ಕರ್ನಾಟಕ

ನಿರೂಪಕಿ ಅನುಶ್ರೀಗೆ ಸಿಸಿಬಿ ನೋಟಿಸ್: ಸ್ಪಷ್ಟನೆ ನೀಡಿದ ನಟಿ

Pinterest LinkedIn Tumblr


ಬೆಂಗಳೂರು: ಇದುವರೆಗೂ ನನಗೆ ಸಿಸಿಬಿಯಿಂದ ಯಾವುದೇ ನೋಟಿಸ್ ಬಂದಿಲ್ಲ ಎಂದು ನಿರೂಪಕಿ ಅನುಶ್ರೀ ಸ್ಪಷ್ಟನೆ ನೀಡಿದ್ದಾರೆ.

ಮಾದಕ ವಸ್ತು ಜಾಲದ ಕುರಿತು ಅನುಶ್ರೀ ಗೆ ಮಂಗಳೂರು ಸಿಸಿಬಿ ಪೊಲೀಸರು ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ ಎಂಬ ವಿಷಯದ ಬಗ್ಗೆ ಮಾಧ್ಯಮವೊಂದಕ್ಕೆ ಮಾತನಾಡಿದ ಅನುಶ್ರೀ ನನಗೆ ಯಾವುದೇ ನೋಟಿಸ್ ಬಂದಿಲ್ಲ. ವಿಚಾರಣೆಗೆ ಹಾಜರಾಗಬೇಕೆಂದು ನೋಟಿಸ್ ಬಂದರೆ ಹಾಜರಾಗುತ್ತೇನೆ ಎಂದು ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳ ಮೂಲಕವೇ ತಿಳಿದು ಬಂದಿದೆ.. ನನ್ನ ವಾಟ್ಸ್ ಆ್ಯಪ್​ ಗೆ ಆಗಲಿ, ನನ್ನ ಬೆಂಗಳೂರಿನ ಅಪಾರ್ಟ್​ ಮೆಂಟ್​ಗೆ ಆಗಲಿ ಅಥವಾ ನಮ್ಮ ಮಂಗಳೂರಿನ ಮನೆಗಾಗಲಿ ಸಿಸಿಬಿ ಯಿಂದ ಯಾವುದೇ ನೋಟಿಸ್ ಬಂದಿಲ್ಲ ಎಂದು ತಿಳಿಸಿದ್ದಾರೆ.

ಈಗ ಬಂಧನದಲ್ಲಿರುವ ಪ್ರತಿಕ್ ಶೆಟ್ಟಿ ನನಗೆ ಪರಿಚಯವೇ ಇಲ್ಲ. ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ಪರಿಚಯವಿದೆ. ತರುಣ್ 10-12 ವರ್ಷಗಳ ಹಿಂದೆ ನಾನು ಮಾಡಿದ ಡ್ಯಾನ್ಸ್ ರಿಯಾಲಿಟಿ ಶೋ ನಲ್ಲಿ ನನ್ನ ಡಾನ್ಸ್ ಕೊರಿಯೋಗ್ರಾಫರ್ ಆಗಿದ್ದರು. ಮೂರ್ನಾಲ್ಕು ವರ್ಷಗಳ ಹಿಂದೆ ತರುಣ್ ರವರು ಆರಂಭಿಸಿದ ಮಕ್ಕಳ ಡಾನ್ಸ್ ಸ್ಕೂಲ್​ ಉದ್ಘಾಟನೆ ವೇಳೆ ನಾನು ಗೆಸ್ಟ್ ಆಗಿ ಹೋಗಿದ್ದೆ. ಅಲ್ಲಿ ಬೇರೆ ಸೆಲೆಬ್ರೆಟಿಗಳು ಕೂಡ ಇದ್ದರು. ಅದಾದ ಬಳಿಕ ನಾನು ಅವರೊಂದಿಗೆ ಸಂಪರ್ಕದಲ್ಲಿ ಇಲ್ಲ ಮತ್ತು ಅವರ ಯಾವ ಪಾರ್ಟಿಗಳಿಗೂ ನಾನು ಹೋಗಿಲ್ಲ ಎಂದು ಹೇಳಿದ್ದಾರೆ.

ಕಾರ್ಯಕ್ರಮಗಳಿದ್ದಾಗ ನಾನು ಹೋಗುತ್ತೇನೆ ಹೊರತು, ಪಬ್ ಗಳಲ್ಲಿ ನಾಡೆಯುವ ಯಾವುದೇ ಪಾರ್ಟಿಗಳಿಗೆ ಹೋಗಿಲ್ಲ ಎಂದು ತಿಳಿಸಿದರು.

Comments are closed.