ಕರಾವಳಿ

ತುಳು ಚಿತ್ರ ನಟ, ರೌಡಿ ಶೀಟರ್ ಸುರೇಂದ್ರ ಬಂಟ್ವಾಳ್ ನಿಗೂಢ ಹತ್ಯೆ

Pinterest LinkedIn Tumblr

ಮಂಗಳೂರು / ಬಂಟ್ವಾಳ. ಆಕ್ಟೋಬರ್. 21: ತುಳು ಚಲನಚಿತ್ರ ನಟ, ರೌಡಿ ಶೀಟರ್ ಸುರೇಂದ್ರ ಬಂಟ್ವಾಳ್ ಎಂಬವರನ್ನು ಅಪರಿಚಿತ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದು, ಪ್ರಕರಣ ಇಂದು ಮಧ್ಯಾಹ್ನ ಬೆಳಕಿಗೆ ಬಂದಿದೆ.

ಬಂಟ್ವಾಳದ ಬಂಡಾರಿಬೆಟ್ಟು ನಿವಾಸಿಯಾದ ಸುರೇಂದ್ರ ಬಂಟ್ವಾಳ್ ಬಂಟ್ವಾಳದ ಪ್ಲ್ಯಾಟ್ ವೊಂದರಲ್ಲಿ ವಾಸವಾಗಿದ್ದರು. ಇಂದು ಮಧ್ಯಾಹ್ನ ಸುರೇಂದ್ರ ಬಂಟ್ವಾಳ್ ಅವರ ಮೃತದೇಹ ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದೆ.

(2018ರ ಘಟನೆಯ ಕಡತ ಚಿತ್ರ)

ಬಂಟ್ವಾಳ ತಾಲೂಕಿನ ಬಿ ಸಿ ರೋಡ್ ನಲ್ಲಿನ ಅವರ ಫ್ಲಾಟ್ ನಲ್ಲಿಯೇ ಅಪರಿಚಿತರು ಕಳೆದ ರಾತ್ರಿಯೇ ಹತ್ಯೆ ಮಾಡಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ಆದರೆ ಪ್ರಕರಣ ಬುಧವಾರ ಮಧ್ಯಾಹ್ನ ಬೆಳಕಿಗೆ ಬಂದಿದೆ. ಹಣಕಾಸು ವಿಚಾರಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಈ ಹಿಂದೆ ಹಿಂದುಪರ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಸುರೇಂದ್ರ ಬಂಟ್ವಾಳ್ ಬಳಿಕ ಕಾಂಗ್ರೆಸ್ ಸೇರಿದ್ದರು. ಸುರೇಂದ್ರ ಬಂಟ್ವಾಳ್ ಸವರ್ಣದೀರ್ಘ ಸಂಧಿ ಕನ್ನಡ ಚಿತ್ರ ಸೇರಿದಂತೆ ಒಂದು ತುಳು ಚಲನ ಚಿತ್ರದಲ್ಲಿ ನಟಿಸಿದ್ದಾರೆ.

2018ರ ಜೂನ್‌ನಲ್ಲಿ ಬಡ್ಡಕಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಕತ್ತಿಯಿಂದ ಹಲ್ಲೆ ಮಾಡಿದ ಆರೋಪದ ಮೇಲೆ ಸುರೇಂದ್ರ ಸುದ್ದಿಯಲ್ಲಿದ್ದರು. ಬಂಟ್ವಾಳ ಪೇಟೆಯಲ್ಲಿ ತಲವಾರು ಹಿಡಿದು ಬಿಜೆಪಿ ಕಾರ್ಯಕರ್ತರಿಗೆ ಬೆದರಿಕೆ ಹಾಕಿದ್ದ ಸುರೇಂದ್ರ ಬಂಟ್ವಾಳ್ ವಿಡಿಯೋ ಅಂದು ವೈರಲ್​ ಆಗಿತ್ತು. ಬಳಿಕ ಈ ಪ್ರಕರಣದಲ್ಲಿ ಜೈಲು ಸೇರಿದ್ದ ಸುರೇಂದ್ರ ಬಂಟ್ವಾಳ್, ಜಾಮೀನಿನ ‌ಮೇಲೆ ಹೊರ ಬಂದಿದ್ದರು.

ಪ್ರಸ್ತುತ ನಗರ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿರುವ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Comments are closed.