾಗುವ ಸಮಯದಲ್ಲಿ ಸೇವಿಸುವಯದರಿಂದ ದೇಹಕ್ಕೆ ಹುರುಪು ದೊರೆಯುವುದು.

ಬೆಳಗ್ಗೆ 7-9 ಗಂಟೆವರೆಗೆ ಈ ಹಾರ್ಮೋನ್‌ಗಳ ಉತ್ಪತ್ತಿ ಅಧಿಕವಿರುತ್ತದೆ. ನಂತರ ಕಡಿಮೆಯಾಗುತ್ತಾ ಹೋಗುವುದು, ಆಗ ತೂಕಡಿಕೆ ಬರಬಹುದು. ಈ ಸಮಯದಲ್ಲಿ ಕಾಫಿಯನ್ನು ಹೀರಿ, ಹುಮ್ಮಸ್ಸು ಮರಳಿ ಪಡೆಯಿರಿ.

Comments are closed.