ಮಹಿಳೆಯೊಬ್ಬರ ಮಾಲಕತ್ವದ ಈ ಕಾರ್ಖಾನೆಯಲ್ಲಿ ಲಕ್ಷಾಂತರ ಕಾಂಡೋಮ್ಗಳು ಪತ್ತೆಯಾಗಿ ದ್ದು, ಈ ಎಲ್ಲಾ ಕಾಂಡೋಮ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅಚ್ಚರಿಯೆಂದರೆ ವಶಪಡಿಸಿಕೊಂಡಿರುವ ಈ ಎಲ್ಲಾ ಕಾಂಡೋಮ್ಗಳು ಬಳಸಿ ಬೀಸಾಡಿದ್ದ ಕಾಂಡೋಮ್ಗಳಾಗಿವೆ. ಬಳಸಿ ಬೀಸಾಡಿದ್ದ ಕಾಂಡೋಮ್ಗಳನ್ನು ಸಂಗ್ರಹಿಸಿಟ್ಟಿದ್ದ ಕಾರ್ಖಾನೆ ಮೇಲೆ ವಿಯೆಟ್ನಾಂ ಪೊಲೀಸರು ದಾಳಿ ಮಾಡಿ 324,000ಕ್ಕೂ ಹೆಚ್ಚು ಕಾಂಡೋಮ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಉಪಯೋಗಿಸಿದ್ದ ಕಾಂಡೋಮ್ಗಳನ್ನು ಸಂಗ್ರಹಿಸಿ ರಾಸಯನಿಕಯುಕ್ತ ನೀರಿನಲ್ಲಿ ಶುಚಿಗೊಳಿಸಿ, ಪುರುಷರ ಮರ್ಮಾಂಗ ಮಾದರಿಯ ಕೋಲಿನಲ್ಲಿ ಮರುರೂಪಕೊಟ್ಟು ಮರು ಮಾರಾಟ ಮಾಡಲು ಸಂಗ್ರಹಿಸಿಡಲಾಗಿತ್ತು ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ಈ ಅಕ್ರಮ ಕೆಲಸವು ದಕ್ಷಿಣ ವಿಯೆಟ್ನಾಂನ ಬಿನ್ಹ್ ಡೌಂಗ್ ಪ್ರಾಂತ್ಯದ ಗೋದಾಮು ಒಂದರಲ್ಲಿ ನಡೆಯುತ್ತಿತ್ತು. ಈ ಕೆಲಸಕ್ಕಾಗಿ ದಿನಗೂಲಿ ನೌಕರರನ್ನು ಬಳಸಿಕೊಳ್ಳಲಾಗಿತ್ತು.ಮರು ಪ್ಯಾಕೇಜ್ ಮಾಡಿ ಸಾರ್ವಜನಿಕ ಪ್ರದೇಶಗಳಲ್ಲಿ ಬಳಕೆಗೆ ಯೋಗ್ಯವಲ್ಲದ ಮತ್ತು ಸುರಕ್ಷಿತವಲ್ಲದ ಕಾಂಡೋಮ್ಗಳನ್ನು ಮಾರಾಟ ಮಾಡಲಾಗುತ್ತಿತ್ತು.
ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಳೆದ ಶನಿವಾರ ದಾಳಿ ನಡೆಸಿದ ವಿಯೆಟ್ನಾಂ ಪೊಲೀಸರು ಕಾಂಡೋಮ್ಗಳನ್ನು ವಶಪಡಿಸಿಕೊಂಡಿದ್ದಾರೆ. ಕಾರ್ಖಾನೆಯ ಮಾಲಕಿ ಥಿ ಥಾನ್ಹ್ ಗೋಕ್ (33)ಳನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ವಶಪಡಿಸಿಕೊಂಡಿದ್ದ ಕಾಂಡೋಮ್ಗಳನ್ನು ಅಪಾಯಕಾರಿ ವೈದ್ಯಕೀಯ ತ್ಯಾಜ್ಯವೆಂದು ಪರಿಗಣಿಸಲಾಗಿರುವುದರಿಂದ ತಕ್ಷಣ ವಿಲೇವಾರಿ ಮಾಡಲಾಗಿದೆ.
ಈ ಮಹಿಳೆ ಅಪರಿಚಿತ ವ್ಯಕ್ತಿಯೊಬ್ಬರಿಂದ ತಿಂಗಳ ಹಿಂದೆ ಗೋಕ್ ಕಾಂಡೋಮ್ಗಳನ್ನು ಸ್ವೀಕರಿಸಿ, ತಮ್ಮ ಕಾರ್ಖಾನೆಯಲ್ಲಿಟ್ಟಿದ್ದಳು ಎಂದು ತಿಳಿದುಬಂದಿದ್ದು, ಈಗಾಗಲೇ ಒಂದಿಷ್ಟು ಪ್ರಮಾಣ ಕಾಂಡೋಮ್ಗಳು ಮಾರಾಟವಾಗಿವೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.
Comments are closed.