ಕೆಲವರಿಗೆ ಮಾತನಾಡುತ್ತಿರುವಾಗಲೇ ಇದ್ದಕ್ಕಿದ್ದ ಹಾಗೆ ಕಣ್ಣಿನಲ್ಲಿ ನೀರು ಬರಲಾರಂಭಿಸುತ್ತದೆ. ಇನ್ನು ಕೆಲವರಿಗೆ ಚಿಕ್ಕಪುಟ್ಟ ವಸ್ತುಗಳನ್ನು ಎತ್ತಿದರು ಸಹ ಕೈ ನಡುಗಲು ಆರಂಭಿಸುತ್ತದೆ. ಕೆಲವರಿಗಂತೂ ಸ್ವಲ್ಪದೂರ ನಡೆದರೆ ಸಾಕು ಕೈಕಾಲುಗಳಲ್ಲಿ ನಡುಕ ಉಂಟಾಗಿ ಸುಸ್ತು ಕಾಣಿಸಿಕೊಳ್ಳುತ್ತದೆ.ಈ ರೀತಿಯ ಸಮಸ್ಯೆಯನ್ನು ನಾವು ಸಾಕಷ್ಟು ಜನರಲ್ಲಿ ಕಾಣಬಹುದು. ಆದರೆ ಇವೆಲ್ಲಕ್ಕೂ ಮುಖ್ಯವಾದ ಕಾರಣ ನರಗಳ ಬಲಹೀನತೆ. ಎಂಬುದು ಯಾರಿಗೂ ಗೋತ್ತಿಲ್ಲ.
ನಮ್ಮ ಈ ಒತ್ತಡ ಭರಿತ ಜೀವನದಲ್ಲಿ ನಮ್ಮ ಆರೋಗ್ಯದ ಕಡೆ ಗಮನ ಹರಿಸಲು ಅಷ್ಟಾಗಿ ಆಗುವುದಿಲ್ಲ ಹಾಗಾಗಿ ನಾವು ಮನೆಯಲ್ಲಿ ಸಣ್ಣಪುಟ್ಟ ಮನೆಮದ್ದುಗಳನ್ನು ಮಾಡಿಕೊಳ್ಳುವುದರಿಂದ ನಮ್ಮ ಆರೋಗ್ಯವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು. ಹಾಗೆಯೇ ನರಗಳ ಬಲಹೀನತೆ ನಿವಾರಿಸಿಕೊಳ್ಳಲು ನಾವು ನೇರವಾಗಿ ವೈದ್ಯರು ನೀಡುವ ಔಷಧ ಬಳಕೆ ಮಾಡದೇ ಕೆಲವು ಮನೆಮದ್ದುಗಳನ್ನು ಮಾಡಿಕೊಂಡು ಸಹ ಈ ಸಮಸ್ಯೆಯಿಂದ ಮುಕ್ತಿ ಹೊಂದಬಹುದು. ಈ ಲೇಖನದಲ್ಲಿ ತಿಳಿಸಿ ಕೊಡುವಂತಹ ಮನೆಮದ್ದನ್ನು ಉಪಯೋಗಿಸುವುದರಿಂದ ಕೆಲವು ದಿನದಲ್ಲಿ ನೀವು ನರದೌರ್ಬಲ್ಯದ ಸಮಸ್ಯೆಯಿಂದ ಹೊರಬರಬಹುದು.
ಈ ಮನೆಮದ್ದನ್ನು ನಮಗೆ ಮಾಡಲು ಮುಖ್ಯವಾಗಿ ಮೊದಲಿಗೆ ಬೇಕಾಗಿರುವುದು ಅಗಸೆ ಬೀಜ. ಇದರಲ್ಲಿ ಆಲ್ಫಾನ್ಯೂನ್ಯಾನಿಕ್ ಆಸಿಡ್, ಒಮೆಗಾ3 ಫ್ಯಾಟಿ ಆಸಿಡ್ ಹಾಗೂ ಫೈಬರ್ ಅಂತಹ ಅಂಶಗಳು ಇದರಲ್ಲಿ ಹೆಚ್ಚಾಗಿ ಇರುತ್ತದೆ. ಅಗಸೆ ಬೀಜ ಅರ್ಥರಿಟೀಸ್ ಸಮಸ್ಯೆ ಮತ್ತು ನರಗಳ ಬಲಹೀನತೆ ಸಮಸ್ಯೆಗೆ ತುಂಬಾ ಅದ್ಭುತವಾಗಿ ಪರಿಣಾಮಕಾರಿಯಾಗಿ ಸಹಾಯ ಮಾಡುತ್ತದೆ. ಕಾಳುಮೆಣಸು ಕಾಳು ಮೆಣಸಿನಲ್ಲಿ ಆಂಟಿಆಕ್ಸಿಡೆಂಟ್ ಆಂಟಿ ಬ್ಯಾಕ್ಟೀರಿಯಾ ಗುಣಗಳು ಇರುವುದರಿಂದ ನಮ್ಮ ಶರೀರದಲ್ಲಿ ಇರುವಂತಹ ಕಾಯಿಲೆಗಳನ್ನು ವಾಸಿ ಮಾಡಲಿಕ್ಕೆ ಕಾಳುಮೆಣಸು ಬಹಳ ಅದ್ಭುತವಾಗಿ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲದೆ ತೂಕ ಇಳಿಸಿಕೊಳ್ಳಲು ಸಹ ಅದ್ಭುತವಾಗಿ ಸಹಾಯಕಾರಿಯಾಗಿದೆ.
