ಕರ್ನಾಟಕ

ಅಕ್ಟೋಬರ್​ 31ರ ಬಳಿಕ ಶಾಲಾ,ಕಾಲೇಜು ಆರಂಭಕ್ಕೆ ದೆಹಲಿ ಸರ್ಕಾರ ಚಿಂತನೆ

Pinterest LinkedIn Tumblr

(ಕಡತ ಚಿತ್ರ)

ನವದೆಹಲಿ: ಕೊರೋನಾ ನಡುವೆ ಶಾಲೆ ಪ್ರಾರಂಭಿಸುವ ವಿಷಯದಲ್ಲಿ ಚರ್ಚೆ ನಡೆಯುತ್ತಿದ್ದು, ಗೊಂದಲ ವಿರುವ ಕಾರಣ ಯಾವ ತೀರ್ಮಾನ ತೆಗೆದುಕೊಂಡಿಲ್ಲ‌ ಎಂದು ಸ್ವತಃ ರಾಜ್ಯ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಆದರೆ ಈ ಮಧ್ಯೆ ಶಾಲೆಗಳನ್ನು ಪುನಃ ಆರಂಭಿಸುವ ಕುರಿತು ದೆಹಲಿ ಸರ್ಕಾರ ತನ್ನ ನಿಲುವನ್ನು ಪ್ರಕಟಿಸಿದೆ.

ಅಕ್ಟೋಬರ್​ 15ರ ಬಳಿಕ ಶಾಲೆಗಳನ್ನು ತೆರೆಯಲು ನಿರ್ಧರಿಸಬಹುದು ಎಂದು ಈ ಹಿಂದೆ ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದ ಬಳಿಕ ಶಾಲೆಗಳ ಆರಂಭ ಕುರಿತು ಎಲ್ಲ ರಾಜ್ಯಗಳಲ್ಲಿ ಚಿಂತನೆ ಶುರುವಾಗಿತ್ತು.

ಕರ್ನಾಟಕದಲ್ಲೂ ಶಾಲೆ ಶುರು ಮಾಡಬೇಕೋ ಬೇಡವೋ ಎಂಬ ಬಗ್ಗೆ ಈಗಾಗಲೇ ಗೊಂದಲ ಏರ್ಪಟ್ಟಿತ್ತು. ಬಹಳಷ್ಟು ಪಾಲಕರು ಸದ್ಯಕ್ಕೆ ಶಾಲೆಗಳನ್ನು ತೆರೆಯುವುದು ಬೇಡ ಎಂಬ ಸಲಹೆಗಳನ್ನು ನೀಡಿದ್ದರು. ಜೊತೆಗೆ ಬಹುತೇಕ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಿದ್ಧರಿಲ್ಲ, ಕೋವಿಡ್ -19 ಅಪಾಯ ಸಂಪೂರ್ಣ ಮುಗಿಯುವವರೆಗೆ ಶಾಲೆಗೆ ಕಳುಹಿಸಲು ಪೋಷಕರು ಸಿದ್ಧರಿಲ್ಲ ಎಂಬ ಅಭಿಪ್ರಾಯ ಕೇಳಿ ಬಂದಿತ್ತು.

ಇದೇ ವೇಳೆ ಶನಿವಾರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ತೊಳಸಿಗೆರೆ ಗ್ರಾಮದಲ್ಲಿ ಮಾತನಾಡಿದ ಶಿಕ್ಷಣ ಸಚಿವರು ಶಾಲೆಗಳನ್ನು ಪ್ರಾರಂಭಿಸುವ ಕುರಿತು ಯಾವುದೇ ತೀರ್ಮಾನವನ್ನು ಕೇಂದ್ರ ತೆಗೆದಿಕೊಂಡಿಲ್ಲ. ಸದ್ಯಕ್ಕೆ ಶಾಲೆಗಳು ತೆರೆಯುವುದಿಲ್ಲ.ಈ ಬಗ್ಗೆ ಶಿಕ್ಷಣ ಇಲಾಖೆಯಿಂದ ಯಾವುದೇ ತೀರ್ಮಾನ ಮಾಡಿಲ್ಲ ಎಂದು ಹೇಳಿದ್ದರು.

ಆದರೆ ಇದೀಗ ಶಾಲೆಗಳನ್ನು ಪುನಃ ಆರಂಭಿಸುವ ಕುರಿತು ದೆಹಲಿ ಸರ್ಕಾರ ತನ್ನ ನಿಲುವನ್ನು ಪ್ರಕಟಿಸಿದೆ. ದೆಹಲಿಯಲ್ಲಿ ಸರ್ಕಾರಿ ಹಾಗೂ ಖಾಸಗಿಯ ಎಲ್ಲ ಶಾಲೆಗಳು ಅಕ್ಟೋಬರ್​ 31ರ ವರೆಗೂ ಮುಚ್ಚಿರಲಿವೆ. ಈ ಬಗ್ಗೆ ಸದ್ಯದಲ್ಲೇ ಆದೇಶ ಹೊರಡಿಸಲಾಗುವುದು ಎಂದು ಅಲ್ಲಿನ ಶಿಕ್ಷಣ ಸಚಿವ ಮನಿಷ್ ಸಿಸೋಡಿಯಾ ಸುದ್ದಿಗಾರರಿಗೆ ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Comments are closed.