ಕರಾವಳಿ

ಕೊರೋನಾ ಸೋಂಕಿಗಿ ಮತ್ತೊರ್ವ ಶಾಸಕ ಬಲಿ : ಜನಪ್ರತಿನಿಧಿಗಳ ಸರಣಿ ಸಾವಿನಿಂದ ಕಂಗೆಟ್ಟ ಜನತೆ

Pinterest LinkedIn Tumblr

ಬೆಂಗಳೂರು, ಸೆಪ್ಟಂಬರ್.24 : ಕೋವಿಡ್ – 19 ಸೋಂಕಿನಿಂದ ಮೃತ ಪಡುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದ್ದು, ಜೊತೆಗೆ ಕಳೆದ ಕೆಲವು ದಿನಗಳಿಂದ ಜನಪ್ರತಿನಿಧಿಗಳು ಸಾವನ್ನಪ್ಪುತ್ತಿರುವುದು ಕಂಡು ಬರುತ್ತಿವೆ.

ಈಗಾಗಲೇ ಇಬ್ಬರು ರಾಜಕೀಯ ಪ್ರತಿನಿಧಿಗಳು ಸೋಂಕಿಗೆ ಬಲಿಯಾದ ಬೆನ್ನಲ್ಲೇ ಇದೀಗ ಮತ್ತೊರ್ವ ಶಾಸಕರು ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಬಸವ ಕಲ್ಯಾಣ ಕ್ಷೇತ್ರದ ಕಾಂಗ್ರೇಸ್ ಶಾಸಕ ನಾರಾಯಣ ರಾವ್ ಇಂದು ಮಧ್ಯಾಹ್ನ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ. ಇವರು 2018ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು.

ಮೃತರು ಕಳೆದ ಒಂದು ತಿಂಗಳಿಂದ ಕೊರೋನಾ ಸೋಂಕಿಗೆ ನಗರದ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಕಳೆದ ಎರಡು ದಿನಗಳಿಂದ ಅವರು ಗಂಭೀರ ಸ್ಥಿತಿಗೆ ತಲುಪಿದ್ದರು ಎಂದು ತಿಳಿದು ಬಂದಿದೆ.

ಈಗಾಗಲೇ ರಾಜ್ಯ ಸಭಾ ಸದಸ್ಯ ಗಸ್ತಿ ಹಾಗೂ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರು ಈ ಮಾರಕ ಸೋಂಕಿಗೆ ಬಲಿಯಾಗಿದ್ದು, ಇಲ್ಲಿಯವರೆಗೂ ಕೊರೋನಾ ಸೋಂಕಿಗೆ ದೇಶದಲ್ಲಿ 7 ಶಾಸಕರು 3 ಸಂಸದರು 1 ರಾಜ್ಯಸಭಾ ಸದಸ್ಯರು ಬಲಿಯಾಗಿದ್ದಾರೆ. ಜನಪ್ರತಿನಿಧಿಗಳ ಸರಣಿ ಸಾವಿನಿಂದ ಸಾಮಾನ್ಯ ಜನರು ಭಯಪಡುವಂತಾಗಿದೆ.

Comments are closed.