ಕರಾವಳಿ

ಮಲ್ಪೆಯಲ್ಲಿ ಮೀನುಗಾರರಿಗೆ ಸಿಕ್ಕ ಬಾರೀ ಗಾತ್ರದ ತೊರಕೆ ಮೀನುಗಳು…!

Pinterest LinkedIn Tumblr

ಉಡುಪಿ: ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮೀನುಗಾರರಿಗೆ ಭಾರೀ ಗಾತ್ರದ ಎರಡು ಕೊಂಬಿನ ತೊರಕೆ ಮೀನು (ಸ್ಟಿಂಗ್ ರೇ) ಸಿಕ್ಕಿದೆ‌. ತೊರಕೆ ಮೀನು ಸುಮಾರು 700 ಹಾಗೂ 250 ಕೆ.ಜಿ. ತೂಕದ್ದಾಗಿದೆ.

ಮಲ್ಪೆ ಸುಭಾಶ್​ ಸಾಲಿಯಾನ್ ಅವರು ತಮ್ಮ ನಾಗಸಿದ್ಧಿ ಬೋಟಿನಲ್ಲಿ ಮೀನು ಹಿಡಿಯಲು ತೆರಳಿದ್ದರು. ಅವರು ಸಮುದ್ರದಲ್ಲಿ ಬೀಸಿದ್ದ ಬಲೆಗೆ ಈ ಬೃಹತ್​ ಮೀನು ಬಿದ್ದಿದೆ. ಮೀನನ್ನು ಕ್ರೇನ್​ ಮೂಲಕ ಬೋಟ್​ನಿಂದ ಕೆಳಗಿಳಿಸಲಾಗಿದೆ. ಈ ಮೀನುಗಾರಿಕೆ ವರ್ಷದಲ್ಲಿ ಇಂತಹ ಬೃಹತ್ ಗಾತ್ರದ ತೊರಕೆ ಮೀನು ಇದೇ ಮೊದಲ ಬಾರಿಗೆ ಬಲೆಗೆ ಬಿದ್ದಿದೆ. ಮೀನನ್ನು ನೋಡಲು ಸಾಕಷ್ಟುಜನ ಮಲ್ಪೆ ಬಂದರಿಗೆ ಬಂದಿದ್ದಾರೆ.

ಸದ್ಯ ತೊರಕೆ ಮೀನನ್ನು ಕ್ರೇನ್​ ಮೂಲಕ ಮೇಲೆತ್ತುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

Comments are closed.