ಹೃದಯವನ್ನು ಆರೋಗ್ಯವಾಗಿಡಲು ನಾವು ಬಹಳ ಕಾಳಜಿ ವಹಿಸಬೇಕು. ಹೃದಯದ ಯಾವುದೇ ಕಾಯಿಲೆಗಳು ಬಂದ ಮೇಲೆ ಕಾಳಜಿ ವಹಿಸುವ ಬದಲು, ಖಾಯಿಲೆ ಬರದಂತೆ ತಡೆಯುವುದು ಬಹಳ ಮುಖ್ಯ. ಹಾಗೆ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಇಲ್ಲಿವೆ ಕೆಲವು ಸೂಕ್ತ ಸಲಹೆಗಳು.
ಒಣ ಕಾರ್ಜುರ ಹಾಗೂ ಬಾದಾಮಿಯನ್ನು ಹಾಲಿನಲ್ಲಿ ಅರೆದು ಜೇನುತುಪ್ಪ ಸೇರಿಸಿ ಪ್ರತಿನಿತ್ಯ ಎರಡು ಚಮಚದಷ್ಟು ಸೇವಿಸಿದರೆ ದೇಹದಲ್ಲಿ ರಕ್ತ ವೃದ್ಧಿಯಾಗುತ್ತದೆ. ಇನ್ನು ಕುಂಬಳಕಾಯಿ ಪಲ್ಯ ಅಥವಾ ಕುಂಬಳಕಾಯಿ ಬಳಸಿ ಮಾಡಿರುವ ಸಾಂಬಾರು ಸೇವಿಸುವುದರಿಂದ ಹೃದಯದ ಸಾಮರ್ಥ್ಯ ಹೆಚ್ಚುತ್ತದೆ. ನಿಂಬೆ ಹಣ್ಣನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ ಅದಕ್ಕೆ ಉಪ್ಪು ಸೇರಿಸಿ ಬಿಸಿಲಿನಲ್ಲಿ ಚನ್ನಾಗಿ ಒಣಗಿಸಿ ಪುಡಿಮಾಡಿ ಇಟ್ಟುಕೊಂಡು ಈ ಪುಡಿಯನ್ನು ಪ್ರತಿ ದಿನ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಹೃದ್ರೋಗದಿಂದ ದೂರವಿರಬಹುದು.
ಪ್ರತಿ ದಿನದ ಆಹಾರದಲ್ಲಿ ಮೆಂತೆ ಸೊಪ್ಪನ್ನ ಬಳಸುವುದರಿಂದ ಹೃದಯ ಮತ್ತು ಶ್ವಾಸಕೋಶಗಳಿಗೆ ಸಂಬಂಧಿಸಿದ ಕಾಯಿಲೆಗಳಿಂದ ದೂರ ಉಳಿಯಬಹುದು. ಮೆಂತೆ ಸೊಪ್ಪಿನ ಸತತ ಸೇವನೆಯಿಂದ ಮೆದುಳಿಗೆ ಸಂಬಂಧಿಸಿದ ಖಾಯಿಲೆಗಳು ದೂರವಾಗುತ್ತವೆ. ನಮ್ಮ ಅಂಗೈಯಲ್ಲೇ ನಾನಾ ಸಮಸ್ಯೆಗಳಿಗೆ ಔಷಧಿಗಳಿವೆ ಆದ್ರೆ ರೋಗಗಳು ಬಂದಾಗ ಪರಿಹಾರ ಕಂಡುಕೊಳ್ಳುವ ಮೊದಲು ರೋಗಗಳೇ ಬರದಂತೆ ಆರೋಗ್ಯವನ್ನು ವೃದ್ಧಿಸಿಕೊಳ್ಳುವುದು ಉತ್ತಮ.
Comments are closed.