ನವದೆಹಲಿ: ಉತ್ತರ ಪ್ರದೇಶ ಪೊಲೀಸರಿಗೆ ಹತ್ರಾಸ್ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಪತ್ರ ಬರೆದು, ಸಹೋದರ ಮತ್ತು ಅಮ್ಮನೇ ಸಂತ್ರಸ್ತೆಯನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದಾನೆ.
ನಾಲ್ವರೂ ಆರೋಪಿಗಳೂ ಈ ಪತ್ರಕ್ಕೆ ಸಹಿ ಹಾಕಿದ್ದು, ಈ ಹತ್ಯೆ ಪ್ರಕರಣದಲ್ಲಿ ತಮ್ಮ ಪಾತ್ರ ಏನೂ ಇಲ್ಲ, ಆದರೂ ಸಹ ನಮ್ಮನ್ನು ವಿನಾ ಕಾರಣ ಈ ಪ್ರಕರಣದಲ್ಲಿ ಸುಳ್ಳು ಆರೋಪಗಳೊಂದಿಗೆ ಸಿಲುಕಿಸಲಾಗುತ್ತಿದೆ ಎಂದು ಪತ್ರದಲ್ಲಿ ಬರೆದಿದ್ದಾರೆ.
ಸಂದೀಪ್, ರಾಮು, ಲವಕುಶ್ ಹಾಗೂ ರವಿ ಅವರುಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪತ್ರ ಬರೆದಿದ್ದು, ಹೆಬ್ಬೆಟ್ಟು ಹಾಕಿದ್ದಾರೆ.
ಸಂತ್ರಸ್ತೆಯ ಪರಿಚಯ ನನಗೆ ಇತ್ತು. ಆಕೆಯೊಂದಿಗೆ ದೀರ್ಘಕಾಲದಿಂದಲೂ ಸಂಪರ್ಕದಲ್ಲಿದ್ದೆ. ಆದರೆ ಈ ಕೊಲೆ ಅಥವಾ ಅತ್ಯಾಚಾರವನ್ನು ನಾನು ಮಾಡಿಲ್ಲ. ನಾನು ಸಂತ್ರಸ್ತ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿಲ್ಲ. ಆಕೆಯ ಸಾವಿಗೆ ಆಕೆಯ ಸಹೋದರ ಹಾಗೂ ತಾಯಿಯೇ ಕಾರಣ, ತನ್ನ ವಿರುದ್ಧ ಸುಳ್ಳು ಆರೋಪಗಳನ್ನು ದಾಖಲಿಸಲಾಗಿದೆ ಎಂದು ಆರೋಪಿ ಸಂದೀಪ್ ಪತ್ರದಲ್ಲಿ ತಿಳಿಸಿದ್ದಾನೆ.
Comments are closed.