ನವದೆಹಲಿ: ಮೊರಟೋರಿಯಂ ಅವಧಿಯಲ್ಲಿನ ಬಡ್ಡಿ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವುದಾಗಿ ಕೇಂದ್ರ ಸರ್ಕಾರ ಇಂದು ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
ಆದರೆ ಇದು 2 ಕೋಟಿ ರೂಪಾಯಿವರೆಗಿನ ಸಾಲಕ್ಕೆ ಮಾತ್ರ ಅನ್ವಯ. ಸುಪ್ರೀಂ ಕೋರ್ಟ್ಗೆ ಕೇಂದ್ರ ಸರ್ಕಾರ ಸಲ್ಲಿಸಿದ ಅಫಿಡವಿಟ್ ಪ್ರಕಾರ, ಎಲ್ಲ ಕೆಟಗರಿಗಳ ಸಾಲಗಳನ್ನೂ ಈ ವ್ಯಾಪ್ತಿಗೆ ತರಲಾಗುವುದಿಲ್ಲ. ಒಂದೊಮ್ಮೆ ಎಲ್ಲ ಸಾಲಗಳ ಬಡ್ಡಿ ಮೇಲಿನ ಬಡ್ಡಿಯನ್ನು ಮನ್ನಾ ಮಾಡಿದರೆ ಬ್ಯಾಂಕ್ಗಳ ಮೇಲಿನ ಹೊರೆ ಹೆಚ್ಚಾಗಿ, ಅವುಗಳ ಅಸ್ತಿತ್ವಕ್ಕೆ ತೊಂದರೆಯಾದೀತು ಎಂಬ ಅಂಶದ ಉಲ್ಲೇಖವಿದೆ. ಆದರೆ, ಅನಿವಾರ್ಯ ಸಂದರ್ಭ, ಸನ್ನಿವೇಶದಲ್ಲಷ್ಟೇ ಬಡ್ಡಿ ಮನ್ನಾ ಮಾಡುವ ಆಯ್ಕೆಯ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಬಲ್ಲದು. ಈ ಸಂಬಂಧ ನಿರ್ಣಯ ತೆಗೆದುಕೊಂಡರೆ ಅದಕ್ಕೆ ಸಂಸತ್ತಿನ ಅಂಗೀಕಾರವೂ ಬೇಕಾಗುತ್ತದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಿದೆ.
ಕಿರು, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮ( ಎಂಎಸ್ಎಂಇ), ಶಿಕ್ಷಣ ಸಾಲ, ಮನೆಸಾಲ, ಗ್ರಾಹಕ ಉತ್ಪನ್ನದ ಸಾಲ, ಕ್ರೆಡಿಟ್ ಕಾರ್ಡ್ ಸಾಲ, ವಾಹನ ಸಾಲ, ವೈಯಕ್ತಿಕ ಮತ್ತು ವೃತ್ತಿಪರ ಹಾಗೂ ಗ್ರಾಹಕಬಳಕೆ ಸಾಲ ಸೇರಿ ಎಂಟು ಸೆಕ್ಟರ್ಗಳ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವುದಕ್ಕೆ ಅವಕಾಶವಿದೆ. ಬ್ಯಾಂಕುಗಳು ಎಷ್ಟರಮಟ್ಟಿಗೆ ಹೊರೆಯನ್ನು ಹೊರುವುದಕ್ಕೆ ಶಕ್ಯವಾಗಿದೆ ಎಂಬುದನ್ನು ಆಧರಿಸಿ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
Comments are closed.