ವಾಲ್ನಟ್: ಇದು ನೋಡುವುದಕ್ಕೆ ನಮ್ಮ ಮೆದುಳಿನ ಆಕಾರದಲ್ಲಿರುತ್ತದೆ. ಇದರ ಸೇವನೆಯಿಂದ ನಮ್ಮ ಮೆದುಳಿಗೆ ಹಾಗೂ ನಮ್ಮ ನಗರಗಳಿಗೂ ಸಹ ಒಳ್ಳೆಯದು. ಕೆಂಪು ಅಥವಾ ಬಿಳಿ ಕಲ್ಲು ಸಕ್ಕರೆ ಇವು ನಮ್ಮ ರಕ್ತವನ್ನು ಶುದ್ಧೀಕರಿಸಲು ಬಹಳ ಸಹಾಯಕಾರಿ ಯಾಗಿದೆ.
ಈ ರೆಮಿಡಿಯಲ್ಲಿ ನಾವು ಕಾಳುಮೆಣಸನ್ನು ಸಹ ಬಳಕೆ ಮಾಡುತ್ತಿರುವುದರಿಂದ ಕಲ್ಲು ಸಕ್ಕರೆ ಬಳಕೆ ಮಾಡುವುದರಿಂದ ದೇಹಕ್ಕೆ ಸ್ವಲ್ಪ ತಂಪು ಸಿಗುತ್ತದೆ. ಇವು ನರಗಳ ಬಲಹೀನತೆಗೆ ಸಹಾಯಕಾರಿಯಾಗಿವೆ. ಅಡುಗೆಗೆ ಬಳಕೆಮಾಡುವ ಚಕ್ಕೆ.. ಇದರಲ್ಲಿ ಔಷಧೀಯ ಗುಣಗಳು ಹೇರಳವಾಗಿರುತ್ತವೆ. ಇದು ಅರ್ಥರಿಟೀಸ್ ಸಮಸ್ಯೆ ಮತ್ತು ನರಗಳ ಬಲಹೀನತೆ ಹಾಗೂ ಕೀಲುನೋವು ಸಮಸ್ಯೆಯನ್ನು ನಿವಾರಿಸಿಕೊಳ್ಳಲು ತುಂಬಾ ಸಹಾಯಕಾರಿಯಾಗಿದೆ.
ಮಾಡುವ ವಿಧಾನ:
ಒಂದು ಬೌಲಿಗೆ ಮೊದಲು 1 ಟೀ ಸ್ಪೂನ್ ಅಷ್ಟು ಅಗಸೆ ಬೀಜ, 1 ಸ್ಪೂನ್ ವಾಲ್ನಟ್, ಕಾಲು ಟೀ ಸ್ಪೂನ್ ನಷ್ಟು ಕಾಳುಮೆಣಸು, ಒಂದು ಸಣ್ಣ ಪೀಸ್ ಕಲ್ಲುಸಕ್ಕರೆ, ಎರಡರಿಂದ ಮೂರು ಸಣ್ಣ ಚಕ್ಕೆ ಇವೆಲ್ಲವನ್ನು ಒಟ್ಟಿಗೆ ಸೇರಿಸಿ ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ಈ ಪುಡಿಯನ್ನು ಒಂದು ಗ್ಲಾಸ್ ನೀರಿಗೆ ಸೇರಿಸಿ ಮಿಕ್ಸ್ ಮಾಡಿಕೊಳ್ಳಬೇಕು.
ಈ ಪಾನಿಯನ್ನು ಪ್ರತಿದಿನ ಬೆಳಗ್ಗೆ ತಿಂಡಿಗೆ ಒಂದು ಗಂಟೆ ಮೊದಲು ತೆಗೆದುಕೊಳ್ಳಬೇಕು. ಈ ಡ್ರಿಂಕ್ ಅನ್ನು ತಪ್ಪದೇ ಹತ್ತು ದಿನ ಸತತವಾಗಿ ತೆಗೆದುಕೊಳ್ಳುವುದರಿಂದ ನರಗಳ ಬಲಹೀನತೆ ಯಿಂದ ಮುಕ್ತರಾಗಬಹುದು. ಇವುಗಳ ಜೊತೆಗೆ ನರಗಳ ಬಲಹೀನತೆ ಇರುವವರು ಪ್ರತಿನಿತ್ಯ ಪ್ರಾಣಾಯಾಮ ಮಾಡುವುದು ಒಳ್ಳೆಯದು. ಒಂದರ್ಧ ಗಂಟೆ ಚಪ್ಪಲಿ ಧರಿಸದೆ ಪ್ರತಿದಿನ ಹುಲ್ಲು ಅದು ಮರಳಿನ ಮೇಲೆ ನಡೆಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.
Comments are closed.