ಮಂಗಳೂರು, ಸೆಪ್ಟಂಬರ್.25 ಕೂ ಆ್ಯಪ್ಲಿಕೇಶನ್ ಭಾರತೀಯ ಭಾಷೆಗಳಿಗೆ ಟ್ವಿಟರ್ ನಂತಹ ಮೈಕ್ರೋ ಬ್ಲಾಗಿಂಗ್ ವೇದಿಕೆಯಾಗಿದೆ. ತಮ್ಮ ಮಾತೃಭಾಷೆಯನ್ನು ವ್ಯಕ್ತಪಡಿಸಲು ಕೂ ಸಹಾಯ ಮಾಡುತ್ತದೆ. ಕೂ ವೇದಿಕೆಯನ್ನು ಮಾರ್ಚ್ 2020 ರಂದು ಕನ್ನಡದಲ್ಲಿ ಪ್ರಾರಂಭಿಸಲಾಯಿತು.
ಇದುವರೆಗೂ ಹಿಂದಿ, ತೆಲುಗು, ತಮಿಳು, ಗುಜರಾತಿ, ಮರಾಠಿ ಮತ್ತು ಬಂಗಾಳಿ ಭಾಷೆಗಳಲ್ಲೂ ಲಭ್ಯವಿದೆ. ಪ್ರಾರಂಭವಾದ ಕೆಲವೇ ತಿಂಗಳುಗಳಲ್ಲಿ ಕೂ (Koo) ವಿಶ್ವದ ಅತಿದೊಡ್ಡ ಮೈಕ್ರೊ ಬ್ಲಾಗ್ ಆಗಿ ಮಾರ್ಪಟ್ಟಿದೆ. ಕನ್ನಡದ ಯಾವುದೇ ಮೈಕ್ರೊ ಬ್ಲಾಗ್ಗೆ ಹೋಲಿಸಿದರೆ ಇದು ಅತಿ ಹೆಚ್ಚು ಆಲೋಚನೆಯನ್ನು ಹಾಗೂ ಅಭಿಪ್ರಾಯಗಳನ್ನು ಹೊಂದಿದೆ.
ಆಗಸ್ಟ್ 2020 ರಲ್ಲಿ ಸರ್ಕಾರ ನಡೆಸಿದ ಆತ್ಮಾನಿರ್ಭರ್ ಆಪ್ ಇನ್ನೋವೇಶನ್ ಚಾಲೆಂಜ್ನಲ್ಲಿ ಕೂ ಆಪ್ ಗೆಲುವನ್ನು ಘೋಷಿಸಲಾಯಿತು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತೀಯ ಭಾಷೆಗಳಲ್ಲಿ ತಮ್ಮನ್ನು ತಾವು ಅಭಿವ್ಯಕ್ತಿಸಲು ಕೂ ಅನ್ನು ಬಳಸುವಂತೆ ಪ್ರೋತ್ಸಾಹಿಸಿದರು.
ಉನ್ನತ ವ್ಯಕ್ತಿಗಳಾದ ಸದ್ಗುರು, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ಮಾಜಿ ಪ್ರಧಾನ ಮಂತ್ರಿ ಹೆಚ್. ಡಿ. ದೇವೇಗೌಡ ಅವರು ತಮ್ಮ ಆಲೋಚನೆಗಳನ್ನು ಕನ್ನಡಿಗರೊಂದಿಗೆ ಪ್ರತಿದಿನ ಹಂಚಿಕೊಳ್ಳುತ್ತಾರೆ.
ಕನ್ನಡದ ಅತಿದೊಡ್ಡ ಮೈಕ್ರೋ ಬ್ಲಾಗಿಂಗ್ ಪ್ಲಾಟ್ಫಾರ್ಮ್ ಆಗಲು ನಮಗೆ ತುಂಬಾ ಸಂತೋಷವಾಗಿದೆ. ಸ್ವಾವಲಂಬಿಗಳಾಗಿರಲು ಮತ್ತು ಭಾರತದಲ್ಲಿ ತಯಾರಿಸಿದ ಅಪ್ಲಿಕೇಶನ್ಗಳನ್ನು ಭಾರತೀಯರಿಂದ ಬಳಸಿಕೊಳ್ಳಲು ಸರ್ಕಾರ ಮತ್ತು ನಾಗರಿಕರಿಂದ ಹೆಚ್ಚಿನ ಉತ್ಸಾಹವಿದೆ ಎಂದು ಕೂ ಸಿಇಒ ಅಪ್ರಮೇಯ ರಾಧಾಕೃಷ್ಣ ಹೇಳಿದ್ದಾರೆ.
Comments are closed.