ಅಬುದಾಬಿ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ, ಕನ್ನಡಿಗ ಕೆ.ಎಲ್. ರಾಹುಲ್ ಅವರು ಇಲ್ಲಿನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದದ ಪಂದ್ಯದಲ್ಲಿ ಶತಕ ಬಾರಿಸಿ ದಾಖಲೆ ಗಳಿಸಿದ್ದಾರೆ. ಈ ಪಂದ್ಯಾವಳಿಯಲ್ಲಿ ಶತಕ ಗಳಿಸಿದ ಪ್ರಥಮ ಆಟಗಾರ ಎಂಬ ಕೀರ್ತಿಗೆ ಭಾಜನರಾದರು.
ಮಯಾಂಕ್ ಅಗರ್ವಾಲ್ ಜೊತೆ ಇನಿಂಗ್ಸ್ ಆರಂಭಿಸಿದ ಕೆಎಲ್ ರಾಹುಲ್, ಉಮೇಶ್ ಯಾದವ್ ಅವರ ಮೊದಲ ಓವರ್ನಲ್ಲಿ 8 ರನ್ ಕಲೆಹಾಕಿದರು. ಡೇಲ್ ಸ್ಟೇನ್ ಎಸೆದ 2ನೇ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ರಾಹುಲ್ ಐಪಿಎಲ್ನಲ್ಲಿ 2 ಸಾವಿರ ರನ್ ಪೂರೈಸಿದ ಸಾಧನೆ ಮೆರೆದರು. 60ನೇ ಇನಿಂಗ್ಸ್ ಮೂಲಕ ಈ ಸಾಧನೆ ಮಾಡಿ ಐಪಿಎಲ್ನಲ್ಲಿ ಅತೀ ವೇಗದಲ್ಲಿ 2 ಸಾವಿರ ರನ್ ಪೂರೈಸಿದ ಭಾರತೀಯ ಬ್ಯಾಟ್ಸ್ಮನ್ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು. ಮಾಸ್ಟರ್ ಬ್ಲಾಸ್ಟರ್ 63 ಇನಿಂಗ್ಸ್ನಲ್ಲಿ ಈ ಸಾಧನೆ ಮಾಡಿದ್ದರು.
ಕೆ.ಎಲ್ ರಾಹುಲ್ 69 ಎಸೆತಗಳಲ್ಲಿ 14 ಬೌಂಡರಿ, 7 ಸಿಕ್ಸರ್ ಸಹಾಯದಿಂದ ಅಜೇಯ 132 ರನ್ ಬಾರಿಸಿದರು. 60ನೇ ಇನಿಂಗ್ಸ್ ಮೂಲಕ ಈ ಸಾಧನೆ ಮಾಡಿ ಐಪಿಎಲ್ನಲ್ಲಿ ಅತೀ ವೇಗದಲ್ಲಿ 2 ಸಾವಿರ ರನ್ ಪೂರೈಸಿದ ಭಾರತೀಯ ಬ್ಯಾಟ್ಸ್ಮನ್ ಎನಿಸಿಕೊಂಡರು.
Comments are closed.