ಕರ್ನಾಟಕ

ಬಿ.ಎಸ್.ವೈ ಸಂಪುಟದಲ್ಲಿ ಮೇಜರ್ ಸರ್ಜರಿ: ಮೂವರು ಸಚಿವರ ಖಾತೆ ಬದಲಾವಣೆ..!

Pinterest LinkedIn Tumblr

ಬೆಂಗಳೂರು: ಆರೋಗ್ಯ ಇಲಾಖೆ ಸಮನ್ವಯದ ಸಮಸ್ಯೆಗೆ ಸಿಎಂ ಯಡಿಯೂರಪ್ಪ ಕೊನೆಗೂ ಪರಿಹಾರ ಕಂಡು ಹಿಡಿದಿದ್ದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್‌ಗೆ ಶ್ರೀ ರಾಮುಲು ಬಳಿ ಇರುವ ಆರೋಗ್ಯ ಇಲಾಖೆ ಜವಾಬ್ದಾರಿ ವಹಿಸಲಾಗಿದೆ. ಶ್ರೀರಾಮುಲು ಅವರಿಗೆ ಸಮಾಜ ಕಲ್ಯಾಣ ಇಲಾಖೆ ಜವಾಬ್ದಾರಿ ನೀಡಲು ನಿರ್ಧರಿಸಲಾಗಿದೆ. ಬದಲಾವಣೆ ಸಂಬಂಧ ಇಂದು ಅಧಿಕೃತ ಆದೇಶ ಹೊರ ಬೀಳಲಿದೆ.

ಇನ್ನು ಮುಂದೆ ಡಾ. ಸುಧಾಕರ್ ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಖಾತೆಗಳನ್ನು ನಿಭಾಯಿಸಲಿದ್ದಾರೆ. ಶ್ರೀರಾಮುಲು ಸಮಾಜ ಕಲ್ಯಾಣ ಇಲಾಖೆ ನಿಭಾಯಿಸಲಿದ್ದಾರೆ.

ಇನ್ನು ಸಚಿವ ಗೋವಿಂದ ಕಾರಜೋಳ ಅವರಿಂದ ಸಮಾಜ ಕಲ್ಯಾಣ ಖಾತೆ ವಾಪಾಸ್ ಪಡೆದು ಕೇವಲ ಅವರಿಗೆ ಲೋಕೋಪಯೋಗಿ ಖಾತೆ ಮಾತ್ರವೇ ಉಳಿಸಲಾಗಿದೆ.

Comments are closed.