ಕರಾವಳಿ

ಇಂಟ್ರೋಡಕ್ಷನ್ ಸಾಂಗ್ ಮೂಲಕ ಧೂಳೆಬ್ಬಿಸಿದ ಭರ್ಜರಿ ಚಿತ್ರ “ಪೊಗರು” ಶೀಘ್ರದಲ್ಲೇ ಬಿಡುಗಡೆ!

Pinterest LinkedIn Tumblr

ಬೆಂಗಳೂರು : ನಂದಕಿಶೋರ್ ನಿರ್ದೇಶನದಲ್ಲಿ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ನಿರ್ಮಾಣ ವಾಗಿರುವ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷಿತ “ಪೊಗರು” ಚಿತ್ರ ಬಿಡುಗಡೆಗೆ ರೆಡಿಯಾಗಿದ್ದು, ಡಿಸೆಂಬರ್‌ ತಿಂಗಳಿನಲ್ಲಿ ಬಿಡುಗಡೆಗೊಳಿಸಲು ಚಿತ್ರ ತಂಡ ತೀರ್ಮಾನಿಸಿದೆ.

ದೊಡ್ಡ ಮಾರುಕಟ್ಟೆ ಸೃಷ್ಟಿಸುವ ಸಲುವಾಗಿ ನಿರ್ದೇಶಕರ ನಂದ ಕಿಶೋರ್ ದ್ವಿಭಾಷೆಯಲ್ಲಿ ಚಿತ್ರವನ್ನು ರೆಡಿ ಮಾಡಿದ್ದಾರೆ. ಟಾಲಿವುಡ್ ಅಭಿಮಾನಿಗಳು ಮಾಸ್ ಚಿತ್ರವನ್ನು ಹೆಚ್ಚು ಇಷ್ಟ ಪಡುವುದರಿಂದ ತೆಲುಗಿನಲ್ಲೂ ಈ ಚಿತ್ರದ ಬಿಡುಗಡೆಗೆ ಚಿತ್ರ ತಂಡ ಮುಂದಾಗಿದೆ.

ಅಭಿಮಾನಿಗಳಿಗೆ ಎನರ್ಜಿ ಕೊಡಲು ಪೊಗರು ಚಿತ್ರತಂಡೆ ಬಿಡುಗಡೆ ಮಾಡಿರುವ ಭರ್ಜರಿ ಇಂಟ್ರೊಡಕ್ಷನ್​ ಹಾಡು ಎಲ್ಲೆಡೆ ಧೂಳ್ ಎಬ್ಬಿಸಿದೆ. ಕೇವಲ ಈ ಒಂದು ಸಾಂಗ್ ನಿಂದ ರಾಜ್ಯ ಮಾತ್ರವಲ್ಲದೇ ನೆರೆ ರಾಜ್ಯಗಳಲ್ಲೂ ಸದ್ದು ಮಾಡ್ತಿರೋ ಸಿನಿಮಾ ಪೊಗರು.. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಈ ಸಿನಿಮಾ ಮೇಕಿಂಗ್ ನಿಂದಲೇ ಸಖತ್ ಸೌಂಡು ಮಾಡುತ್ತಿದೆ. ಚಿತ್ರದಲ್ಲಿ ಧ್ರುವ ಸರ್ಜಾ ಲುಕ್ ಖರಾಬಾಗಿದ್ದು, ಈ ಸಿನಿಮಾ ಗಲ್ಲಾಪೆಟ್ಟಿಗೆ ದೋಚುವ ಎಲ್ಲ ಲಕ್ಷಣಗಳೂ ದಟ್ಟವಾಗಿ ಕಾಣುತ್ತಿವೆ.

ಚಿತ್ರ ತಂಡ ಈ ಹಾಡಿಗಾಗಿ ಎಚ್​ಎಂಟಿಯಲ್ಲಿ ಅದ್ದೂರಿ ವೆಚ್ಚದ ಸೆಟ್​ ನಿರ್ಮಾಣ ಮಾಡಿತ್ತು ಆ ಸೆಟ್​ನ ವೆಚ್ಚವೇ ಬರೋಬ್ಬರಿ ಒಂದೂವರೆ ಕೋಟಿ ಆಗಿತ್ತಂತೆ. ಖರಾಬು…. ಪೊಗರು ಅಣ್ಣನಿಗೆ ಪೊಗರು.. ಸಾಹಿತ್ಯವುಳ್ಳ ಹಾಡಿಗೆ ಮುರಳಿ ಮಾಸ್ಟರ್ ಸ್ಟೆಪ್​ ಹೇಳಿಕೊಟ್ಟಿದ್ದಾರೆ.

ಈಗಾಗಲೇ ಪೊಗರು ಚಿತ್ರದ “ಖರಾಬು” ಹಾಡು ಕನ್ನಡದ ಜತೆಗೆ ತೆಲುಗಿನಲ್ಲೂ ಮೋಡಿ ಮಾಡಿದೆ. ಮಿಲಿಯನ್​ಗಟ್ಟಲೇ ಜನರಿಂದ ವೀಕ್ಷಣೆ ಪಡೆದಿದೆ. ರಶ್ಮಿಕಾ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಧನಂಜಯ್​, ಮಯೂರಿ, ರವಿಶಂಕರ್​, ಚಿಕ್ಕಣ್ಣ ಸೇರಿ ಹಲವು ಸ್ಟಾರ್​ ಕಲಾವಿದರ ದಂಡೇ ಇದೆ.

Comments are closed.