ಕರಾವಳಿ

ಉಡುಪಿಯ ಮನೆಯೊಂದರಲ್ಲಿ ಸಂಗ್ರಹಿಸಿದ್ದ ಗಾಂಜಾ, ಗೋವಾ ಮದ್ಯ ವಶ…!

Pinterest LinkedIn Tumblr

ಉಡುಪಿ: ಮನೆಯೊಂದರ ಮೇಲೆ ದಾಳಿ ನಡೆಸಿದ ಅಬಕಾರಿ ಇಲಾಖೆಯವರು ಅಕ್ರಮವಾಗಿ ಸಂಗ್ರಹಿಸಿದ್ದ ಗಾಂಜಾ ಮತ್ತು ಗೋವಾ ಮಧ್ಯವನ್ನು ವಶಕ್ಕೆ ಪಡೆದಿದ್ದಾರೆ.

ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರ ಮಾರ್ಗದರ್ಶನದಂತೆ, ಉಡುಪಿ ಜಿಲ್ಲೆಯ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್ ಇವರ ನಿರ್ದೇಶನದ ಮೇರೆಗೆ ಜಿಲ್ಲೆಯ ಅಬಕಾರಿ ಉಪ ಅಧೀಕ್ಷಕರು ಹಾಗೂ ಉಡುಪಿ ವಲಯ-2 ರ ಅಬಕಾರಿ ನಿರೀಕ್ಷಕರು, ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳು ಉಡುಪಿ ತಾಲೂಕಿನ ಪುತ್ತೂರು ಗ್ರಾಮದ ವಾಸುಕಿ ನಗರದ ಗಣೇಶ್ ನಾಯಕ್, ಲಕ್ಷ್ಮೀ ವೆಂಕಟೇಶ ಸದನ ಸಂತೆಕಟ್ಟೆ ಎಂಬುವವರ ಮನೆ ಮೇಲೆ ದಾಳಿ ನಡೆಸಿ, ಅಕ್ರಮವಾಗಿ ಸಂಗ್ರಹಿಸಿದ್ದ 150 ಗ್ರಾಂ. ಗಾಂಜಾ ಮತ್ತು ಗೋವಾ ರಾಜ್ಯದ 12 ಲೀ. ಇಂಪೀರಿಯಲ್ ಬ್ಲೂ ವಿಸ್ಕಿ ವಶಪಡಿಸಿಕೊಂಡು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಉಡುಪಿ ವಲಯದ ಅಬಕಾರಿ ನಿರೀಕ್ಷಕರ ಪ್ರಕಟಣೆ ತಿಳಿಸಿದೆ.

 

Comments are closed.