ಚಿತ್ರದುರ್ಗ: 36 ಲಕ್ಷ ರೂಪಾಯಿ ಹಣ ಕಳವಾದ ಕಟ್ಟಡದ ಹಿಂಭಾಗದ ಜಮೀನಿನಲ್ಲೇ ಪತ್ತೆಯಾದ ಘಟನೆ ಚಳ್ಳಕೆರೆ ತಾಲೂಕಿನ ತಳುಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಜಾಲಿಗಿಡದ ಪೊದಯ ಸಮೀಪ 50,100, 500 ಹಾಗೂ 2 ಸಾವಿರ ಮುಖಬೆಲೆಯ ಹಣದ ಕಂತೆ ಸಿಕ್ಕಿದೆ.
ಇಲ್ಲಿನ ರಾ. ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ದಿಲೀಪ್ ಬಿಲ್ಡ್ಕಾನ್ ಕಂಪನಿಯಲ್ಲಿ ಮೂರು ದಿನಗಳ ಹಿಂದೆ ಕಟ್ಟಡದ ಕ್ಯಾಶ್ ರೂಂ ಮೇಲಿನ ಶೀಟ್ ಮುರಿದು ಒಳ ಪ್ರವೇಶಿಸಿ ಕಳ್ಳತನ ಮಾಡಲಾಗಿತ್ತು.
ಈ ಸಂಬಂಧ ತಳಕು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಗುರುವಾರ ಬೆಳಗ್ಗೆ ಹಣ ಕಂಪನಿಯ ಹಿಂಭಾಗದ ಜಮೀನಿನ ಬೇಲಿ ಪಕ್ಕದಲ್ಲಿ ಹಣ ಪತ್ತೆಯಾಗಿದೆ. ಕಳ್ಳತನ ಮಾಡಿದವರೆ ಹಣವನ್ನು ಇಲ್ಲಿ ಎಸೆದು ಹೋಗಿರಬಹುದು ಎಂದು ಅಂದಾಜಿಸಲಾಗಿದೆ.
Comments are closed.