ರಾಷ್ಟ್ರೀಯ

ಮನೆಗೆ ತಲುಪಿದ ಎಸ್ ಪಿ ಬಾಲಸುಬ್ರಹ್ಮಣ್ಯಂ ಪಾರ್ಥಿವ ಶರೀರ: ಇಂದು ಅಂತ್ಯಕ್ರಿಯೆ

Pinterest LinkedIn Tumblr


ಚೆನ್ನೈ: ನಿನ್ನೆ ಮಧ್ಯಾಹ್ನ ವಿಧಿವಶರಾದ ಗಾನ ಗಾರುಡಿಗ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರ ಪಾರ್ಥಿವ ಶರೀರವನ್ನು ಇಲ್ಲಿನ ಅವರ ನಣಗಂಬುಕಂ ನಿವಾಸಕ್ಕೆ ತರಲಾಗಿದ್ದು, ಇಂದು ಬೆಳಗ್ಗೆ ಅವರ ಅಂತ್ಯಕ್ರಿಯೆ ನಡೆಸಲು ಕುಟುಂಬದ ಮೂಲಗಳು ತಿಳಿಸಿವೆ.

ಎಸ್ .ಪಿ.ಯ ಮನೆಯ ಕಡೆ ಅಪಾರ ಸಂಖ್ಯೆಯ ಅಭಿಮಾನಿಗಳು ಜನಸಾಗರ ಹರಿದು ಬರುತ್ತಿದ್ದು, ಸಾರ್ವಜನಿಕರ ಅಂತಿಮ ದರ್ಶನಕ್ಕೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ.

ದಕ್ಷಿಣ ಭಾರತದ ಚಿತ್ರರಂಗಕ್ಕೆ ಮಾತ್ರವಲ್ಲದೆ ಉತ್ತರ ಭಾರತದ ಹಿಂದಿ ಚಿತ್ರರಂಗ ಒಳಗೊಂಡಂತೆ ಸುಮಾರು 50 ಸಾವಿರ ಗೀತೆಗಳನ್ನು ಹಾಡಿರುವ ಎಸ್. ಬಿ. ಬಾಲಸುಬ್ರಹ್ಮಣ್ಯಂ ನಿನ್ನೆ ಮಧ್ಯಾಹ್ನ 1 ಗಂಟೆ ಸುಮಾರಿನಲ್ಲಿ ನಿಧನರಾಗಿದ್ದಾರೆ.

ಕೊರೋನಾ ಸೋಂಕಿನಿಂದ 2 ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಗಾಯಕ ಚಿಕಿತ್ಸೆ ಫಲಕಾರಿಯಾಗಿದೆ ನಿಧನರಾಗಿರುವುದು ಅಪಾರ ಸಂಖ್ಯೆ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ.

Comments are closed.