ಕರಾವಳಿ

ಕಾಂಗ್ರೆಸ್ ಯುವನಾಯಕ ಮಿಥುನ್‌ರೈಯಿಂದ ನಾಥ ಸಂಪ್ರದಾಯಕ್ಕೆ ಅಪಮಾನ : ಆರೋಪ-ಖಂಡನೆ

Pinterest LinkedIn Tumblr

ಮಂಗಳೂರು: ದ.ಕ.ಜಿಲ್ಲೆಯ ಕಾಂಗ್ರೆಸ್ ಯುವ ನಾಯಕ ಮಿಥುನ್ ರೈ ಪ್ರಚಾರದ ತೆವಳಿಗಾಗಿ ಉ.ಪ್ರ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಆಡುವ ಮೂಲಕ ನಿಂದನೆ ಮಾಡುತ್ತಿದ್ದಾರೆ ಎಂದು ದ.ಕ. ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಜನಾರ್ದನ ಅರ್ಕುಳ ಅವರು ವ್ಯಂಗ್ಯವಾಡಿದ್ದಾರೆ.

ಉ.ಪ್ರ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹಾಗೂ ಮಂಗಳೂರಿನ ಕದ್ರಿ ಜೋಗಿ ಮಠಕ್ಕೆ ಹಲವಾರು ವರ್ಷಗಳ ಧಾರ್ಮಿಕ ನಂಟು ಇದೆ. ಆದರೆ ಕೇವಲ ಪ್ರಚಾರದ ತೆವಳು ಮತ್ತು ಒಂದು ಸಮುದಾಯ ಓಲೈಕೆಗಾಗಿ ಹವಣಿಸುತ್ತಿರುವ ಇಲ್ಲಿನ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಮಿಥುನ್ ರೈ ಸಿಎಂ ಯೋಗಿ ಅವರನ್ನು ಏಕವಚನದಲ್ಲಿ ನಿಂದಿಸಿ, ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದಾರೆ.

ಸಿಎಂ ಯೋಗಿ ಮಂಗಳೂರಿಗೆ ಬಂದರೆ ಅವರ ಮುಖಕ್ಕೆ ಮಸಿ ಬಳಿಯುತ್ತೇನೆ ಎಂಬ ಅವರ ಹೇಳಿಕೆ ತೀರಾ ಬಾಲಿಶತನ ಮತ್ತು ಅವಿವೇಕತನದಿಂದ ಕೂಡಿದೆ. ಇಂತಹ ಹೇಳಿಕೆ ಸಮಸ್ತ ಹಿಂದೂ ಸಮಾಜ ಮತ್ತು ನಾಥ ಸಂಪ್ರದಾಯಕ್ಕೆ ಮಾಡಿದ ಅಪಮಾನ. ಈ ಹೇಳಿಕೆ ಖಂಡನೀಯವಾಗಿದ್ದು, ಮುಂದಿನ ದಿನಗಳಲ್ಲಿ ಸಮಸ್ತ ಜಾಗೃತ ಹಿಂದೂ ಸಮಾಜ ಇದಕ್ಕೆ ತಕ್ಕ ಪಾಠ ಕಲಿಸಲಿದೆ ಎಂದು ಜನಾರ್ಧನ ಅರ್ಕುಳ ಅವರು ಎಚ್ಚರಿಸಿದ್ದಾರೆ.

Comments are closed.