ನವದೆಹಲಿ; ಮಾದಕ ವಸ್ತು ಜಾಲದ ಜೊತೆಗಿನ ನಂಟು ಆರೋಪದಡಿ ಬಂಧನದಲ್ಲಿರುವ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಜಾಮೀನು ಅರ್ಜಿ ಮಂಗಳವಾರ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದೆಂದು ಬಾಂಬೆ ಹೈಕೋರ್ಟ್ ಇಂದು (ಶುಕ್ರವಾರ) ತಿಳಿಸಿದೆ.
ಇದರೊಂದಿಗೆ 2ನೇ ಬಾರಿ ನಟಿಯ ಜಾಮೀನು ಅರ್ಜಿಯ ವಿಚಾರಣೆ ಮುಂದೂಡಿಕೆಯಾಗಿದೆ. ನಟ ಸುಶಾಂತ್ ಸಿಂಗ್ ರಜಪೂತ್ ತನಿಖೆಗೆ ಸಂಬಂಧಿಸಿದಂತೆ ಈ ತಿಂಗಳ ಆರಂಭದಲ್ಲೇ ನಟಿಯ ಬಂಧನವಾಗಿತ್ತು, ಅಕ್ಟೋಬರ್ 6 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಜೂನ್ 14 ರಂದು ಆತ್ಮಹತ್ಯೆಗೆ ಶರಣಾದ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ತನಿಖೆಗೆ ಆರಂಭಿಸಿದ್ದ ಪೊಲೀಸರು ಈ ಸಾವಿಗೂ ಮಾದಕ ವಸ್ತು ಜಾಲಕ್ಕೂ ನಂಟಿರುವ ಕುರಿತು ಸಂಶಯ ಮೂಡಿ ನಟಿಯ ಬಂಧನವಾಗಿತ್ತು.
“ಈ ಪ್ರಕರಣದಲ್ಲಿ ವಿವಿಧ ಸಮಸ್ಯೆಗಳಿವೆ. ನೀವು ನ್ಯಾಯಾಲಯದ ಸಂಶಯಗಳನ್ನು ಒಂದೊಂದಾಗಿ ಪರಿಹರಿಸಬೇಕಾಗುತ್ತದೆ” ಎಂದು ಅಭಿಪ್ರಾಯ ಪಟ್ಟಿರುವ ನ್ಯಾಯಮೂರ್ತಿಗಳು ಣ ವಿಚಾರಣೆಯನ್ನು ಮುಂದೂಡಿದ್ದಾರೆ.
ಈ ಮಧ್ಯೆ ನಟಿಯ ಫೋನ್ನಲ್ಲಿ ವಾಟ್ಸಾಪ್ ಚಾಟ್ಗಳು ಡ್ರಗ್ಸ್ ಒಳಗೊಂಡ ಸಂಭಾಷಣೆಗಳನ್ನು ಬಹಿರಂಗಪಡಿಸಿದ ನಂತರ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದೆ. ಮುಂಬೈ ಪೊಲೀಸರು ಆರಂಭದಲ್ಲಿ ಆತ್ಮಹತ್ಯೆ ಎಂದು ಕರೆದಿದ್ದ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಬಗ್ಗೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಇದೀಗ ತನಿಖೆ ನಡೆಸುತ್ತಿದೆ.
Comments are closed.