ಗ್ರಾಮೀಣ ಜನರಿಗೆ ಹೆಚ್ಚು ಚಿರಪರಿಚಿತವಾಗಿರುವಂತ ಈ ಹಣ್ಣು ಹತ್ತಾರು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಮಧುಮೇಹಿಗಳಿಗೆ ವರದಾನವಾಗಿದೆ ಈ ಬೇಲದಹಣ್ಣು. ಸಾಮಾನ್ಯವಾಗಿ ಇದರಲ್ಲಿರುವಂತ ಆರೋಗ್ಯಕಾರಿ ಲಾಭಗಳೇನು ಅನ್ನೋದನ್ನ ತಿಳಿಯೋಣ.
ಈ ಹಣ್ಣನ್ನು ಬಾಲ್ಯದಲ್ಲಿ ಬಹಷ್ಟು ಜನರು ಸೇವನೆ ಮಾಡಿರುತ್ತಾರೆ ಇದರಲ್ಲಿ ಜ್ಞಾಪಕ ಶಕ್ತಿಯನ್ನು ವೃದ್ಧಿಸುವಂತ ಗುಣಗಳಿವೆ. ಬೇಲದ ಹಣ್ಣಿನಲ್ಲಿ ವಿಟಮಿನ್ ಸಿ ಅಂಶವನ್ನು ಹೆಚ್ಚ್ಚಾಗಿ ಕಾಣಬಹುದಾಗಿದೆ ಹಾಗೂ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ . ದೇಹಕ್ಕೆ ವಿಟಮಿನ್ ಸಿ ಕೊರತೆ ಇದ್ರೆ ಈ ಹಣ್ಣಿನಿಂದ ಇದರ ಲಾಭಗಳನ್ನು ಪಡೆಯಬಹುದಾಗಿದೆ ವಿಟಮಿನ್ ಸಮಸ್ಯೆ ನಿವಾರಣೆಯ ಜೊತೆಗೆ ದೇಹಕ್ಕೆ ರೋಗಗಳು ಬೇಗನೆ ಅಂಟದಂತೆ ತಡೆಗಟ್ಟುವುದು.
ಮಧುಮೇಹಿಗಳು ಅಂದರೆ ಸಕ್ಕರೆ ಕಾಯಿಲೆ ಇರೋರು ಈ ಹಣ್ಣು ಸೇವನೆ ಮಾಡುವುದರಿಂದ ದೇಹದಲ್ಲಿನ ಅಂದರೆ ರಕ್ತದ ಕಣಗಳಲ್ಲಿ ರು ವಂತ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ ಆದ್ದರಿಂದ ಮಧುಮೇಹಿಗಳಿಗೆ ಉತ್ತಮ ಹಣ್ಣಾಗಿದೆ. ಇನ್ನು ಮಲಬದ್ಧತೆ ಸಮಸ್ಯೆ ಇರೋರು ಕೂಡ ಈ ಹಣ್ಣಿನ ಲಾಭವನ್ನು ಪಡೆಯಬಹುದಾಗಿದೆ, ದೇಹದ ಸಮತೋಲನವನ್ನು ಕಾಪಾಡುವ ಜೊತೆಗೆ ಅಜೀರ್ಣತೆ ಸಮಸ್ಯೆ ನಿವಾರಣೆ ಯನ್ನು ಮಾಡುವುದು.
ಬೇಲದಹಣ್ಣಿನಲ್ಲಿರುವಂತ ರಂಜಕಾಂಶ ಮೆದುಳಿನ ಕಾರ್ಯ ಕ್ಷಮತೆಯನ್ನು ಹೆಚ್ಚಿಸುವುದು, ಅಷ್ಟೇ ಅಲ್ಲದೆ ಅಸಿಡಿಟಿ ಹೊಟ್ಟೆಯ ಅಲ್ಸರ್ ಗಳನ್ನು ತಡೆಗಟ್ಟುತ್ತದೆ. ಹೀಗೆ ಹತ್ತಾರು ಲಾಭಗಳನ್ನು ಈ ಬೆಳದ ಹಣ್ಣಿನಿಂದ ಪಡೆಯಬಹುದಾಗಿದೆ.
Comments are closed.